newsfirstkannada.com

×

‘ನನ್ನ ಮದುವೆಗೆ ದರ್ಶನ್ ರಿಲೀಸ್‌ ಆಗಿ ಬರ್ತಾರೆ’- ಕಾಟೇರನ ಭೇಟಿಯಾದ ತರುಣ್ ಸುಧೀರ್; ಹೇಳಿದ್ದೇನು?

Share :

Published July 19, 2024 at 6:08pm

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿರೋ ನಟ ದರ್ಶನ್​ ಅಂಡ್ ಗ್ಯಾಂಗ್​

    ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್​ರನ್ನು ಭೇಟಿಯಾದ ತರುಣ್ ಸುಧೀರ್‌‌

    ದರ್ಶನ್ ಇಲ್ಲದೆ ಮದುವೆ ಆಗುವ ಬಗ್ಗೆ ಕೊರಗು ನನಗೆ ಇತ್ತು- ಕಾಟೇರ ನಿರ್ದೇಶಕ

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್ ಗ್ಯಾಂಗ್​ ಜೈಲು ವಾಸ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ನಟ ದರ್ಶನ್ ಅವರನ್ನು ನೋಡಲು ಕುಟುಂಬಸ್ಥರು, ಸ್ನೇಹಿತರು ಪರಪ್ಪನ ಅಗ್ರಹಾರಕ್ಕೆ ಒಬ್ಬರಾದ ಮೇಲೆ ಒಬ್ಬರು ಹೋಗುತ್ತಿದ್ದಾರೆ. ದರ್ಶನ್ ಅವರಿಗೆ ಧೈರ್ಯ ತುಂಬಿ ಬರುತ್ತಿದ್ದಾರೆ.

ಇದನ್ನೂ ಓದಿ: ಜೈಲೂಟ ಸೇರ್ತಿಲ್ಲ, ಚಾಪೆ ಮೇಲೆ ಮಲಗಕ್ಕಾಗ್ತಿಲ್ಲ ಎಂದ ನಟ ದರ್ಶನ್​​.. ಬಿಗ್​ ಶಾಕ್​ ಕೊಟ್ಟ ಕೋರ್ಟ್​​!

ಇಂದು ನಟ ದರ್ಶನ್ ಅವರನ್ನು ಭೇಟಿ ಮಾಡಲು ಕಾಟೇರ ನಿರ್ದೇಶಕ ತರುಣ್ ಸುಧೀರ್‌‌, ದರ್ಶನ್ ಪುಟ್ಟಣ್ಣಯ್ಯ ಅವರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ದರ್ಶನ್​ರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತರುಣ್ ಸುಧೀರ್‌‌ ಅವರು ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಮಾತಾಡಿದ ಅವರು, ನಟ ದರ್ಶನ್​ ಅವರಿಗೆ ಹುಷಾರು ಇರಲಿಲ್ಲ. ಈಗ ಚೆನ್ನಾಗಿದ್ದಾರೆ. ಸಂಜೆ ವೇಳೆ ಜ್ವರ ಕಾಣಿಸಿಕೊಳ್ಳುತ್ತಿತ್ತು. ಈಗಿನ ವಾತಾವರಣದಿಂದ ಜ್ವರ ಬಂದಿತ್ತು. ಯಾವಾಗಲೂ ನನ್ನನ್ನು ಯಾವ ರೀತಿ ನೋಡಿ ರಿಯಾಕ್ಟ್ ಮಾಡುತ್ತಿದ್ದರೋ, ಅದೇ ರೀತಿ ಇಂದು ರಿಯಾಕ್ಟ್ ಮಾಡಿದ್ರು. ಅವರಿಗಿಂತ ನಾವು ಮಾನಸಿಕವಾಗಿ ವೀಕ್ ಆಗಿಬಿಟ್ಟಿದ್ದೇವೆ. ನಟ ದರ್ಶನ್ ಹೆಲ್ತ್ ಬಗ್ಗೆ ಹೆಚ್ಚು ಚರ್ಚೆ ಆಯ್ತು. ಏನಿಲ್ಲ ಮಗನೇ ಆರಾಮವಾಗಿ ಇದ್ದೇನೆ. ಸ್ವಲ್ಪ ಜ್ವರ ಇತ್ತು ಅಷ್ಟೇ ಎಂದು ಹೇಳಿದ್ದಾರೆ.

ಮದುವೆ ಬಗ್ಗೆ ಹೇಳಿದ್ದೇನು?

ನನ್ನ ಮದುವೆ ವಿಚಾರ ಮೊದಲೇ ದರ್ಶನ್​ ಅವರಿಗೆ ಗೊತ್ತಿತ್ತು. ದರ್ಶನ್ ಇಲ್ಲದೆ ಮದುವೆ ಆಗುವ ಬಗ್ಗೆ ಕೊರಗು ಇತ್ತು. ಆದ್ರೆ ನಿಗದಿತ ದಿನಾಂಕದಂದು ಮಗುವೆ ಆಗು ಅಂತ ಹೇಳಿದ್ದಾರೆ. ಅಷ್ಟೊತ್ತಿಗೆ ನಾನು ಬರ್ತಿನಿ ಅಂದ್ರು. ಅವ್ರು ಏನೂ ತಪ್ಪು ಮಾಡಿಲ್ಲ ಅನ್ನೋ ನಂಬಿಕೆಯಲ್ಲಿ ನಾವೆಲ್ಲಾ ಇದ್ದೇವೆ. ಹಾಗೇ ಆಗಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇವೆ. ನನ್ನ ಮದುವೆ ಅಷ್ಟೋತ್ತಿಗೆ ನಟ ದರ್ಶನ್ ಜೈಲಿನಿಂದ ರಿಲೀಸ್ ಆಗ್ತಾರೆ. ಆಶೀರ್ವಾದ ಮಾತ್ರ ಪಡೆದುಕೊಂಡೆ. ಜನರಲ್ ಆಗಿ ಸಿನಿಮಾ ಇಂಡಸ್ಟ್ರಿ ಬಗ್ಗೆ ಕೇಳಿದ್ರು. ಯಾವಾಗಲೂ ಅವರಿಗೆ ಸಿನಿಮಾ ಇಂಡಸ್ಟ್ರಿ ಬಗ್ಗೆ ಕಾಳಜಿ ಇದ್ದೆ ಇದೆ. ಜೈಲು ಊಟ ತಿನ್ನುವುದಕ್ಕೆ ಆಗ್ತಿಲ್ಲ ಎಂದು ಹೈಕೋರ್ಟ್​ಗೆ ಹೋಗಿದ್ದಾರೆ. ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ಇದ್ದು, ಏನಾಗುತ್ತೋ ಗೊತ್ತಿಲ್ಲ. ಮೇಲ್ನೋಟಕ್ಕೆ ಸ್ವಲ್ಪ ತೂಕ ಕಳೆದುಕೊಂಡು ಸಣ್ಣಗಾಗಿದ್ದಾರೆ.

ಇದನ್ನೂ ಓದಿ: ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!

ನಟ ದರ್ಶನ್​ಗೆ ಎರಡು ಪುಸ್ತಕಗಳನ್ನು ಕೊಡಲಾಗಿದೆ. ಒಂದು ಎಂತಹ ಸಂದರ್ಭದಲ್ಲೂ ಎದೆಗುಂದದೆ ಹೇಗೆ ಇರಬಹುದು. ಇನ್ನೊಂದು ಲೈಫ್ ಜರ್ನಿ ಬಗ್ಗೆ ಫಿಲಾಸಫಿ ಇರುವ ಒಳ್ಳೆಯ ಪ್ರೇರಣೆ ನೀಡುವ ಹಾಗೂ ಪಾಸಿಟಿವ್ ಆಗಿರೋ ಪುಸ್ತಕ ಕೊಡಲಾಗಿದೆ. ಎಲ್ಲರ ಜೀವನದಲ್ಲೂ ಅಡೆತಡೆಗಳು ಸಹಜ. ಅದನ್ನು ಮೀರಿ ಹೇಗೆ ಬದುಕಬೇಕು ಎಂಬುದು ಈ ಪುಸ್ತಕದಲ್ಲಿದೆ. ಹಾಗಾಗಿ ಆಲ್ಕೆಮಿಸ್ಟ್ ಕನ್ನಡ ವರ್ಷನ್, ಆನೆ ಅರ್ಜುನ ಪುಸ್ತಕವನ್ನು ಕೊಡಲಾಗಿದೆ. ನಾವೆಲ್ಲ ಹ್ಯೂಮನ್ ಎಮೋಷನ್ಸ್ ಅಂತ ಇರುತ್ತೆ. ನಮಗೆ ಯಾರೂ ಆತ್ಮೀಯರು ಇರ್ತಾರೆ ಅಷ್ಟೂ ಒಲವು ಅವರ ಕಡೆ ತಿರುಗುತ್ತೆ. ಅಂತಿಮವಾಗಿ ನ್ಯಾಯಾಲಯ ತೀರ್ಪು ನೀಡಲಿದೆ. ನಟ ದರ್ಶನ್​ಗೆ ಇದು ಹೊಸದೇನಲ್ಲ. ಈ ಹಿಂದೆ ಇಂತಹ ಸಂದರ್ಭಗಳನ್ನು ಎದುರಿಸಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ. ಆದಷ್ಟು ಬೇಗ ಹೊರಬರಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಮದುವೆಗೆ ದರ್ಶನ್ ರಿಲೀಸ್‌ ಆಗಿ ಬರ್ತಾರೆ’- ಕಾಟೇರನ ಭೇಟಿಯಾದ ತರುಣ್ ಸುಧೀರ್; ಹೇಳಿದ್ದೇನು?

https://newsfirstlive.com/wp-content/uploads/2024/07/darshan-4.jpg

Load More