ದರ್ಶನ್ ಭೇಟಿಗೆ ಆಗಮಿಸಿದ್ದ ನಟ ಸಾಧು ಕೋಕಿಲಗೆ ನಿರಾಸೆ
ವಕೀಲರ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ಸಾಧು
ಸಾಧು ಕೋಕಿಲ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ರಾ ದರ್ಶನ್?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿರುವ ದರ್ಶನ್ ಭೇಟಿಗೆ ಸ್ಯಾಂಡಲ್‌ವುಡ್‌ನ ಅನೇಕ ನಟ, ನಟಿಯರು ಪರಪ್ಪನ ಅಗ್ರಹಾರದತ್ತ ತೆರಳುತ್ತಿದ್ದಾರೆ. ಆದರೆ, ಇಂದು ದರ್ಶನ್ ಭೇಟಿಗೆ ಆಗಮಿಸಿದ್ದ ಸಾಧು ಕೋಕಿಲ ಅವರಿಗೆ ಭಾರೀ ನಿರಾಸೆಯಾಗಿದೆ.
ನಟ ಸಾಧು ಕೋಕಿಲ ಅವರು ಇಂದು ವಕೀಲರ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಪೊಲೀಸರ ಅನುಮತಿ ಮೇರೆಗೆ ವಕೀಲರ ಜೊತೆಗೆ ಪರಪ್ಪನ ಅಗ್ರಹಾರ ಜೈಲಿಗೆ ಒಳಗಡೆ ತೆರಳಿದ್ದರು. ಆದರೆ ಇಂದು ಸಾಧು ಕೋಕಿಲ ಅವರ ಭೇಟಿಗೆ ದರ್ಶನ್ ಅವರು ನಿರಾಕರಿಸಿದ್ದಾರೆ. ಸದ್ಯ ದರ್ಶನ್ ಅವರು ಕುಟುಂಬಸ್ಥರ ಹೊರತಾಗಿ ಯಾರನ್ನು ಪ್ರತ್ಯೇಕವಾಗಿ ಭೇಟಿಯಾಗಲು ಇಚ್ಚಿಸುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್.. ಬಜೆಟ್ 2024ನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಎಷ್ಟು?
ದರ್ಶನ್ ಭೇಟಿಗಾಗಿ ಜೈಲಿನ ಒಳಗಡೆ ಹೋದ ಸಾಧು ಕೋಕಿಲ ಅವರು ಹೋದಷ್ಟು ಬೇಗನೇ ವಾಪಸ್ ಬಂದರು. ಬಳಿಕ ಮಾತನಾಡಿದ ಸಾಧು ಕೋಕಿಲ, ಇವತ್ತು ದರ್ಶನ್ ಅವರ ಭೇಟಿ ಸಾಧ್ಯವಾಗಲಿಲ್ಲ ಎಂದರು.
ಸಾಧು ಕೋಕಿಲ ಹೇಳಿದ್ದೇನು?
ನೋಡಿ ಏನಾಗಿದೆ ಅಂದ್ರೆ ಹಂಗೆಲ್ಲಾ ಮೀಟ್ ಮಾಡೋಕೆ ಆಗಲ್ಲ. ಗುರುವಾರ ಅವರ ಫ್ಯಾಮಿಲಿ ಅವರೆಲ್ಲಾ ಬರ್ತಾರೆ. ಅವರ ಜೊತೆನೇ ಬರ್ತೀನಿ. ಒಬ್ಬೊಬ್ಬರಿಗೆ ಎಂಟ್ರಿ ಕೊಡೋಕೆ ಆಗಲ್ಲ. ವಾರಕ್ಕೊಂದು ಸಾರಿ ಭೇಟಿ ಮಾಡೋಕೆ ಅವಕಾಶ ಇಲ್ಲ. ಏನು ಮಾಡೋಕೆ ಆಗಲ್ಲ. ಗುರುವಾರ ಇದೇ ಸಮಯಕ್ಕೆ ಯಾರು ಭೇಟಿ ಮಾಡೋಕೆ ಬರ್ತಾರೋ ಅವರ ಜೊತೆ ಬರ್ತೀನಿ ಎಂದು ಸಾಧು ಕೋಕಿಲ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ