ಮಕ್ಕಳ ಅಲರ್ಜಿ ಸಮಸ್ಯೆಗೆ ಅಡುಗೆ ಮನೆಯಲ್ಲಿಯೇ ಇದೆ ಮದ್ದು
ಕಡಲೆಬೀಜದಲ್ಲಿ ಅಲರ್ಜಿಯನ್ನು ತೊಲಗಿಸುವ ರಾಮಬಾಣದಂತ ಶಕ್ತಿ
ಇತ್ತೀಚೆಗೆ ಬಂದ ವರದಿಯಲ್ಲಿ ಬಡವರ ಬಾದಾಮಿಯ ಮಹಿಮೆ ಅನಾವರಣ
ಮಳೆಗಾಳ ಬಂದ್ರೆ ಸಾಕು ಮನೆಯಲ್ಲಿರುವ ಸಣ್ಣ ಸಣ್ಣ ಮಕ್ಕಳಿಗೆ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭ. ಹಲವಾರು ಕಷಾಯ, ಮನೆ ಮದ್ದು, ಸೀರಪ್, ಹೀಗೆ ಹಲವು ಪ್ರಯತ್ನಗಳಾಚೆಯೂ ಕೂಡ ಅಲರ್ಜಿ ಅನ್ನೋದು ಅಷ್ಟು ಸರಳವಾಗಿ ನಿಯಂತ್ರಣಕ್ಕೆ ಬರೋದಿಲ್ಲ. ಆದ್ರೆ ಅಲರ್ಜಿಗೆ ರಾಮಬಾಣದಂತೆ ಕೆಲಸ ಮಾಡುವ ಒಂದು ಮದ್ದು ನಿಮ್ಮದೇ ಅಡುಗೆ ಮನೆಯಲ್ಲಿದೆ. ಬಡವರ ಬಾದಾಮಿ ಅಂತಲೇ ಕರೆಯುವ ಕಡಲೆಕಾಯಿ (ಶೇಂಗಾ)ದಲ್ಲಿದೆ ಅಲರ್ಜಿ ಹೋಗಲಾಡಿಸುವ ಅತಿದೊಡ್ಡ ಔಷಧಿ ಗುಣ
ಇದನ್ನೂ ಓದಿ: ಪಕ್ಕದ ಮನೆಗೆ ಹೋದ ಬೆಕ್ಕು.. ಠಾಣೆಗೆ ಹೋದ ಮಾಲೀಕರು; ಅಪರೂಪದ ಪ್ರಕರಣಕ್ಕೆ ಹೈಕೋರ್ಟ್ ಹೇಳಿದ್ದೇನು?
ಇತ್ತೀಚಿನ ಸಂಶೋಧನೆಯೊಂದು ಇಂತಹ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದೆ. ನೆಲಗಡೆಲೆಯಿಂದ ತಯಾರಾದ ಉತ್ಪನ್ನಗಳ ಸೇವನೆಯಿಂದ ಅಲರ್ಜಿಗಳು ಕಡಿಮೆಯಾಗುತ್ತದೆ. ಅಂದ್ರೆ ನೀವು ನೆಲಗಡಲೆಯ ಪೌಡರ್ನ್ನು ನಿಮ್ಮ ಮಕ್ಕಳಿಗೆ ಹಸುಗೂಸುಗಳಿಗೆ ನೀಡುವುದರಿಂದಲೂ ಅವರಲ್ಲಿ ಅಲರ್ಜಿ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ಪಿ ರಿವೀವ್ ಎಂಬ ಅಧ್ಯಯನದ ವರದಿಯೊಂದು ಹೇಳಿದೆ. ಈ ಅಧ್ಯಯನದಲ್ಲಿ 0-2.5 ವರ್ಷದ 96 ಮಕ್ಕಳಿಗೆ ಪೀನಟ್ ಪೌಡರ್ನ್ನು ನೀಡಿ ಪರೀಕ್ಷಿಸಲಾಗಿದೆ. ಪ್ರತಿದಿನ ಈ ಕಡಲೆಕಾಯಿ ಪೌಡರ್ ಸೇವಿಸಿದ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ 96 ಮಕ್ಕಳೊಳಗೆ ಒಟ್ಟು 20 ಮಕ್ಕಳಲ್ಲಿ ಅಲರ್ಜಿ ಸಂಪೂರ್ಣವಾಗಿ ಉಪಶಮನಗೊಂಡಿರುವುದು ಕಂಡು ಬಂದಿದೆ. ಒಟ್ಟು ಆರು ತಿಂಗಳಲ್ಲಿ ಆ ಮಕ್ಕಳಲ್ಲಿ ಯಾವುದೇ ಅಲರ್ಜಿಯಂತಹ ಸಮಸ್ಯೆಗಳು ಕಂಡುಬಂದಿಲ್ಲ. 96 ಮಕ್ಕಳಿಗೆ ಸತತವಾಗಿ ಆರು ತಿಂಗಳುಗಳ ಕಾಲ ಆರು 16 ಕಡಲೆಕಾಯಿಯಿಂದ ತಯಾರಿಸಲಾದ ಪೌಡರ್ನ್ನು ನೀಡಲಾಗಿದೆ. ಈ ಅಧ್ಯಯನದ ಪ್ರಕಾರ ಪುಟ್ಟ ಮಕ್ಕಳಲ್ಲಿ, ನವಜಾತ ಶಿಶುಗಳಲ್ಲಿ ಕಾಣುವ ಅಲರ್ಜಿಗೆ ಕಡಲೆಕಾಯಿ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತೆ ಎಂಬುದು ಬಹಿರಂಗವಾಗಿದೆ. ಈಗಾಗಲೇ ಮಳೆ ರಾಜ್ಯದ ಉದ್ದಗಲಕ್ಕೂ ಬಿಟ್ಟುಬಿಡದೆ ಸುರಿಯುತ್ತಿದೆ. ಇಂತಹ ಸಮಯದಲ್ಲಿ ದೊಡ್ಡವರಿಗಿಂತ ಪುಟ್ಟ ಪುಟ್ಟ ಮಕ್ಕಳು ನವಜಾತ ಶಿಶುಗಳು ಹೆಚ್ಚು ಅಲರ್ಜಿಯಿಂದ ಬಳಲುತ್ತಾರೆ ಹೀಗಾಗಿ ಅವರಿಗೆ ಒಂದಿಷ್ಟು ಕಡಲೆಕಾಯಿ ಪೌಡರ್ನ್ನು ನೀಡಿ ನೋಡಿ. ಅವರು ಕೂಡ ಅಲರ್ಜಿಯಿಂದ ಮಕ್ತರಾಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ