newsfirstkannada.com

×

ಜೈಲೂಟ ಸೇರ್ತಿಲ್ಲ, ಚಾಪೆ ಮೇಲೆ ಮಲಗಕ್ಕಾಗ್ತಿಲ್ಲ ಎಂದ ನಟ ದರ್ಶನ್​​.. ಬಿಗ್​ ಶಾಕ್​ ಕೊಟ್ಟ ಕೋರ್ಟ್​​!

Share :

Published July 19, 2024 at 6:15am

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿಗೆ ಸೇರಿದ ನಟ ದರ್ಶನ್​ ಅಂಡ್​ ಗ್ಯಾಂಗ್​

    ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್​ ಗ್ಯಾಂಗ್​

    ನ್ಯಾಯಮೂರ್ತಿ ಎಸ್​.ಆರ್ ಕೃಷ್ಣಕುಮಾರ್​ರ ಪೀಠದ ಮುಂದೆ ವಕೀಲರ ವಾದ

ನಟ ದರ್ಶನ್​ ಅಂಡ್​ ಗ್ಯಾಂಗ್​ಗೆ ಜೈಲೇ ಗತಿಯಾಗಿದೆ. ಈಗಾಗಲೇ ಜೈಲಿನಲ್ಲಿರುವ ಡಿ ಗ್ಯಾಂಗ್​ಗೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಈ ಮಧ್ಯೆ ಮನೆ ಊಟ ಮತ್ತು ಹಾಸಿಗೆಗಾಗಿ ದರ್ಶನ್​ ಸಲ್ಲಿಸಿದ್ದ ರಿಟ್​ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಿದ್ದು, ವಿಚಾರಣೆ ಮುಂದೂಡಿಕೆ ಆಗಿದೆ. ದರ್ಶನ್​ ಪರಪ್ಪನ ಅಗ್ರಹಾರ ಪಾಲಾಗಿ ಬರೋಬ್ಬರಿ 28 ದಿನಗಳು ಕಳೆದಿವೆ ಒಂದ್ಕಡೆ ಕಣ್ಣಿಗೆ ನಿದ್ದೆಯಿಲ್ಲ. ಮತ್ತೊಂದ್ಕಡೆ ಊಟ ಸೇರ್ತಿಲ್ಲ. ಮನೆ ಊಟವೂ ಸಿಗ್ತಿಲ್ಲ. ಈ ನಡುವೆ ಸೆರೆಮನೆ ವಾಸವೂ ಮುಂದುವರೆಯುತ್ತಲೇ ಇದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಪಾಲಾಗಿರೋ ನಟ ದರ್ಶನ್​ಗೆ ಮತ್ತೊಮ್ಮೆ ಜೈಲೇ ಗತಿಯಾಗಿದೆ. ಕೋರ್ಟ್​ ಮತ್ತೊಮ್ಮೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ಡಿ ಗ್ಯಾಂಗ್​ ನಿನ್ನೆ ವಿಚಾರಣೆಗೆ ಹಾಜರಾಗಿದ್ರು. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೋರ್ಟ್​ ಆಗಸ್ಟ್​ 1ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಮನೆ ಊಟ, ಪುಸ್ತಕ, ಹಾಸಿಗೆಗಾಗಿ ಮನವಿ ಮಾಡಿ ದರ್ಶನ್​ ಸಲ್ಲಿಸಿದ್ದ ರಿಟ್​ ಅರ್ಜಿ ವಿಚಾರಣೆಯನ್ನ ಇವತ್ತು ಹೈಕೋರ್ಟ್​ನಲ್ಲಿ ನಡೆಸಲಾಯ್ತು.

ಇದನ್ನೂ ಓದಿ: ಪುಣೆಯಲ್ಲಿ ಶರದ್ ಪವಾರ್ ಪಕ್ಷದ ನಾಯಕನ ಮಗನಿಂದ ಭೀಕರ ಕಾರು ಅಪಘಾತ; ಈ ಪಟ್ಟಣಕ್ಕೆ ಏನಾಗ್ತಿದೆ..?

ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನ್ಯಾಯಾಮೂರ್ತಿ ಎಸ್​.ಆರ್ ಕೃಷ್ಣಕುಮಾರ್​ರ ಪೀಠದ ಮುಂದೆ ದರ್ಶನ್ ಪರ ಹಿರಿಯ ವಕೀಲರಾದ ಕೆ ಎನ್ ಫಣೀಂದ್ರ. ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಹಾಜರಿದ್ರು. ಈ ವೇಳೆ ಎರಡು ಕಡೆಯ ವರದಿ ಸ್ವೀಕರಿಸಿ ಇಂದು ಮಧಾಹ್ನಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ದರ್ಶನ್​ ಮನವಿ ಪುರಸ್ಕರಿಸದಂತೆ ಸರ್ಕಾರದಿಂದ ಆಕ್ಷೇಪ ಸಲ್ಲಿಸಲಾಗಿದ್ದು, ಸರ್ಕಾರದಿಂದ ಆಕ್ಷೇಪ ಸಲ್ಲಿಸಲು ಕಾರಣವೇನು ಅನ್ನೋ EXCLUSIVE ಮಾಹಿತಿ ನ್ಯೂಸ್ ಫಸ್ಟ್​ಗೆ ಲಭ್ಯವಾಗಿದೆ.

ಸರ್ಕಾರದ ಆಕ್ಷೇಪ ಏನು?

ದರ್ಶನ್ ಅರೆಸ್ಟ್ ಆಗಿ ಜೆಸಿಗೆ ಹೋಗುವ ತನಕ ಯಾವುದೇ ಮೆಡಿಕಲ್​ ಸಮಸ್ಯೆ ಇರಲಿಲ್ಲ ಚೆನ್ನಾಗಿದ್ರು. ಆದ್ರೀಗ ಏಕಾಏಕಿ‌ ಆರೋಗ್ಯ ಸಮಸ್ಯೆ ಆಗ್ತಿದೆ ಅಂತಿದ್ದಾರೆ. ಈಗಲೂ ಸಮಸ್ಯೆ ಇದೆ ಅಂತ ಮೆಡಿಕಲ್ ರೆಕಾರ್ಡ್​ನಲ್ಲಿ ಇಲ್ಲ, ಸುಮ್ಮನೆ ಕೋರ್ಟ್ ಮುಂದೆ ಒರಲ್ ಕಥೆ ಹೇಳ್ತಿದ್ದಾರೆ. ದರ್ಶನ್ ಸಲ್ಲಿಸಿರುವ ಅರ್ಜಿಗೆ ಇಲ್ಲಿ ಮಾನ್ಯತೆಯೇ ಇಲ್ಲ, ಈ ಅರ್ಜಿ ಸಲ್ಲಿಸುವ ಮೊದಲು ಸೆ. 30 Karnataka prisons act ಅಡಿ ಮೊದಲು ಐಜಿ ಬಳಿ ಕೇಳಬೇಕಿತ್ತು. ಅವರ ಮನವಿಯ ಮೇಲೆ ಐಜಿ ರೆಗ್ಯೂಲೇಷನ್ ಮಾಡ್ತಾರೆ. ಆದರೆ ಈ ಪ್ರಕರಣದಲ್ಲಿ ಎಸ್ಪಿ, ಐಜಿಗೆ ಮನವಿಯೇ ಮಾಡಿಲ್ಲ. ಅಷ್ಟೆ ಅಲ್ಲ, ಪ್ರೋಡ್ಯೂಸ್ ಮಾಡಿದಾಗ ಕೋರ್ಟ್​ಗೂ ಮನವಿ ಮಾಡಿಲ್ಲ. ರಿಟ್ ಅರ್ಜಿ ಸಲ್ಲಿಸುವ ಮೊದಲು ಕಾನೂನು ಪ್ರಕ್ರಿಯೆ ಮಾಡಬೇಕು. ಆದರೆ ಅದನ್ನ ಯಾವುದು‌ ಮಾಡದೇ ನೇರವಾಗಿ ಬಂದಿದ್ದಾರೆ. ಮೂಲಭೂತ ಹಕ್ಕು ಉಲ್ಲಂಘನೆ ಆದ್ರೆ ಮಾತ್ರ ರಿಟ್ ಬರುತ್ತೆ. ಹೀಗಾಗಿ ದರ್ಶನ್​ರ ಈ ಅರ್ಜಿ ಊರ್ಜಿತ ಆಗುವುದೇ ಇಲ್ಲ ಎಂದು ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ.

ಇನ್ನೂ, ವಿಚಾರಣೆ ವೇಳೆ ಮನೆ ಊಟ ಮತ್ತು ಬಟ್ಟೆ ನೀಡಲು ಇರುವ ಅವಕಾಶಗಳನ್ನ ಉಲ್ಲೇಖಿಸಲಾಯ್ತು. 1974 ಕರ್ನಾಟಕ ಪ್ರಿಸನ್ ರೂಲ್ಸ್​ನ ಚಾಪ್ಟರ್ 12ರಲ್ಲಿ ಡಯಟ್ರಿನ ಪ್ಲಾನ್ ಇದೆ. ಟ್ರಾಯಲ್ ಪ್ರಿಸನರ್ ಮತ್ತು ನಾನ್ ಟ್ರಾಯಲ್ ಪ್ರಿಸನರ್​ಗೆ ಕೆಲ ಅವಕಾಶ ಇದೆ. ಆರೋಗ್ಯ ಸಮಸ್ಸೆ ಏನಿದೆ ಅನ್ನೋದರ ಮೇಲೆ ನಿರ್ಧಾರ ಮಾಡಲಾಗುತ್ತೆ. ಅದರ ಪ್ರಕಾರ ವಾರದಲ್ಲಿ ಎರಡು ಬಾರಿ ಮಟನ್ ನೀಡಲು ಅವಕಾಶ ಇದೆ. ಆದ್ರೆ, ಸರ್ಕಾರ ಪರ ಎಸ್​ಪಿಪಿ ಹಾಸಿಗೆ ಮತ್ತು ಚಮಚ ನೀಡದಂತೆ ವಾದ ಮಂಡಿಸಿದ್ರು. ಕರ್ನಾಟಕ ಪ್ರಿಸನ್ಸ್ ಮತ್ತು ಕರೆಕ್ಷನಲ್ ಮ್ಯಾನವಲ್ 2021ರಡಿಯ ಹೊಸ ರೂಲ್ಸ್ ಅನ್ನ ಉಲ್ಲೇಖಿಸಿದ್ರು. ಚಾಪ್ಟರ್ 38ರ ರೂಲ್ 720, 728 ಅಡಿಯಲ್ಲಿ ಕೆಲ ನಿಯಮ ಇದ್ದು,ಅದರ ಪ್ರಕಾರ ಮರ್ಡರ್ ಆರೋಪಿಗೆ ಈ ಅವಕಾಶಗಳ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ರು. ಒಂದ್ವೇಳೆ ಅವಕಾಶ ನೀಡಿದ್ರೆ ಸೂಸೈಡ್​ಗೆ ಅಥವಾ ಎಸ್ಕೇಪ್​ ಆಗಲು ಸಾಧ್ಯತೆ ಇರುತ್ತೆ ಎಂದು ರೂಲ್ಸ್​ ಅನ್ನ ಉಲ್ಲೇಖಿಸಿದ್ರು. ದರ್ಶನ್​ ಅಂಡ್​ ಗ್ಯಾಂಗ್​ ಸೆರೆಮನೆ ವಾಸದಿಂದ ಸದ್ಯಕ್ಕಂತೂ ಬಿಡುಗಡೆ ಭಾಗ್ಯವಿಲ್ಲ. ಆದ್ರೆ, ದರ್ಶನ್​ಗೆ ಮನೆಯೂಟದ ಭಾಗ್ಯವಾದ್ರೂ ಸಿಗುತ್ತಾ ಅನ್ನೋದು ನಾಳೆ ಗೊತ್ತಾಗಲಿದೆ.

  • ಅನಾರೋಗ್ಯ ಇದ್ದರಷ್ಟೇ ಆರೋಪಿಗೆ ಮನೆ ಊಟದ ಅವಕಾಶ
  • ರೂಲ್ 742 ಅಡಿ ಅನಾರೋಗ್ಯ ಇದ್ರೆ ಜೈಲಲ್ಲಿ ಚಿಕಿತ್ಸೆಗೆ ಅವಕಾಶ
  • ರೂಲ್ 322 ಅಡಿ ಆರೋಪಿಗೆ ಡಯಟ್ ಊಟ ನೀಡಬಹುದು
  • ಮೆಡಿಕಲ್ ಆಫೀಸ್ ನಿರ್ಧಾರದ ಮೇಲೆ ಡಯಟ್ ನೀಡಬಹುದು
  • ರೂಲ್ 335 ಅಡಿ ಸಿಎಂಒ & ಎಸ್ಪಿ ಜೈಲರ್ ಚೆಕ್ ಮಾಡಬಹುದು
  • ರೂಲ್ 338 ಅಡಿ ಹಾಸ್ಪಿಟಲ್ ಡಯಟ್ ನೀಡಲು ಅವಕಾಶ ಇದೆ
  • 340 ಅಡಿ ಊಟ ಸರಿಯಿಲ್ಲ ಅಂತಾ ಕಂಪ್ಲೇಂಟ್ ಮಾಡಬಹುದು
  • ಆರೋಪಿ ಸುಳ್ಳು ಕಂಪ್ಲೇಂಟ್ ಕೊಟ್ರೆ, ಶಿಕ್ಷೆಗೂ ಗುರಿಯಾಗಬಹುದು
  • ರೂಲ್ 345 ಹೊರಗಿನ ಆಹಾರ ನೀಡಲು ಇರುವ ಅವಕಾಶ ಇರುತ್ತೆ
  • ಅದು ಸೆ. 30 ಪ್ರಿಸನ್ಸ್ ಆ್ಯಕ್ಟ್ ಅಡಿ ಐಜಿಪಿ ಪ್ರಿಸನ್ಸ್ ಬಳಿ ಕೇಳಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲೂಟ ಸೇರ್ತಿಲ್ಲ, ಚಾಪೆ ಮೇಲೆ ಮಲಗಕ್ಕಾಗ್ತಿಲ್ಲ ಎಂದ ನಟ ದರ್ಶನ್​​.. ಬಿಗ್​ ಶಾಕ್​ ಕೊಟ್ಟ ಕೋರ್ಟ್​​!

https://newsfirstlive.com/wp-content/uploads/2024/06/DARSHAN_GANG-1.jpg

Load More