newsfirstkannada.com

×

Train Accident: ದೇಶದಲ್ಲಿ ಮತ್ತೊಂದು ಭೀಕರ ರೈಲು ದುರಂತ.. ಮೃತರ ಸಂಖ್ಯೆ ಏರಿಕೆ; ಹಲವರಿಗೆ ಗಾಯ

Share :

Published July 18, 2024 at 5:13pm

Update July 18, 2024 at 5:16pm

    ಹಳಿ ತಪ್ಪಿದ ಎಕ್ಸ್‌ಪ್ರೆಸ್ ರೈಲಿನ 10ಕ್ಕೂ ಹೆಚ್ಚು ಬೋಗಿಗಳು

    ಗೋಂಡಾ ಬಳಿಯ ಜಿಲಾಹೀ ರೈಲು ನಿಲ್ದಾಣದಲ್ಲಿ ಅನಾಹುತ

    ರಕ್ಷಣಾ ಸಿಬ್ಬಂದಿಗೆ ಉತ್ತರ ಪ್ರದೇಶ ಸಿಎಂ ಮಹತ್ವದ ಸೂಚನೆ

ಉತ್ತರ ಪ್ರದೇಶದ ಗೋಂಡಾ ಬಳಿ ಚಂಡೀಘಡ-ದಿಬ್ರುಘಡ ಎಕ್ಸ್​ಪ್ರೆಸ್​ ರೈಲು ಅವಘಡ ಸಂಭವಿಸಿದೆ. ಎಕ್ಸ್‌ಪ್ರೆಸ್ ರೈಲಿನ 10ಕ್ಕೂ ಹೆಚ್ಚು ಬೋಗಿಗಳು ಹಳಿ ತಪ್ಪಿದ್ದು, ಅಪಘಾತದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಗೋಂಡಾ ಬಳಿಯ ಜಿಲಾಹೀ ರೈಲು ನಿಲ್ದಾಣದಲ್ಲಿ ಈ ಅನಾಹುತ ಸಂಭವಿಸಿದೆ. ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ರೈಲ್ವೆ ಸಿಬ್ಬಂದಿ ಗಾಯಗೊಂಡವರ ರಕ್ಷಣೆಗಾಗಿ ಗೋಂಡಾಗೆ ಧಾವಿಸಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. NDRF ತಂಡ ಕೂಡ ಘಟನಾ ಸ್ಥಳವನ್ನು ತಲುಪಿದೆ.

ಇದನ್ನೂ ಓದಿ: Train Accident: ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ 

ಚಂಡೀಘಡ-ದಿಬ್ರುಘಡ ಎಕ್ಸ್​ಪ್ರೆಸ್​ ರೈಲಿನಲ್ಲಿ ( ಟ್ರೈನ್ ನಂ. 15904) ನೂರಾರು ಪ್ರಯಾಣಿಕರಿದ್ದರು. ರೈಲಿನ 10ಕ್ಕೂ ಹೆಚ್ಚು ಬೋಗಿಗಳು ಹರಿ ತಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಗಾಯಗೊಂಡವರನ್ನ ಕೂಡಲೇ ಚಿಕಿತ್ಸೆ ನೀಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಲು ಅಪಘಾತದ ಬಗ್ಗೆ ರೇಲ್ವೆ ಇಲಾಖೆ ಕೂಡ ಮಾಹಿತಿ ನೀಡಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತ್ವರಿತಗತಿಯ ರಕ್ಷಣಾ ಕಾರ್ಯಾಚರಣೆಗ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Train Accident: ದೇಶದಲ್ಲಿ ಮತ್ತೊಂದು ಭೀಕರ ರೈಲು ದುರಂತ.. ಮೃತರ ಸಂಖ್ಯೆ ಏರಿಕೆ; ಹಲವರಿಗೆ ಗಾಯ

https://newsfirstlive.com/wp-content/uploads/2024/07/train-accident.jpg

Load More