newsfirstkannada.com

×

ಮದ್ವೆಯಾದ 3 ನಿಮಿಷಕ್ಕೆ ಡಿವೋರ್ಸ್​ ಪಡೆದ ದಂಪತಿ.. ಕಾರಣ ಮಾತ್ರ ವಿಚಿತ್ರ, ವಿಚಿತ್ರ..!

Share :

Published July 23, 2024 at 9:41am

Update July 24, 2024 at 11:45am

    ಮದ್ವೆಯಾದ 3 ನಿಮಿಷಕ್ಕೆ ಮುರಿದು ಬಿದ್ದ ಸಂಬಂಧ

    ವರನಿಗೆ ಟಾಟಾ ಗುಡ್​ ಬೈ ಹೇಳಿದ ವಧು.. ಯಾವ ಕಾರಣಕ್ಕೆ?

    ಡಿವೋರ್ಸ್​ ಮೂಲಕ ಬೇರೆ ಬೇರೆಯಾದ ನ್ಯೂ ಕಪಲ್​

ಮದುವೆಯ ಈ ಬಂಧ.. ಅನುರಾಗದ ಅನುಬಂಧ.. ಏಳೇಳು ಜನುಮದಲ್ಲೂ ತೀರದ ಸಂಬಂಧ.. ಎಂಬ ಎಸ್​ಬಿಬಿ ಕಂಠದಿಂದ ಮೊಳಗಿದ್ದ ‘ಸೀತಾ’ ಸಿನಿಮಾದ ಹಾಡು ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಸಂಬಂಧವನ್ನೇ ಗಟ್ಟಿಗೊಳಿಸುವ ತಾಖತ್ತು​ ಅದಕ್ಕಿದೆ. ಆದರೆ ಈಗಿನ ಕಾಲಘಟ್ಟ ಬದಲಾಗಿದೆ. ಅಮ್ಮ ಲೂಸಾ, ಅಪ್ಪ ಲೂಸಾ ಎಂಬ ಹಾಡುಗಳ ನಡುವೆ ದಂಪತಿ ಸಂಬಂಧ 3 ನಿಮಿಷದಲ್ಲಿ ಮುರಿದು ಬಿದ್ದರೂ ಅಚ್ಚರಿಯೇನಿಲ್ಲ ಬಿಡಿ. ಅದಕ್ಕೆ ಉದಾಹರಣೆ ಎಂಬಂತೆ ಕುವೈತ್​ನಲ್ಲೊಂದು ಜೋಡಿ ಮದ್ವೆಯಾದ 3 ನಿಮಿಷಕ್ಕೆ ಬೇರೆಯಾಗಿದ್ದಾರೆ. ಜಸ್ಟ್​ ಡಿವೋರ್ಸ್​ ಎಂಬ ಸಿಂಪಲ್​ ಪದದ ಮೊರೆ ಹೋಗಿ ದೂರವಾಗಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​-ಆಸ್ಟ್ರೇಲಿಯಾ ಕ್ರಿಕೆಟ್​​​ ಆಟಗಾರ್ತಿಯರ ನಡುವೆ ಲವ್​! ಉಂಗುರ ಬದಲಾಯಿಸಿಕೊಂಡ ಸಲಿಂಗಿ ಜೋಡಿ

ಕುವೈತ್​ನಲ್ಲಿ ಹುಡುಗ-ಹುಡುಗಿ ಮದುವೆಯಾಗಲು ಬಯಸುತ್ತಾರೆ. ಮದುವೆಯಾಗಿ ಕೋರ್ಟ್​​ನಿಂದ ಹೊರಬರುವಾಗಲೇ ಇಬ್ಬರ ಮದುವೆ ಮುರಿದು ಬಿದ್ದಿದೆ. 3 ನಿಮಿಷಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದಿದೆ. ಅಂದಹಾಗೆಯೇ ಇದು ಕುವೈತ್​​ನ ಅತ್ಯಂತ ಕಡಿಮೆ ಅವಧಿಯಲ್ಲಿ ವಿವಾಹವಾಗಿ ಮುರಿದ ಬಿದ್ದ ಘಟನೆಯಾಗಿದೆ.

ಡಿವೋರ್ಸ್​​ ನೀಡಲು ಕಾರಣ?

ಮದುವೆಗಾಗಿ ಚೆನ್ನಾಗಿ ರೆಡಿಯಾಗಿ ಕೋರ್ಟ್​ ಬಂದ ಜೋಡಿ. ನ್ಯಾಯಾಲಯದ ಸಮ್ಮುಖದಲ್ಲಿ ಮದುವೆಯಾದರು. ಆದರೆ ಕೋರ್ಟ್​​ನಿಂದ ಹೊರ ಬರುವಾದ ವಧು ಕಾಲು ಎಡವಿ ವರನ ಮೇಲೆ ಬೀಳುತ್ತಾಳೆ. ಆದರೆ ವರ ಆಕೆಯನ್ನು ತಳ್ಳಿ ಸ್ಟುಪಿಡ್​​ ಎಂದು ಕರೆಯುತ್ತಾನೆ.

ಇದನ್ನೂ ಓದಿ: ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್‌.. ಪೆಟ್ರೋಲ್​-ಡೀಸೆಲ್​ ಬೆಲೆ ಕಡಿಮೆಯಾಗುತ್ತಾ? ಎಷ್ಟಿದೆ?

ವರನ ಬಾಯಲ್ಲಿ ಸ್ಟುಪಿಡ್​ ಎಂಬ ಪದ ಬಂದಿದ್ದೇ ತಡ, ವಧು ಸಿಟ್ಟಿಗೆದ್ದಿದ್ದಾಳೆ. ವರನ ವಿರುದ್ಧ ಕೋರ್ಟ್​ನಲ್ಲಿ ಗುಡುಗಿದ್ದಾಳೆ. ನನಗೆ ಈ ಮದ್ವೆ ಬೇಡವೆಂದಿದ್ದಾಳೆ. ಕೊನೆಗೆ ಮದ್ವೆಗೆಂದು ಬಂದಿದ್ದ ಕೋರ್ಟ್​ನಲ್ಲಿ ಡಿವೋರ್ಸ್​ ಕೂಡ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ವೆಯಾದ 3 ನಿಮಿಷಕ್ಕೆ ಡಿವೋರ್ಸ್​ ಪಡೆದ ದಂಪತಿ.. ಕಾರಣ ಮಾತ್ರ ವಿಚಿತ್ರ, ವಿಚಿತ್ರ..!

https://newsfirstlive.com/wp-content/uploads/2024/06/Marriage.jpg

Load More