ಚೀಪ್ ಕಾಸ್ಮೆಟಿಕ್ ಬಳಸೋ ಯುವತಿಯರೇ ಓದಲೇಬೇಕಾದ ಸ್ಟೋರಿ
ಬ್ರಾಂಡೆಡ್ ಹೆಸರಲ್ಲಿ ಮಾರಾಟವಾಗೋ ನಕಲಿ ಮೇಕಪ್ ಪ್ರಾಡಕ್ಟ್ಗಳು
ಅರೆಸ್ಟ್ ಆದ್ರೂ ಬುದ್ದಿ ಕಲಿಯದ ನಕಲಿಕೋರರು ಶುರು ಮಾಡಿದ್ದಾರೆ ಕೆಲಸ
ಬೆಂಗಳೂರು: ಈಗಿನ ಕಾಲದಲ್ಲಿ ಯಾರು ತಾನೇ ಮೇಕಪ್ ಮಾಡಿಕೊಳ್ಳೋದಿಲ್ಲ ಹೇಳಿ. ನೂರಕ್ಕೆ 99 ಜನ ಮೇಕಪ್ ಇಲ್ಲದೇ ಮನೆಯಿಂದ ಆಚೆ ಕಾಲಿಡುವುದಿಲ್ಲ. ಕಾಲೇಜಿಗೆ, ಕೆಲಸಕ್ಕೆ ಅಥವಾ ಯಾವುದಾದ್ರೂ ಫಂಕ್ಷನ್ಗೆ ಹೋಗುವವರ ಮುಖಕ್ಕೆ ಒಂದಿಷ್ಟು ಮೇಕಪ್ ಹಚ್ಚಿಕೊಂಡೇ ಮನೆಯಿಂದ ಆಚೇ ಕಾಲಿಡುತ್ತಾರೆ. ಹೀಗೆ ಪ್ರತಿ ದಿನ ಮೇಕಪ್ ಮಾಡಿಕೊಳ್ಳುವ ಮಹಿಳೆಯರೇ ಈ ಸ್ಟೋರಿಯನ್ನು ನೀವು ಓದಲೇಬೇಕು. ಹೀಗೆ ನೀವು ಹಾಕೋ ಮೇಕಪ್ ನಿಮ್ಮ ಜೀವವನ್ನೇ ನುಂಗಿಬಿಡತ್ತೆ. ಇದೇ ವಿಚಾರದ ಬಗ್ಗೆ ತಜ್ಞ ವೈದ್ಯರು ಬಿಚ್ಚಿಟ್ಟ ಸತ್ಯ ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ಅಬ್ಬಬ್ಬಾ.. ಬಿಗ್ಬಾಸ್ ಮಾಜಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಹೊಸ ಅವತಾರ; ಏನಿದರ ವಿಶೇಷ?
ಹೌದು, ಹಾದಿ ಬೀದಿಯಲ್ಲಿ ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ತರಹೇವಾರಿ ಮೇಕಪ್ ಪ್ರಾಡಕ್ಟ್ಸ್ ಮಾರೋರಿಂದ ಯುವತಿಯರೇ ದೂರ ಇರೀ. ಬ್ರಾಂಡೆಡ್ ಬ್ಯೂಟಿ ಪ್ರಾಡಕ್ಟ್ಸ್ ಕಡಿಮೆ ಬೆಲೆಗೆ ಸಿಗುತ್ತೆ ಅಂತ ನೀವೇನಾದ್ರೂ ಇಂತವರಿಂದ ಖರೀದಿ ಮಾಡ್ತಿದ್ರೆ ಮನೆಗೆ ಬ್ಯೂಟಿ ಪ್ರಾಡಕ್ಟ್ಸ್ ಜೊತೆ ಜೊತೆಗೆ ಕ್ಯಾನ್ಸರ್ ಮಾರಿಯನ್ನೂ ಬ್ಯಾಗಲ್ಲಿಟ್ಟು ಮನೆಗೆ ತರ್ತಿರಾ. ವರ್ಷದಿಂದ ವರ್ಷಕ್ಕೆ ಯುವತಿಯರಲ್ಲಿ ಕ್ಯಾನ್ಸರ್ ಹೆಚ್ಚಾಗ್ತಾಯಿದೆ. ಹೀಗಾಗಿ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಈ ವೇಳೆ ಬ್ರಾಂಡೆಡ್ ಹೆಸರಲ್ಲಿ ಮಾರಾಟವಾಗೋ ನಕಲಿ ಮೇಕಪ್ ಪ್ರಾಡಕ್ಟ್ಗಳೇ ಕ್ಯಾನ್ಸರ್ಗೆ ಕಾರಣ ಅನ್ನೋದು ಪತ್ತೆಯಾಗಿದೆ. ಹೀಗಾಗಿ, ಇಂತಹ ಚೀಪ್ ಪ್ರಾಡೆಕ್ಟ್ಸ್ ಬಳಸೋದನ್ನ ನಿಲ್ಲಿಸಿ ಅಂತಿದ್ದಾರೆ ತಜ್ಞ ವೈದ್ಯರು.
ಮೇಕಪ್ ಮೇಲೆ ರೇಡ್!
ಗಾಂಧಿನಗರದಲ್ಲಿನ ಇಂತಹ ಅಡ್ಡೆಗಳ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಕಳೆದ ವರ್ಷ ಬೆಂಗಳೂರು ಸಿಸಿಬಿ ಪೊಲೀಸರು ಸ್ಟ್ರೀಟ್ ಶಾಪ್ ಮೇಲೆ ದಾಳಿ ನಡೆಸಿದ್ರು. ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಕಲಿ ಉತ್ಪನ್ನಗಳನ್ನ ಸೀಜ್ ಮಾಡಿದ್ರು. ಇಂತಹ ನಕಲಿ ಅಡ್ಡ ನಡೆಸುತ್ತಿದ್ದ ಮಹಾವೀರ್ ಅನ್ನೋರ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. ಆದ್ರೆ, ಕೇಸ್ ಆಗಿ ಅರೆಸ್ಟ್ ಆದ್ರೂ ಬುದ್ಧಿ ಕಲಿಯದ ನಕಲಿಕೋರರು ಮತ್ತೆ ಅದೇ ಚಾಳಿಯನ್ನ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಾದ್ರೂ ಜನ ಎಚ್ಚೆತ್ತುಕೊಳ್ಳಬೇಕಿದೆ. ಇಂತಹ ಹಾನಿಕಾರಕ ಪ್ರಾಡಕ್ಟ್ ಕೊಳ್ಳುವುದನ್ನ, ಬಳಸುವುದನ್ನ ನಿಲ್ಲಿಸಬೇಕಿದೆ. ಇಲ್ಲವಾದಲ್ಲಿ ನಿಮ್ಮ ಪ್ರಾಣಕ್ಕೆ ನೀವೇ ಕುತ್ತು ತಂದುಕೊಳ್ತೀರಾ ಹುಷಾರ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ