newsfirstkannada.com

×

ದುಡ್ಡು ಕೊಡಿ ಸ್ವಾಮಿ.. 3 ತಿಂಗಳಿಂದ ಬಾರದ ಗೃಹಲಕ್ಷ್ಮಿ ಹಣ; ಸಿದ್ದು ಸರ್ಕಾರದ ನಡೆಗೆ ಮಹಿಳೆಯರ ಕಣ್ಣೀರು: VIDEO

Share :

Published July 23, 2024 at 9:38pm

    3 ತಿಂಗಳಿಂದ ಬ್ಯಾಂಕ್​ಗೆ ಅಲೆದು, ಅಲೆದು ಸುಸ್ತಾದ ಯಜಮಾನಿಯರು

    ಗೃಹಲಕ್ಷ್ಮಿ ಹಣ ಬಾರದ ಕಾರಣ ಕಂಗಾಲಾಗಿರುವ ನಾರಿಮಣಿಯರು

    5 ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಸರ್ಕಾರ

ಬೆಂಗಳೂರು: ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ತಿಂಗಳಿಗೆ ಮನೆ ಬಾಗಿಲಿಗೆ ಬರೋ ಹಣವನ್ನು ಪಡೆದುಕೊಳ್ಳಲು ಸಲುವಾಗಿ ನಾ ಮುಂದು, ತಾ ಮುಂದು ಎಂದು ಸರತಿ ಸಾಲಿನಲ್ಲಿ ನಿಂತು ಅಪ್ಲಿಕೇಷನ್​ ಹಾಕಿದ್ದರು. ಅದರಂತೆ ಮನೆಯ ಒಡತಿಗೆ ಹಣ ಬಂದು ಅಕೌಂಟ್​ಗೆ ಬರುತ್ತಿದ್ದವು. ಆದರೆ ಇದೀಗ ಇಡೀ ರಾಜ್ಯದ ಜನತೆ ಮಹಿಳೆಯರಿಗೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಇದನ್ನೂ ಓದಿ: ಮಧ್ಯಮ ವರ್ಗದವರಿಗೆ ರಿಲೀಫ್.. ಹೊಸ ಆದಾಯ ತೆರಿಗೆ ನೀತಿಯಿಂದ ನಿಮಗೆ ಉಳಿತಾಯ ಎಷ್ಟು? ಹೇಗೆ?

ಹೌದು, ಕಳೆದ 3 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದ್ ಆಗಿದೆ. 2,000 ರೂಪಾಯಿ ಹಣ ಬಾರದೆ ಇರೋ ಕಾರಣ ನಾರಿಯರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. 3 ತಿಂಗಳಿಂದ ಬ್ಯಾಂಕ್​ಗೆ ಅಲೆದರೂ ಹಣ ಮಾತ್ರ ಜಮೆಯಾಗಿಲ್ಲ. ಹಣಬಾರದಕ್ಕೆ ಹಲವು ಜಿಲ್ಲೆಯ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಮನೆ ಬಾಡಿಗೆ, ಆಸ್ಪತ್ರೆ‌, ಇತರೆ ಖರ್ಚಿಗಾಗಿ ಬಳಕೆಯಾಗ್ತಿದ್ದ ಹಣ ಈಗ ಬರದಿದ್ದಕ್ಕೆ ಮಹಿಳೆಯರು ಕಂಗಾಲಾಗಿದ್ದಾರೆ. ಆದರೆ ‘ಗೃಹಲಕ್ಷ್ಮಿ’ ಜೊತೆ ವಿಧವಾ ವೇತನ ಪಿಂಚಣಿಯೂ ಕೈಗೆ ಬರುತ್ತಿಲ್ಲವಂತೆ. ಹೀಗಾಗಿ ರಾಜ್ಯದ ಮಹಿಳೆಯರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಗುಡ್​ನ್ಯೂಸ್​​; ಇನ್ಮುಂದೆ ವಾಟ್ಸಪ್​​ನಲ್ಲೇ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ; ಹೇಗೆ?

ಗೃಹ‘ಲಕ್ಷ್ಮಿ’ ಗೋಳಾಟ!

ಕಾಂಗ್ರೆಸ್​ ಸರ್ಕಾರವು 5 ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದಿತ್ತು. ಗ್ಯಾರಂಟಿ ಘೋಷಿಸಿ ಮತದಾರರನ್ನು ಸೆಳೆದಿತ್ತು. 5 ಗ್ಯಾರಂಟಿ ಪೈಕಿ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಮಾಡಿತ್ತು. 1.28 ಕೋಟಿ ಕುಟುಂಬದ ಯಜಮಾನಿಯರಿಗೆ ‘ಗೃಹಲಕ್ಷ್ಮಿ’ ಭಾಗ್ಯ ನೀಡಿತ್ತು. ಸರ್ವರ್ ಡೌನ್​ನಿಂದ ಮಹಿಳೆಯರು ಅರ್ಜಿ ಸಲ್ಲಿಕೆಗೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಇದಾದ ಬಳಿಕ ಗೃಹಲಕ್ಷ್ಮಿ ಮೂಲಕ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2,000 ರೂಪಾತಿ ಹೋಗುತ್ತಿತ್ತು. ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ಕೆಲ ತಿಂಗಳು ಹಣ ಜಮೆ ಮಾಡಿತ್ತು. ಈ ಬಳಿಕ ಹಲವು ಜಿಲ್ಲೆಗಳ ಮಹಿಳೆಯರಿಗೆ ಅಕೌಂಟ್​ಗೆ ಹಣ ಬಂದಿರಲಿಲ್ಲ. ಹೀಗಾಗಿ ಗೃಹಲಕ್ಷ್ಮಿ ಹಣ ಬಾರದ ಕಾರಣ ನಾರಿಮಣಿಯರು ಕಂಗಾಲಾಗಿದ್ದರು. ಈಗ ಒಟ್ಟು 3 ತಿಂಗಳುಗಳಿಂದ ಮಹಿಳೆಯರ ಅಕೌಂಟ್​ಗೆ 2 ಸಾವಿರ ಹಣ ಬಂದಿಲ್ಲ. ಸಿದ್ದರಾಮಯ್ಯ ಸರ್ಕಾರವು 5 ವರ್ಷವೂ ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಎಂದಿತ್ತು. ಆದರೆ, ವರ್ಷ ಪೂರೈಸುವುದರೊಳಗೆ ಗೃಹಲಕ್ಷ್ಮಿಗೆ ಬ್ರೇಕ್ ಹಾಕಿದೆ.

ಇದೇ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಬಳಿ ಐದು ಗ್ಯಾರಂಟಿಗೆ ಕೊಡಲು ಹಣ ಇಲ್ಲ. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈಗ ಯಾವ ಹಣವೂ ಜನರ ಅಕೌಂಟ್​​ಗೆ ಹೋಗುತ್ತಿಲ್ಲ. ಅಧಿವೇಶನದಲ್ಲಿ ಸರ್ಕಾರ ಜನರಿಗೆ ಕ್ಷಮೆ ಕೇಳಬೇಕು. ಮೊದಲೇ ಹೇಳಿದ್ವಿ ಗ್ಯಾರಂಟಿ ಹೆಚ್ಚು ದಿನ ಇರಲ್ಲ ಅಂತ ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಡ್ಡು ಕೊಡಿ ಸ್ವಾಮಿ.. 3 ತಿಂಗಳಿಂದ ಬಾರದ ಗೃಹಲಕ್ಷ್ಮಿ ಹಣ; ಸಿದ್ದು ಸರ್ಕಾರದ ನಡೆಗೆ ಮಹಿಳೆಯರ ಕಣ್ಣೀರು: VIDEO

https://newsfirstlive.com/wp-content/uploads/2024/07/siddu1.jpg

Load More