newsfirstkannada.com

×

ಮುಂಬೈ ತಂಡದಲ್ಲಿ ಅಲ್ಲೋಲ ಕಲ್ಲೋಲ.. ರೋಹಿತ್, ಸೂರ್ಯಗೆ ಗಾಳ ಹಾಕಿರೋ 2 ಫ್ರಾಂಚೈಸಿ ಇವೆ!

Share :

Published July 22, 2024 at 11:43am

    ಅವಮಾನ ಸುಲಭಕ್ಕೆ ಮರೆಯೋ ಜಾಯಮಾನ ರೋಹಿತ್​​ದ್ದಲ್ಲ

    ಹೊಸ ಟೀಮ್ ಸೇರಲು ಸಜ್ಜಾದ ಚಾಂಪಿಯನ್​ ಕ್ಯಾಪ್ಟನ್ ರೋಹಿತ್​​

    ಐಪಿಎಲ್​ನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ರೋಹಿತ್​ ಶರ್ಮಾ?

ಭಾರತೀಯ ಕ್ರಿಕೆಟ್​ ಲೋಕದಲ್ಲಿ ಐಪಿಎಲ್​ ಸುದ್ದಿಗಳು ಸಖತ್​ ಸೌಂಡ್​ ಮಾಡ್ತಿವೆ. ಮೆಗಾ ಆಕ್ಷನ್​ಗೂ ಮುನ್ನ ರಿಟೈನ್​-ರಿಲೀಸ್​ ಲೆಕ್ಕಾಚಾರಗಳು ಆರಂಭವಾಗಿದ್ದು, ದಿನಕ್ಕೊಂದು ಶಾಕಿಂಗ್​​ ಸುದ್ದಿಗಳು ಹೊರ ಬೀಳ್ತಿವೆ. ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯಲ್ಲಂತೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಫ್ರಾಂಚೈಸಿ ಕಂಡ ಸಕ್ಸಸ್​​​ಫುಲ್​ ಕ್ಯಾಪ್ಟನ್​ ರೋಹಿತ್​ ಶರ್ಮಾ, ಅಂಬಾನಿ ಬ್ರಿಗೆಡ್​ಗೆ​ ಗುಡ್​ ಬೈ ಹೇಳಲು ರೆಡಿಯಾಗಿದ್ದಾರೆ.

ಇದನ್ನೂ ಓದಿ: ಗಂಭೀರ್​ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?

ಕಳೆದ ಐಪಿಎಲ್​ ಆರಂಭಕ್ಕೂ ಮುನ್ನ ರೋಹಿತ್​ ಶರ್ಮಾಗೆ ಕೊಕ್​ ನೀಡಿದ್ದ ಅಂಬಾನಿ ಬ್ರಿಗೆಡ್​ ಹಾರ್ದಿಕ್​ ಪಾಂಡ್ಯನ ಕರೆತಂದು ಪಟ್ಟ ಕಟ್ಟಿತ್ತು. 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ, ಫ್ರಾಂಚೈಸಿ ಕಂಡ ಸರ್ವಶ್ರೇಷ್ಠ ನಾಯಕನನ್ನ ಕನಿಷ್ಠ ಒಂದು ಮಾತು ಕೇಳದೆ ಗೇಟ್​ಪಾಸ್​​ ನೀಡಿತ್ತು. ಇದ್ರಿಂದಾಗಿ ಒನ್​ ಫ್ಯಾಮಿಲಿ ಒಡೆದ ಮನೆಯಾಗಿ ಬದಲಾಗಿತ್ತು. ನೂತನ ನಾಯಕನದ್ದೊಂದು, ಹಳೆ ನಾಯಕ ಹಾಗೂ ಆತನ ಬೆಂಬಲಿಗರದ್ದೊಂದು ಬಣ ಸೃಷ್ಟಿಯಾಗಿತ್ತು. ಅಂದು ಬಂಡಾಯ ಎದ್ದವರು, ಇದೀಗ ತಂಡಕ್ಕೆ ಗುಡ್​ ಬೈ ಹೇಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮಫ್ಲರ್​​ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?

ಮುಂಬೈ ತೊರೆಯಲು ‘ಸ್ವಾಭಿಮಾನಿ’ ರೋಹಿತ್ ರೆಡಿ.!

ಟೀಮ್​ ಇಂಡಿಯಾಗೆ ಪ್ರತಿಷ್ಠಿತ ವಿಶ್ವಕಪ್​ ಗೆಲ್ಲಿಸಿಕೊಟ್ಟಿರೋ ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಆಡಬೇಕಂದ್ರೆ ಹೇಗೆ ಸಾಧ್ಯ.? ಹೇಳಿ.., ಕೇಳಿ., ರೋಹಿತ್​ ಶರ್ಮಾ ಸ್ವಾಭಿಮಾನಿ. ಅವಮಾನವನ್ನ ಸುಲಭಕ್ಕೆ ಮರೆಯೋ ಜಾಯಮಾನ ರೋಹಿತ್​​ದ್ದಲ್ಲ. ಕಳೆದ ಸೀಸನ್​ನಲ್ಲೇ ಸಾಕಷ್ಟು ನೋವುಂಡ ರೋಹಿತ್​ ಶರ್ಮಾ, ಆದ ಅಪಮಾನ, ನೋವನ್ನ ನುಂಗಿಕೊಂಡು ಆಟವಾಡಿದ್ರು. ಆದ್ರೆ, ಈ ಸೀಸನ್​ನಲ್ಲಿ ಆಡೋ ಮಾತೇ ಇಲ್ಲ..

ಇದನ್ನೂ ಓದಿ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!

ನಾಯಕತ್ವದಿಂದ ತೆಗದು ಹಾಕಿದ ಬೆನ್ನಲ್ಲೇ ರೋಹಿತ್​ ಮುಂಬೈಗೆ ಗುಡ್​ ಬೈ ಹೇಳೋ ಸುದ್ದಿ ಕಳೆದ ಆವೃತ್ತಿಯಲ್ಲೇ ಹರಿದಾಡಿತ್ತು. ಆದ್ರೆ, ಟೂರ್ನಿಗೆ ಸಮಯ ಹತ್ತಿರವಾಗಿದ್ದ ಕಾರಣಕ್ಕೋ ಏನೋ, ಒಲ್ಲದ ಮನಸ್ಸಿನಲ್ಲೇ ಮುಂಬೈ ಪರ ಮುಂಬೈಕರ್ ಆಡಿದ್ರು. ಕಳೆದ ಸೀಸನ್​ನಲ್ಲೇ ಒಂದು ಕಾಲು ಹೊರಗಿಟ್ಟಿದ್ದ ರೋಹಿತ್​, ಇದೀಗ ಮುಂಬೈಗೆ ಟಾಟಾ ಮಾಡಲು ಸಜ್ಜಾಗಿದ್ದಾರೆ. ಮುಂಬೈ ತೊರೆಯುವ ನಿರ್ಧಾರವನ್ನ ರೋಹಿತ್​ ತಳೆದಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಕೆಕೆಆರ್​​ನಿಂದ ರೋಹಿತ್​ ಶರ್ಮಾಗೆ ಆಫರ್​.!

ಈಗಾಗಲೇ ಕೆಕೆಆರ್​​ ಫ್ರಾಂಚೈಸಿ ಮುಂಬೈನ ಮತ್ತೊಬ್ಬ ಅಸಮಾಧಾನಿತ ಆಟಗಾರ ಸೂರ್ಯಕುಮಾರ್​ಗೆ​ ಬಿಗ್​ ಆಫರ್​ ಮಾಡಿದೆ. ಕ್ಯಾಪ್ಟನ್ಸಿ ಪಟ್ಟದೊಂದಿಗೆ, ₹30 ಕೋಟಿಯ ಆಫರ್​​ನ ಕೆಕೆಆರ್​ ಮ್ಯಾನೇಜ್​ಮೆಂಟ್​ ಮಾಡಿದೆ. ಟೀಮ್​ ಇಂಡಿಯಾ T20 ತಂಡದ ಹಾಲಿ ನಾಯಕನ ಬೆನ್ನಲ್ಲೇ, ಮಾಜಿ ನಾಯಕನಿಗೂ ಕೆಕೆಆರ್​ ಬಲೆ ಬೀಸಿದೆ. ಮೂಲಗಳ ಪ್ರಕಾರ ರೋಹಿತ್​ ಶರ್ಮಾರನ್ನೂ ಕೆಕೆಆರ್​ ಫ್ರಾಂಚೈಸಿ ಈಗಾಗಲೇ ಸಂಪರ್ಕಿಸಿ ಚರ್ಚಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಯುವಕ ಜೋಗ ಜಲಪಾತದಲ್ಲಿ ಕಣ್ಮರೆ.. ಶೋಧ ಕಾರ್ಯ

ಹಾರ್ದಿಕ್​ಗೆ ಪಟ್ಟ ಕಟ್ಟಿದಾಗ ಸೂರ್ಯಕುಮಾರ್​ ಯಾದವ್​ ಕೂಡ ಬೇಸರಗೊಂಡಿದ್ರು. ರೋಹಿತ್​ ಶರ್ಮಾ ಜೊತೆಗೆ ಸೂರ್ಯ ಹೆಚ್ಚು ಗುರುತಿಸಿಕೊಂಡಿದ್ರು. ಸೂರ್ಯ​ ಸಕ್ಸಸ್​ ಕಂಡಿದ್ದು ಕೂಡ ರೋಹಿತ್​ ನಾಯಕತ್ವದಡಿಯಲ್ಲೇ. ಈಗ ಟೀಮ್​ ಇಂಡಿಯಾ ನಾಯಕತ್ವ ಸೂರ್ಯನಿಗೆ ಸಿಕ್ಕಿದ್ರ, ಹಿಂದೆಯೋ ರೋಹಿತ್​​ ಪಾತ್ರವಿದೆ. ಇಬ್ಬರ ನಡುವೆ ಉತ್ತಮ ಬಾಂಡಿಂಗ್​ ಇರೋದ್ರಿಂದ ಸೂರ್ಯ ನಾಯಕತ್ವದಲ್ಲಿ ಆಡಲು ರೋಹಿತ್​ಗೆ ಯಾವುದೇ ಸಮಸ್ಯೆ ಇರಲ್ಲ. ಹೀಗಾಗಿ ​ಸೂರ್ಯ ಕೆಕೆಆರ್​​ ಸಾರಥ್ಯ ವಹಿಸಿಕೊಂಡ್ರೆ, ರೋಹಿತ್​​ ಕೆಕೆಆರ್​ ಸೇರೋದು ಬಹುತೇಕ ಕನ್​​ಫರ್ಮ್​ ಆದಂತೆ.

ರೋಹಿತ್​ ಶರ್ಮಾ ಮೇಲೆ ಡೆಲ್ಲಿ ಕ್ಯಾಪಿಟಲ್ಸ್​ ಕಣ್ಣು.!

ಕಳೆದ ಸೀಸನ್​ನಲ್ಲಿ ರೋಹಿತ್​ಗೆ ಮುಂಬೈ ಫ್ರಾಂಚೈಸಿ ಅವಮಾನ ಮಾಡಿದ ಸಮಯದಿಂದ ಡೆಲ್ಲಿ ಫ್ರಾಂಚೈಸಿ ಹಿಟ್​ಮ್ಯಾನ್​​ ಮೇಲೆ ಕಣ್ಣಿಟ್ಟಿದೆ. ಇದೀಗ ರಿಷಬ್​​ ಪಂತ್ ತಂಡವನ್ನ ತೊರೆಯಲು ಸಜ್ಜಾಗಿದ್ದಾರೆ. ಫ್ರಾಂಚೈಸಿ ಕೂಡ ಸ್ಟಾರ್​​ ಕ್ಯಾಪ್ಟನ್​ ಹುಡುಕಾಟದಲ್ಲಿದೆ. ಭವಿಷ್ಯದ ತಂಡ ಕಟ್ಟೋ ಸಾಮರ್ಥ್ಯ ರೋಹಿತ್​ಗಿರೋದ್ರಿಂದ ಡೆಲ್ಲಿ ಫ್ರಾಂಚೈಸಿ ನಾಯಕತ್ವದ ಆಫರ್​ ನೀಡೋ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರೋಹಿತ್​​ ಡೆಲ್ಲಿ ಸೇರಿದ್ದೇ ಆದ್ರೆ, ತಂಡದ ಚರಿಷ್ಮಾನೇ ಬದಲಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮುಂಬೈ ತಂಡದಲ್ಲಿ ಅಲ್ಲೋಲ ಕಲ್ಲೋಲ.. ರೋಹಿತ್, ಸೂರ್ಯಗೆ ಗಾಳ ಹಾಕಿರೋ 2 ಫ್ರಾಂಚೈಸಿ ಇವೆ!

https://newsfirstlive.com/wp-content/uploads/2024/07/ROHIT_SHARMA-9.jpg

Load More