ಲೇನ್ ರಸ್ತೆಯ ಖಾಲಿ ಜಾಗದಲ್ಲಿ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕ
ಕರಣ್ ರೀಲ್ಸ್ಗಾಗಿ ಌಕ್ಟಿಂಗ್ ಮಾಡುತ್ತಿದ್ದಾನೆ ಎಂದು ಭಾವಿಸಿದ್ದ ವಿದ್ಯಾರ್ಥಿಗಳು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ನೋಡಿದ ನೆಟ್ಟಿಗರು ಶಾಕ್
ಮೊರೆನಾ: ಇತ್ತೀಚಿನ ದಿನಗಳಲ್ಲಿ ಕೆಲ ಯುವಕ ಯುವತಿಯರು ವೀವ್ಸ್ಗಾಗಿ ಏನೇನೋ ಕಸರತ್ತು ಮಾಡುತ್ತಾ ಇರುತ್ತಾರೆ. ಕೆಲವರು ಜಲಪಾತದ ತುತ್ತ ತುದಿಗೆ ಹೋಗಿ ವಿಡಿಯೋ ಮಾಡಿದ್ರೆ, ಇನ್ನೂ ಕೆಲವರು ವಾಹನಗಳು ಬರುತ್ತಿದ್ದರು ಅದನ್ನು ಲೆಕ್ಕಿಸದೆ ರೀಲ್ಸ್ ಮಾಡಿ ಫಜೀತಿಗೆ ಸಿಕ್ಕಿ ಹಾಕಿಕೊಳ್ತಾರೆ. ಆದರೆ 7ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ರೀಲ್ಸ್ ಮಾಡಲು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಸಖತ್ತಾಗಿದೆ.. ಸೂಪರ್ ಆಗಿದೆ! ಸೋಷಿಯಲ್ ಮೀಡಿಯಾದಲ್ಲಿ ಮ್ಯಾಜಿಕ್ ಮಾಡ್ತಿದೆ ‘ದ್ವಾಪರ‘ ಸಾಂಗ್!
ಹೌದು, ಈ ಘಟನೆ ನಡೆದಿದ್ದು ಮಧ್ಯಪ್ರದೇಶ ಅಂಬಾದಲ್ಲಿ. ಕರಣ್ ಪರ್ಮಾರ್ (11) ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೃತ ಕರಣ್ ಪರ್ಮಾರ್ ಲೇನ್ ರಸ್ತೆಯ ಖಾಲಿ ಜಾಗದಲ್ಲಿ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಅದೇ ವೇಳೆ ಹಗ್ಗವನ್ನು ಜೋತು ಹಾಕಿ ರೀಲ್ ಮಾಡಲು ಮುಂದಾಗಿದ್ದಾನೆ. ಆದರೆ ಇದೇ ವೇಳೆ ಆ ಹಗ್ಗ ಏಕಾಏಕಿ ಬಾಲಕನ ಕೊರಳಿಗೆ ಸಿಕ್ಕಿಹಾಕಿಕೊಂಡಿದೆ. ಇದರಿಂದ ಬಾಲಕ ಒದ್ದಾಡಲು ಶುರು ಮಾಡಿದ್ದಾನೆ. ಆದರೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವಿದ್ಯಾರ್ಥಿಗಳು ರೀಲ್ಸ್ಗಾಗಿ ಕರಣ್ ಪರ್ಮಾರ್ ಌಕ್ಟಿಂಗ್ ಮಾಡುತ್ತಿರಬಹುದು ಎಂದು ತಪ್ಪಾಗಿ ಗ್ರಹಿಸಿದ್ದಾರೆ. ಆದರೆ ಕೆಲ ಸಮಯದ ಬಳಿಕ ವಿದ್ಯಾರ್ಥಿಗಳು ಕರಣ್ ಪರ್ಮಾರ್ ಬಳಿ ಹೋಗುವಷ್ಟರಲ್ಲೇ ಆತ ಮೃತಪಟ್ಟಿದ್ದಾನೆ. ಆದರೆ ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
#WATCH | Dangerous Stunt Gone Wrong: 11-Year-Old Dies While Making a Reel with Noose In Morena; Friends Mistake Suffocation for Acting#MPNews #MadhyaPradesh pic.twitter.com/Ewylifbr8g
— Free Press Madhya Pradesh (@FreePressMP) July 21, 2024
ಈ ವಿಷಯ ತಿಳಿದ ಕೂಡಲೇ ಬಾಲಕನ ಪೋಷಕರು ಸ್ಥಳಕ್ಕೆ ದೌಡಾಯಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಬಾಲಕ ಮೃತಪಟ್ಟಿದ್ದಾನೆ ಅಂತ ವೈದ್ಯರು ತಿಳಿಸಿದ್ದಾರೆ. ಈ ಘಟನೆ ಬಳಿಕ ಅಂಬಾ ಪೊಲೀಸರು ಸಿವಿಲ್ ಆಸ್ಪತ್ರೆಗೆ ಆಗಮಿಸಿ ಪೋಷಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ