newsfirstkannada.com

×

ಯಾಕಿಷ್ಟು ರಕ್ತದಾಹ? ಆಂಧ್ರಪ್ರದೇಶ ರಾಜಕೀಯದ ರಕ್ತಚರಿತ್ರೆಗಿದೆ 12ನೇ ಶತಮಾನದ ನಂಟು; ಏನದು?

Share :

Published July 20, 2024 at 5:03pm

Update July 20, 2024 at 6:20pm

    ಪಲ್ನಾಡುವಿನಲ್ಲಿ ದಾಯಾದಿಗಳ ಬಡಿದಾಟದ ಆ ಪರಂಪರೆ ಯಾವುದು..?

    12ನೇ ಶತಮಾನದ ಆ ರಕ್ತಚರಿತ್ರೆ ಇಂದಿಗೂ ಮುಂದುವರಿದದ್ದು ಹೇಗೆ..?

    ದ್ವೇಷ, ಸೇಡಿಗಾಗಿ ಜೀವ ಕಳೆದುಕೊಂಡ ರಾಜಕೀಯ ನಾಯಕರು ಯಾರು

ಹೈದ್ರಾಬಾದ್​: ರಾಯಲಸೀಮೆ ಹಾಗೂ ಪಲ್ನಾಡು ಅಂದ ತಕ್ಷಣ ಯಾರ ಕಣ್ಣೆದುರಿಗೆ ಆಗಲಿ ಒಂದು ಕ್ರೌರ್ಯದ, ಹಿಂಸಾಚಾರದ ಪ್ರತಿಶೋಧ ಚಿತ್ರಣಗಳು ಕದಲಲು ಶುರುವಾಗುತ್ತವೆ. ಪಲ್ನಾಡು ಹಾಗೂ ರಾಯಲಸೀಮೆ ನೆಲಕ್ಕೆ ಅದ್ಯಾವ ತೀರದ ರಕ್ತದಾಹ ಇದೆಯೋ ಗೊತ್ತಿಲ್ಲ. ಶತಮಾನಗಳಿಂದಲೂ ಈ ನೆಲ ಮಳೆಗಿಂತ ಹೆಚ್ಚು ರಕ್ತದಿಂದಲೇ ತೋಯ್ದಿದೆ. ಸಡಗರ ಸಂಭ್ರಮದ ಬದಲು ನರಳಿಕೆ, ಆಕ್ರಂದನ ಭೀಕರತೆ, ಭಯವನ್ನೇ ಹಾಸಿ ಹೊದ್ದು ಮಲಗಿಕೊಂಡು ಬಂದಿದೆ. ಅಸಲಿಗೆ ಈ ಪ್ರತಿಶೋಧದ ಆಕ್ರೋಶ ಈ ನೆಲದಲ್ಲಿ ಅದ್ಯಾರೋ ಬಿತ್ತಿಯೇ ಹೋಗಿದ್ದಾರೋ ಏನೋ ಅನ್ನುವ ಮಟ್ಟಿಗೆ ಇಲ್ಲಿನ ಹಿಂಸಾಚಾರ ಕಣ್ಣಿಗೆ ರಾಚುತ್ತದೆ. ಹೌದು, ಈ ನೆಲಕ್ಕೆ ರಕ್ತ ರಾಜಕೀಯದ ನಂಟು ಶತಮಾನಗಳಿಂದಲೇ ಬಂದಿದೆ. ಅದು ಬರೋಬ್ಬರಿ 8 ಶತಮಾನಗಳಿಂದ ಈ ನೆಲ ರಕ್ತವನ್ನು ಮೊಗೆ ಮೊಗೆದು ಕುಡಿದಿದೆ. 12ನೇ ಶತಮಾನದಲ್ಲಿ ಒಂದು ಸಂಸ್ಥಾನಕ್ಕೆ ಶುರುವಾದ ದಾಯಾದಿಗಳ ಕಲಹ ಈಗ ಎರಡು ಪಕ್ಷಗಳ ನಡುವಿನ ಕಲಹಕ್ಕೆ ವರ್ಗಾವಣೆಯಾಗಿದೆ. ಹಾಗಿದ್ರೆ 12ನೇ ಶತಮಾನದಲ್ಲಿ ಅಸಲಿಗೆ ನಡೆದಿದ್ದು ಏನು.? ಅಂದಿನ ಆ ಕರಾಳ ಪರಂಪರೆ ಇಂದಿಗೂ ಕೂಡ ನಡೆದುಕೊಂಡು ಬಂದಿದ್ದು ಹೇಗೆ..? ಇದೆಲ್ಲದರ ಸಂಪೂರ್ಣ ವಿವರವಿದೆ ಈ ವರದಿಯಲ್ಲಿ.

ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ 

ಪಲ್ನಾಡು ನೆಲದಲ್ಲಿ ಮೊಟ್ಟ ಮೊದಲು ನಡೆದ ಸಂಘರ್ಷವನ್ನ ಬ್ಯಾಟಲ್ ಆಫ್ ಪಲ್ನಾಡು ಅಂತಲೇ ಕರೆಯುತ್ತಾರೆ. ಪಲ್ನಾಡುವಿನ ಮಹಾಯುದ್ಧವೆಂದೇ ಈ ಯುದ್ಧಕ್ಕೆ ಹೆಸರು ಇದು ನಡೆದಿದ್ದು 12ನೇ ಶತಮಾನದಲ್ಲಿ ಮಚೇರ್ಲಾ ಹಾಗೂ ಗುರುಜಾಲ ಎಂಬ ಸಂಸ್ಥಾನಗಳ ಸಲುವಾಗಿಯೇ ಒಂದು ದಾಯಾದಿ ಕಲಹವೊಂದು ಶುರುವಾಗುತ್ತದೆ. ಇದನ್ನು ದಕ್ಷಿಣ ಭಾರತದ ಕುರುಕ್ಷೇತ್ರವೆಂದೇ ಬಣ್ಣಿಸಲಾಗುತ್ತದೆ. 12ನೇ ಶತಮಾನದ ಮಾರ್ಚೆಲಾ ರಾಜ ತನ್ನ ಅತ್ಯಂತ ಬುದ್ಧಿವಂತ ಮಂತ್ರಿ ಬ್ರಹ್ಮನಾಯ್ಡುವಿನ ಬೆಂಬಲದೊಂದಿಗೆ ರಾಜ್ಯಭಾರ ನಡೆಸುತ್ತಿರುತ್ತಾನೆ. ಆ ಕಾಲದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ನಾಮ ಮಾಡಬೇಕು ಎನ್ನುವ ನಿಟ್ಟಿನಲ್ಲಿ ತನ್ನ ಸಂಸ್ಥಾನದಲ್ಲಿ ಚೇಪಾಕೂಡು ಎಂಬ ಒಂದು ಪದ್ಧತಿಯನ್ನು ಜಾರಿಗೆ ತರುತ್ತಾನೆ.ಇದು ಎಲ್ಲಾ ಜಾತಿಯ ಜನರು ಒಂದೇ ಕಡೆ ಊಟಕ್ಕೆ ಸೇರುವ ಒಂದು ರೀತಿಯಾದ ಪದ್ಧತಿ. ಈ ಒಂದು ಪದ್ಧತಿಯನ್ನು ಸಂಸ್ಥಾನದ ಜನರು ಬಹಳ ಸಂತಸಗೊಂಡಿರುತ್ತಾರೆ. ರಾಜನ ಈ ನಡೆಗೆ ಬಹುಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಆದ್ರೆ ಇದು ಹೆಚ್ಚು ದಿನ ನಡೆಯುವುದಿಲ್ಲ, ಗುಜರಾಲಾದಲ್ಲಿ ರಾಜ್ಯಭಾರ ನಡೆಸುತ್ತಿದ್ದ ಅವನದೇ ದಾಯಾದಿಗೆ ನಾಯಕಿ ನಾಗಮ್ಮ ಎಂಬ ಮಂತ್ರಿಯಿರುತ್ತಾಳೆ. ಅತ್ಯಂತ ಕುತಂತ್ರದ ಮಂತ್ರಿಯಾಗಿದ್ದ ಈಕೆ ಎರಡು ಸಂಸ್ಥಾನಗಳ ರಾಜರಾಗಿದ್ದ ಅಣ್ಣ ತಮ್ಮಂದಿರ ನಡುವೆ ಒಂದು ಬೆಂಕಿಯ ಕಿಡಿಯನ್ನು ಹೊತ್ತಿಸುತ್ತಾಳೆ .ಚೇಪಾಕೂಡು ಪದ್ಧತಿಯ ಬಗ್ಗೆ ಶುರುವಾದ ಸಣ್ಣದೊಂದು ಜಗಳ ದೊಡ್ಡ ಜ್ವಾಲೆಯಾಗಿ ಹಬ್ಬುತ್ತದೆ. ಜ್ವಾಲೆ ಯುದ್ಧವಾಗಿ ಸಾವಿರಾರು ಜನರ ಮಾರಣಹೋಮವೆ ನಡೆದು ಹೋಗುತ್ತದೆ. ಅಂದು ಶುರುವಾದ ರಕ್ತರಾಜಕೀಯ ಇಂದಿಗೂ ಕೂಡ ಪಲ್ನಾಡು ಹಾಗೂ ರಾಯಲಸೀಮೆಯಲ್ಲಿ ಜೀವಂತಾವಾಗಿಯೇ ಇದೆ.. ಅಂದು ಇದ್ದ ಕ್ರೌರ್ಯದ ಕಾವೇ ಇಂದಿಗೂ ಇದೆ. ಅದು ಎಂದಿಗೂ ತಣ್ಣಗಾಗುವ ಸೂಚನೆಯನ್ನೂ ಕೊಟ್ಟಿಲ್ಲ. ಅಂದು ಹರಿದ ರಕ್ತಪಾತದ ಚಕ್ರ ಇಂದಿಗೂ ತಿರುಗುತ್ತಲೇ ಇದೆ. ಎರಡು ಸಂಸ್ಥಾನಗಳ ನಡುವೆ ಶುರುವಾದ ಯುದ್ಧ ನೆಲದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಚಾಚಿಕೊಂಡಿದೆ. ಅಂದು ಬಡಿದಾಡಿದ ರಾಜರು ಇಂದು ರಾಜಕೀಯ ಪಕ್ಷಗಳ ನಾಯಕರಲ್ಲಿ ಕಾಣಸಿಗುತ್ತಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌.. ಮಗ ತಾಯಿಯ ಮುಖ ನೋಡುವ ಮುನ್ನವೇ ಅಂತ್ಯಕ್ರಿಯೆ

ರಾಜಕೀಯ ವೈಷಮ್ಯಕ್ಕೆ ಬಲಿಯಾದ ರಾಜಕೀಯ ನಾಯಕರು ಯಾರು..? 

ಅಂದಿನ ರಕ್ತದಾಹ, ಹಿಂಸಾಚಾರ ಸೇಡಿನ ಕಿಚ್ಚು ಇಂದಿಗೂ ಕೂಡ ಈ ನೆಲದಲ್ಲಿ ಹಾಸುಹೊಕ್ಕಾಗಿದೆ. ರಾಜಕೀಯ ಸೇಡು ಅನ್ನೋದು ಯಾವ ಮಟ್ಟಿಗೆ ಹೋಗಿದೆ ಅನ್ನೋದಕ್ಕೆ ಪ್ರತಿಬಾರಿಯೂ ಆಂಧ್ರಪ್ರದೇಶ ಸಾಕ್ಷಿಯಾಗುತ್ತಲೇ ಇದೆ. ಅನೇಕ ರಾಜಕೀಯ ಮುಖಂಡರು ಸೇಡಿನಿಂದಾಗಿಯೇ ಜೀವ ಕಳೆದುಕೊಂಡಿದ್ದಾರೆ. ವೆಂಗವೀಟಿ ದೇವಿನೇನಿ ಅನ್ನೋ ಕುಟುಂಬಗಳ ಯುದ್ಧವೂ ಕೂಡ ಈ ಭಾಗದಲ್ಲಿ ದೊಡ್ಡದಾಗಿ ನಡೆದಿದೆ, ಕಾಪು ಮತ್ತು ಕಮ್ಮಾ ಅನ್ನೋ ಸಮುದಾಯಗಳ ನಡುವೆಯೂ ದೊಡ್ಡ ಯುದ್ಧಗಳು ನಡೆದಿವೆ. ವೆಂಗವಾಟಿ ದೇವಿನೇನನಿ ಕುಟುಂಬಗಳ ಬಡಿದಾಟದಲ್ಲಿ ಕಾಂಗ್ರೆಸ್​ನ ನಾಯಕ ಹಾಗೂ ಅಂದಿನ ಕಾಂಗ್ರೆಸ್ ಶಾಸಕರಾಗಿದ್ದ ವೆಂಗಾವೀಟಿ ಮೋಹನ ರಂಗಾ ರಾವ್​ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಟೀ ಅಂಗಡಿಯೊಂದರಲ್ಲಿ ಚಹಾ ಕುಡಿಯುತ್ತಾ ಕುಳಿತಿದ್ದಾಗ ಮೋಹನರಂಗಾ ಅವರ ಕೊಲೆಯೊಂದು ನಡೆದು ಹೋಗುತ್ತದೆ. ಆಂಧ್ರಪ್ರದೇಶದಲ್ಲಿ 1988ರಲ್ಲಿಯೇ ಇಂತಹದೊಂದು ರಾಜಕೀಯ ಮಹಾಹತ್ಯೆಯು ನಡೆದು ಹೋಗಿತ್ತು. ಅದು ಕೂಡ ಬಣ ಬಡಿದಾಟ ತಾರಕಕ್ಕೇರಿ, ಹಿಂಸಾಚಾರ ಭುಗಿಲೆದ್ದ ಸಮಯದಲ್ಲಿಯೇ ವೆಂಗಾವೀಟಿ ಮೋಹನ್ ರಾವ್ ತಮ್ಮ ಪ್ರಾಣ ಕಳೆದುಕೊಂಡಿದ್ರು ಮಾಜಿ ಮಂತ್ರಿ ಜಿ ಸಿ ದಿವಾಕರ್ ರೆಡ್ಡಿ ಮೇಲೆ ಕೂಡ ಒಂದು ಬಾರಿ ಅವರ ಮನೆಯಲ್ಲಿಯೇ ಮಾರಣಾಂತಿಕ ಹಲ್ಲೆಯಾಗಿತ್ತು.

ಇದನ್ನೂ ಓದಿ:  ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಶರಣು

ಇದೆಲ್ಲವೂ ಒಂದು ಹಂತವಾದ್ರೆ ಟಿಡಿಪಿ ಸೃಷ್ಟಿಯಾಗಿ ಒಂದು ವರ್ಷದ ಆಚರಣೆಯ ವೇಳೆಯೇ ಅಂದಿನ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರ ಮೇಲೆಯೇ ಹಲ್ಲೆಯೊಂದು ನಡೆದುಹೋಗಿತ್ತು. ಹೌದು ಇತ್ತೀಚೆಗೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೇಲೆ ವಿಜಾಗ್ ಏರ್​ಪೋರ್ಟ್​ನಲ್ಲಿ ಚಾಕುವಿನಿಂದ ಹಲ್ಲೆ ಮಾಡುವ ಯತ್ನ ನಡೆದಿತ್ತು. ಈ ಕೊಲೆ ಯತ್ನವು ಎನ್​ ಟಿ ರಾಮ್​ರಾವ್ ಅವರನ್ನು ನೆನಪಿಸಿತ್ತು. ಅವರ ಮೇಲೆಯೂ ಕೂಡ ಇದೇ ರೀತಿ 1984ರಲ್ಲಿ ಮಾರಣಾಂತಿಕ ಹಲ್ಲೆ ನಡೆದು ಹೋಗಿತ್ತು. 22 ವರ್ಷದ ಮಲ್ಲೆಲಾ ಬಾಬ್ಜಿ ಎಂಬ ವ್ಯಕ್ತಿಯು ಅಂದಿನ ಸಿಎಂ ಆಗಿದ್ದ ಎನ್ ರಾಮ್​ರಾವ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಟಿಡಿಪಿ ಮೊದಲನೇ ವಾರ್ಷಿಕೋತ್ಸವವನ್ನು ಆಚರಿಸಲು ಎನ್​ಟಿ ರಾಮ್​ರಾವ್ ಲಾಲಬಾಹ್ದೂರ್ ಶಾಸ್ತ್ರಿ ಕ್ರೀಡಾಂಗಣಕ್ಕೆ ಬಂದಿದ್ದರು. ಈ ವೇಳೆ ಚಾಕು ಹಿಡಿದುಕೊಂಡು ನುಗ್ಗಿದ ಮಲ್ಲೆಲಾ ಬಾಬ್ಜಿ ಇಂದಿರಾ ಗಾಂಧಿ ಜಿಂದಾಬಾದ್ ಎನ್ನುತ್ತಲೇ ಎನ್​ಟಿಆರ್ ಮೇಲೆ ದಾಳಿ ನಡೆಸಿದ್ದ .

ಈ ಎಲ್ಲಾ ರಾಜಕೀಯ ಹತ್ಯೆಗಳು, ಮಾರಣಾಂತಿಕ ಹಲ್ಲೆಗಳು ಆಂಧ್ರಪ್ರದೇಶದಲ್ಲಿ ಶತಮಾನಗಳಿಂದಲೂ ನಡೆಯುತ್ತಲೇ ಇವೆ.. ವೆಂಗಾವೀಟಿ ದೇವಿನೆನನ, ಕಾಪು ಕಮ್ಮಾ ಅನ್ನೋ ಸಮುದಾಯಗಳ ಬಡಿದಾಡ ಇಂದಿಗೂ ಕೂಡ ನಿರಂತರವಾಗಿಯೇ ನಡೆಯುತ್ತಿದೆ. ಚಂದ್ರಬಾಬು ನಾಯ್ಡು ಹಾಗೂ ಪವನಕಲ್ಯಾಣ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಾಗ ಕಾಪು ಮತ್ತು ಕಮ್ಮಾ ಸಮುದಾಯ ಒಂದಾಯಿತು ಎಂದೇ ಎಲ್ಲರು ಅಂದುಕೊಂಡಿದ್ದರು. ಆದ್ರೆ ಅದ್ಯಾವ ಲಕ್ಷಣಗಳು ಕಾಣುತ್ತಿಲ್ಲ. ಹಳೆಯ ವೈಷಮ್ಯದ ವಿಷದ ಬೀಜ ವೃಕ್ಷವಾಗಿ ಹೆಮ್ಮರವಾಗಿ ಬೆಳೆದಿದೆ. ವೈಷಮ್ಯ, ಸೇಡು, ರಕ್ತಪಾತ ಇವೆಲ್ಲವೂ ಆಂಧ್ರಪ್ರದೇಶದ ರಾಜ್ಯ ರಾಜಕೀಯದಲ್ಲಿ ಶತಮಾನಗಳಿಂದಲೂ ಇಂಜೆಕ್ಟ್ ಆಗಿರುವ ಒಂದು ವಿಷ. ಅಷ್ಟ ಸಹಜವಾಗಿ ಸರಳವಾಗಿ ಈ ರಕ್ತದಾಹ ಕೊನೆಯಾಗುವುದು ಸ್ವಲ್ಪ ಕಷ್ಟಸಾಧ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾಕಿಷ್ಟು ರಕ್ತದಾಹ? ಆಂಧ್ರಪ್ರದೇಶ ರಾಜಕೀಯದ ರಕ್ತಚರಿತ್ರೆಗಿದೆ 12ನೇ ಶತಮಾನದ ನಂಟು; ಏನದು?

https://newsfirstlive.com/wp-content/uploads/2024/07/andra-3.jpg

Load More