newsfirstkannada.com

×

BREAKING: ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಫೋನ್​ ಪೇ CEO ಸಮೀರ್​​ ನಿಗಮ್​​!

Share :

Published July 21, 2024 at 9:32pm

Update July 21, 2024 at 11:17pm

    ಫೋನ್‌ ಪೇ ಅನ್ ಇನ್​ಸ್ಟಾಲ್​ ಮಾಡಿ ಸಮರ ಸಾರಿದ್ದ ಕನ್ನಡಿಗರು..!

    ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿರೋಧಿಸಿದ್ದ ಫೋನ್​ ಪೇ CEO

    ಎಚ್ಚೆತ್ತು ಕನ್ನಡಿಗರ ಕ್ಷಮೆ ಕೇಳಿದ ಫೋನ್​​ ಪೇ ಸಿಇಒ ಸಮೀರ್ ನಿಗಮ್

ಬೆಂಗಳೂರು: ಫೋನ್‌ ಪೇ ಅನ್ ಇನ್​ಸ್ಟಾಲ್​ ಮಾಡಿ ಕನ್ನಡಿಗರು ಸಮರ ಸಾರಿದ್ದರು. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಸಂಬಂಧ ಪೋನ್ ಪೇ ಸಿಇಒ ಸಮೀರ್ ನಿಗಮ್ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ವ್ಯಾಪಕ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಫೋನ್​​ ಪೇ ಸಿಇಒ ಸಮೀರ್ ನಿಗಮ್ ಕನ್ನಡಿಗರ ಕ್ಷಮೆ ಕೇಳಿದ್ದಾರೆ.

ಸಮೀರ್​​ ನಿಗಮ್​​​ ಕ್ಷಮೆ ಕೇಳಿದ್ದು ಹೇಗೆ..?

ಈ ಕುರಿತು ಟ್ವೀಟ್​ ಮಾಡಿರೋ ಪೋನ್ ಪೇ ಸಿಇಒ ಸಮೀರ್ ನಿಗಮ್, ಫೋನ್ ಪೇ ಶುರುವಾಗಿದ್ದೆ ಬೆಂಗಳೂರಲ್ಲಿ. ಇದರ ಬಗ್ಗೆ ನಮಗೆ ಸಾಕಷ್ಟು ಹೆಮ್ಮೆ ಇದೆ. ಬೆಂಗಳೂರು ವಿಶ್ವದರ್ಜೆಯ ತಂತ್ರಜ್ಞಾನ ಪ್ರತಿಭೆ ಮತ್ತು ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ಶುರುವಾದ ಫೋನ್​ ಪೇ ಇಂದು ಇಡೀ ಭಾರತದಾದ್ಯಂತ 55 ಕೋಟಿಗೂ ಹೆಚ್ಚು ಜನ ಬಳಕೆ ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ.

ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂಬುದಕ್ಕೆ ಅರ್ಹ ನಗರ. ಕರ್ನಾಟಕ ದೇಶದ ವಿವಿಧ ಭಾಗಗಳ ಅತ್ಯಂತ ಪ್ರತಿಭಾವಂತ ಯುವ ಮನಸ್ಸುಗಳನ್ನು ಆಕರ್ಷಿಸಿದೆ. ನೀವು ನೀಡಿದ ಬೆಂಬಲಕ್ಕೆ ಒಂದು ಕಂಪನಿಯಾಗಿ ನಾವು ತುಂಬಾ ಕೃತಜ್ಞರಾಗಿದ್ದೇವೆ. ಎಲ್ಲಾ ಭಾರತೀಯರಿಗೆ ನ್ಯಾಯಯುತ, ಪಕ್ಷಪಾತವಿಲ್ಲದ ಉದ್ಯೋಗಾವಕಾಶ ಒದಗಿಸುವುದು ನಮ್ಮ ಗುರಿ. ಕರ್ನಾಟಕ ಭಾರತಕ್ಕೆ ಹೆಚ್ಚಿನ ಆರ್ಥಿಕ ಮೌಲ್ಯ ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಕನ್ನಡಿಗರ ಉದ್ಯೋಗ ಮೀಸಲಾತಿ ಮಸೂದೆ ಬಗ್ಗೆ ನಾನು ನೀಡಿದ್ದ ಹೇಳಿಕೆ ವಾಪಸ್​ ಪಡೆಯುತ್ತೇನೆ. ಇದರ ಉದ್ದೇಶವೇ ಬೇರೆ ಆಗಿತ್ತು. ಕರ್ನಾಟಕವನ್ನು ಅವಮಾನಿಸುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಹೇಳಿಕೆ ನಿಮ್ಮ ಭಾವನೆಗಳನ್ನು ನೋಯಿಸಿದ್ದರೆ ಕ್ಷಮೆ ಕೇಳುತ್ತೇನೆ. ಕನ್ನಡ ಭಾಷೆ ಬಗ್ಗೆ ನನಗೆ ಅಪಾರ ಗೌರವವಿದೆ. ಲಕ್ಷಾಂತರ ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸಲು ಸಹಾಯ ಮಾಡಲು ನಾನು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: KL ರಾಹುಲ್​ ಕ್ಯಾಪ್ಟನ್; ದ್ರಾವಿಡ್​​ ಆರ್​​ಸಿಬಿ ಹೆಡ್​ ಕೋಚ್; ಹೇಗಿರುತ್ತೆ ಕಾಂಬಿನೇಷನ್..​​?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

BREAKING: ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಫೋನ್​ ಪೇ CEO ಸಮೀರ್​​ ನಿಗಮ್​​!

https://newsfirstlive.com/wp-content/uploads/2024/07/Sameer-Nigam.jpg

Load More