newsfirstkannada.com

×

ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ.. ಜೈಲಿನಿಂದ ನೂರಾರು ಕೈದಿಗಳು ಎಸ್ಕೇಪ್​; ಕ್ಷಣ, ಕ್ಷಣಕ್ಕೂ ಆತಂಕ!

Share :

Published July 19, 2024 at 8:39pm

Update July 19, 2024 at 8:43pm

    ಬಾಂಗ್ಲಾದೇಶದಲ್ಲಿ ಮುಂದುವರೆದ ವಿದ್ಯಾರ್ಥಿಗಳ ಆಕ್ರೋಶದ ಕಿಚ್ಚು

    ಉಗ್ರ ಸ್ವರೂಪದ ಪ್ರತಿಭಟನೆ, ಅಂಗಡಿ ಮುಂಗಟ್ಟುಗಳಿಗೆ ಬಿತ್ತು ಬೆಂಕಿ

    ಜೈಲಿಗೆ ನುಗ್ಗಿ ಬೆಂಕಿಯಿಟ್ಟ ಪ್ರತಿಭಟನಾಕಾರರು, ನೂರಾರು ಕೈದಿಗಳು ಎಸ್ಕೇಪ್

ಢಾಕಾ: ಮೀಸಲಾತಿ ವಿಚಾರವಾಗಿ ಬಾಂಗ್ಲಾದೇಶದಲ್ಲಿ ಹೊತ್ತಿಕೊಂಡಿರುವ ಬೆಂಕಿ ಸದ್ಯಕ್ಕೆ ಆರುವ ಲಕ್ಷಣಗಳು ಕಾಣುತ್ತಿಲ್ಲ. ಭದ್ರತಾ ಪಡೆಗಳು ರಬ್ಬರ್ ಬುಲೆಟ್ ಅಶ್ರುವಾಯುವಿನಂತಾ ಪ್ರಯೋಗ ಮಾಡಿದರೂ ಕೂಡ ಪ್ರತಿಭಟನಾಕಾರರ ಕಿಚ್ಚು ಇನ್ನೂ ನಿಗಿ, ನಿಗಿ ಅನ್ನುತ್ತಲೇ ಇದೆಯೇ ಹೊರತು ಕುಗ್ಗುತ್ತಿಲ್ಲ.. ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದ ವಿದ್ಯಾರ್ಥಿಗಳು 1971ರ ಬಾಂಗ್ಲಾ ವಿಮೋಚನಾ ಹೋರಾಟಗಾರರಿಗೆ ನೀಡಲಾಗಿರುವ 30% ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ಉಗ್ರ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ದಿನದಿಂದ ದಿನಕ್ಕೆ ಇದರ ಕಾವು ಏರುತ್ತಲೇ ಇದೆ. ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ ಈಗ 50ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಮತ್ತೊಂದು ಅನಾಹುತ ಬಾಂಗ್ಲಾದೇಶದಲ್ಲಿ ನಡೆದು ಹೋಗಿದೆ.

ಕೇಂದ್ರ ಕಾರಾಗೃಹಕ್ಕೆ ನುಗ್ಗಿದ ಪ್ರತಿಭಟನಾಕಾರರಿಂದ ಬೆಂಕಿ: ನೂರಾರು ಕೈದಿಗಳು ಪರಾರಿ

ಬಾಂಗ್ಲಾದೇಶದ ನರಸಿಂಗ್ಡಿ ಅನ್ನೋ ಜಿಲ್ಲೆಯಲ್ಲಿ ಇಂತಹದೊಂದು ದೊಡ್ಡ ಅನಾಹುತ ನಡೆದು ಹೋಗಿದೆ. ರೊಚ್ಚಿಗೆದ್ದಿದ್ದ ಪ್ರತಿಭಟನಾಕಾರರು ಜಿಲ್ಲೆಯ ಕೇಂದ್ರ ಕಾರಾಗೃಹ ಕಚೇರಿಗೆ ನುಗ್ಗಿ ಅಲ್ಲಿ ಬೆಂಕಿಯಿಟ್ಟಿದ್ದಾರೆ. ಇದು ಜೈಲಿನಲ್ಲಿದ್ದ ನೂರಾರು ಕೈದಿಗಳಿಗೆ ವರದಾನವಾಗಿ ಪರಿಣಮಿಸಿದ್ದು. 100ಕ್ಕೂ ಹೆಚ್ಚು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಕ್ಷಣ, ಕ್ಷಣಕ್ಕೂ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ.. ಜೈಲಿನಿಂದ ನೂರಾರು ಕೈದಿಗಳು ಎಸ್ಕೇಪ್​; ಕ್ಷಣ, ಕ್ಷಣಕ್ಕೂ ಆತಂಕ!

https://newsfirstlive.com/wp-content/uploads/2024/07/Bangaladesh-Fire.jpg

Load More