ಸದನದಲ್ಲಿ ವಾಲ್ಮೀಕಿ, ಮುಡಾ ಹಗರಣ ಪ್ರಸ್ತಾಪಿಸಿ ಬಿಜೆಪಿ ಹೋರಾಟ
ನಾಗೇಂದ್ರ ನಿರ್ವಹಿಸುತ್ತಿದ್ದ ಪರಿಶಿಷ್ಟ ಇಲಾಖೆಗೆ ಈಗ ನಾನೇ ಮಂತ್ರಿ
ಬಿಜೆಪಿ ಅವಧಿಯ 21 ಹಗರಣಗಳ ತನಿಖೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ
ವಾಲ್ಮೀಕಿ ಹಗರಣ, ಮುಡಾ ಅಕ್ರಮ ಆರೋಪ ಪ್ರಸ್ತಾಪಿಸಿ ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ಕಟ್ಟಿ ಹಾಕಲು ಮುಂದಾಗಿದೆ. ಅಧಿವೇಶನದಲ್ಲಿ ಈ ಹಗರಣಗಳು ಸದ್ದು ಮಾಡಿದ್ದು ತೀವ್ರ ವಾಕ್ಸಮರ ನಡೆಸಿದ್ದಾರೆ. ಸದನದಲ್ಲೇ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಅವಧಿಯಲ್ಲಿ ನಡೆದಿರುವ 21 ಹಗರಣಗಳ ತನಿಖೆ ಮಾಡಿಸುತ್ತೇವೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: ಸಂಘ, ಮೋದಿ ಪರಿ‘ವಾರ್’.. ಬಿಜೆಪಿ, RSS ಮಧ್ಯೆ ಅಸಲಿಗೆ ಆಗಿದ್ದೇನು? ಪಿಕ್ಚರ್ ಅಭಿ ಬಾಕಿ ಹೈ!
ಇಂದು ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಕ್ಸಮರ ನಡೆದಿದ್ದು, ಕೋಲಾಹಲ ಸೃಷ್ಟಿಯಾಗಿತ್ತು. ಇದಾದ ಬಳಿಕ ವಿಧಾನಸಭೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿಎಂ ಸಿದ್ದರಾಮಯ್ಯ, ದಾಖಲೆಗಳ ಸಮೇತ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟ ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈಗ ನಾನೇ ಆ ಇಲಾಖೆಗೆ ಮಂತ್ರಿಯಾಗಿದ್ದೇನೆ. ನಿಗಮದ ಹಣವನ್ನು ವಸಂತ ನಗರದ ಯೂನಿಯನ್ ಬ್ಯಾಂಕ್ ನಲ್ಲಿಟ್ಟಿದ್ದರು. ಹಣಕಾಸು ವ್ಯವಹಾರ ನಿಭಾಯಿಸೋದು ನಿಗಮದ ಎಂಡಿ ಜವಾಬ್ದಾರಿ. ಅವರೇ ಆಡಳಿತಾತ್ಮಕ ಮುಖ್ಯಸ್ಥರಾಗಿರ್ತಾರೆ.
ವಾಲ್ಮೀಕಿ ನಿಗಮದಲ್ಲಿ ಪ್ರೆಸಿಡೆಂಟ್ ಆಗಿರೋನು ಹೆಡ್ ಅಲ್ಲ. ಬಸನಗೌಡ ದದ್ದಲ್ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದೆವು. ನಾಗೇಂದ್ರ ಇಲಾಖೆಗೆ ಮಂತ್ರಿ ಆಗಿದ್ರು. ಆ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್. ಅದು ನಮ್ಮ ಅಧೀನಕ್ಕೆ ಬರೋದಿಲ್ಲ. ವಸಂತನಗರ ಬ್ಯಾಂಕ್‌ನಿಂದ ಎಂಜಿ ರೋಡ್ ಯೂನಿಯನ್ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿದ್ದಾರೆ. ವಿಪಕ್ಷ ನಾಯಕ ಅಶೋಕ್ ಇದ್ಯಾವುದನ್ನೂ ಕೇಳಿಲ್ಲ. ಯಾಕೆ ವರ್ಗಾವಣೆ ಮಾಡಿದ್ರು ಅಂತಾ ಕೇಳಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸದನ ಆರಂಭಕ್ಕೂ ಮುನ್ನ ಮುಡಾ ಹಗರಣಕ್ಕೆ ಟ್ವಿಸ್ಟ್ ಕೊಟ್ಟ ಸಿಎಂ; ಬಿಜೆಪಿ, ಜೆಡಿಎಸ್ ಪ್ಲಾನ್ ಏನು?
ಬಿಜೆಪಿ 21 ಹಗರಣಗಳ ಪ್ರಸ್ತಾಪ
ವಾಲ್ಮೀಕಿ, ಮುಡಾ ಹಗರಣ ಪ್ರಸ್ತಾಪಿಸಿ ಬಿಜೆಪಿ ಹೋರಾಟ ಮಾಡುತ್ತಿರೋದಕ್ಕೆ ಸಿಎಂ ಸಿದ್ದರಾಮಯ್ಯ ಸದನದಲ್ಲೇ ಬಿಜೆಪಿ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಪ್ರಸ್ತಾಪ ಮಾಡಿದ್ದಾರೆ.
ಸದನಕ್ಕೆ ಲಿಖಿತ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಎಲ್ಲಾ ಹಗರಣಗಳನ್ನ ತನಿಖೆ ಮಾಡಿಸುತ್ತೇವೆ. ಬಿಜೆಪಿ ಅವಧಿಯಲ್ಲಿ ನಡೆದಿರುವ 21 ಹಗರಣಗಳ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಗುರುರಾಘವೇಂದ್ರ ಬ್ಯಾಂಕ್ ಹಗರಣ ಏನಾಯ್ತು? ಐಟಿ, ಇಡಿ ಇದ್ರೂ ಯಾಕೆ ತನಿಖೆ ಮಾಡಲಿಲ್ಲ. ಠೇವಣಿದಾರರ ಹಿತಕಾಯುವವರು ಯಾರು? ಈ ಪ್ರಕರಣದ ಸಮಗ್ರ ತನಿಖೆ ಮಾಡಿಸುತ್ತೇವೆ. ಯಾರೇ ತಪ್ಪು ಮಾಡಿದ್ರೂ ಕ್ರಮ ಜರುಗಿಸ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧದ ಹಗರಣಗಳ ಪಟ್ಟಿ
1. ಎಪಿಎಂಸಿ ಹಗರಣ- 47.16 ಕೋಟಿ
2. ಭೋಗಿ ಅಭಿವೃದ್ಧಿ ನಿಗಮ – 87 ಕೋಟಿ
3. ದೇವರಾಜ ಅರಸು ಟ್ರಕ್ ಟರ್ಮಿನಲ್ – 50 ಕೋಟಿ
4. ಗಂಗಾ ಕಲ್ಯಾಣ – 430 ಕೋಟಿ
5. ಪ್ರವಾಸೋದ್ಯಮ ಇಲಾಖೆ – 2.47 ಕೋಟಿ
6. ಕಿಯೋನಿಕ್ಸ್ – 500 ಕೋಟಿ
7. ಕೋವಿಡ್ ಹಗರಣ – 40,000 ಕೋಟಿ
8. ಭದ್ರಾ ಮೇಲ್ದಂಡೆ – 2000 ಕೋಟಿ
9. ಪಿಎಸ್ ಐ ನೇಮಕಾತಿ -ನೂರಾರು ಕೋಟಿ
10. ಪರುಶುರಾಮ ಥೀಮ್ ಪಾರ್ಕ್ – 11 ಕೋಟಿಗೂ ಹೆಚ್ಚು
11. ಬಿಟ್ ಕಾಯಿನ್ – ಸಾವಿರಾರು ಕೋಟಿ
12. ಬಿಎಸ್‌ವೈ ವಿರುದ್ಧದ ಅಕ್ರಮ ಆಸ್ತಿ ಆರೋಪ – 750 ಕೋಟಿ
13. ಬಿಎಸ್‌ವೈ ಕುಟುಂಬದ ವಿರುದ್ಧ ಆದಾಯ ಮೀರಿದ ಆಸ್ತಿ – ನೂರಾರು ಕೋಟಿ
14. ಅಬಕಾರಿ ಹಗರಣ -ನೂರಾರು ಕೋಟಿ
15. ಕೆಕೆಆರ್‌ಡಿಬಿ – 200 ಕೋಟಿ
16. ಕಂದಾಯ ಇಲಾಖೆ
17. ಕೃಷಿ ಇಲಾಖೆ
18. ಅಂಗನವಾಡಿ ಹಗರಣ
19. ಕೆಐಎಡಿಬಿ
20. ಗಣಿ ಇಲಾಖೆ
21. ಗುರು ರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ ಹಗರಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ