newsfirstkannada.com

×

YSR ಕಾಂಗ್ರೆಸ್​​ ನಾಯಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ.. ತುಟಿ ಬಿಚ್ಚದ DCM ಪವನ್​​ ವಿರುದ್ಧ ಭಾರೀ ಆಕ್ರೋಶ

Share :

Published July 18, 2024 at 4:06pm

Update July 18, 2024 at 4:13pm

    ವೈಎಸ್​​ಆರ್​​ ಕಾಂಗ್ರೆಸ್​ ಕೊಲೆಗೆ ಬೆಚ್ಚಿಬಿದ್ದ ಇಡೀ ಆಂಧ್ರಪ್ರದೇಶ

    ಕೊಲೆ ಬೆನ್ನಲ್ಲೇ ಪವನ್​ ಕಲ್ಯಾಣ್​​ ವಿರುದ್ಧ ಭುಗಿಲೆದ್ದ ಆಕ್ರೋಶ..!

    ಇನ್ನೂ ಯಾಕೆ ತುಟಿ ಬಿಚ್ಚಿಲ್ಲ? ಎಂದು ಬಹಿರಂಗ ಅಸಮಾಧಾನ

ಇತ್ತೀಚೆಗೆ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ, ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ನಾಯಕತ್ವದ ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟ ವೈಎಸ್​​ಆರ್​​ ಕಾಂಗ್ರೆಸ್ಸನ್ನು ಹೀನಾಯವಾಗಿ ಸೋಲಿಸಿ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದು ಇನ್ನೂ 2 ತಿಂಗಳು ಕಳೆದಿಲ್ಲ ಆಗಲೇ ದ್ವೇಷದ ರಾಜಕೀಯ ಶುರುವಾಗಿದೆ. ಈ ಹಿಂದೆ ತಮ್ಮನ್ನು ಟಾರ್ಗೆಟ್​ ಮಾಡಿದ್ದ ವೈಎಸ್​ಆರ್​​ ಕಾಂಗ್ರೆಸ್​ ಮೇಲೆ ಟಿಡಿಪಿ ದಾಳಿ ಮುಂದುವರಿಸಿದೆ.

ಇನ್ನು, ಆಂಧ್ರದ ಪಲ್ನಾಡು ಜಿಲ್ಲಾ ವಿನುಕೊಂಡ ಎಂಬಲ್ಲಿ ರಷೀದ್​ ಎಂಬ ವೈಎಸ್​ಆರ್​​ ಕಾಂಗ್ರೆಸ್ ಸ್ಥಳೀಯ ನಾಯಕ​​ನನ್ನು ಟಿಡಿಪಿ ಮುಖಂಡ ಜಿಲಾನಿ ಎಂಬ ಹಂತಕ ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿದ್ದಾನೆ. ಈ ಭೀಕರ ಕೊಲೆಗೆ ಇಡೀ ಆಂಧ್ರಪ್ರದೇಶವೇ ಬೆಚ್ಚಿಬಿದ್ದಿದೆ. ರಷೀದ್​ ಕೊಲೆ ಬಗ್ಗೆ ಇದುವರೆಗೂ ಸಿಎಂ ಚಂದ್ರಬಾಬು ನಾಯ್ಡು ಆಗಲಿ, ಡಿಸಿಎಂ ಪವನ್​ ಕಲ್ಯಾಣ್​ ಆಗಲಿ ತುಟಿ ಬಿಚ್ಚಿಲ್ಲ. ಹಾಗಾಗಿ ಪವನ್​ ಕಲ್ಯಾಣ್​​ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಪವನ್​ ಕಲ್ಯಾಣ್​​ ವಿರುದ್ಧ ಭುಗಿಲೆದ್ದ ಆಕ್ರೋಶ

ಪವನ್ ಕಲ್ಯಾಣ್​ ಅವರೇ ಆಂಧ್ರಪ್ರದೇಶವನ್ನು ಬಿಹಾರ ಮಾಡಲು ಹೊರಟಿದ್ದೀರಾ? ಯಾಕೆ ಇನ್ನೂ ಕೊಲೆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ನಿಮಗೆ ಅಧಿಕಾರ ಕೊಟ್ಟಿದ್ದು ದ್ವೇಷದ ರಾಜಕೀಯ ಮಾಡೋದಕ್ಕಾ? ಅಧಿಕಾರದಲ್ಲಿ ಯಾವುದೇ ಪಕ್ಷ ಇದ್ರೂ ಈ ರೀತಿ ಘಟನೆಗಳ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ರಾಕ್ಷಸ ಕೃತ್ಯ; ಆಂಧ್ರದಲ್ಲಿ ಜಗನ್ ಪಕ್ಷದ ಯುವ ನಾಯಕನ ಕೊಚ್ಚಿ ಕೊಲೆ; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

YSR ಕಾಂಗ್ರೆಸ್​​ ನಾಯಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ.. ತುಟಿ ಬಿಚ್ಚದ DCM ಪವನ್​​ ವಿರುದ್ಧ ಭಾರೀ ಆಕ್ರೋಶ

https://newsfirstlive.com/wp-content/uploads/2024/07/YSR-Congress_Pawan-Kalyan.jpg

Load More