newsfirstkannada.com

ಬೆಂಗಳೂರಿಗರೇ.. ನಿಮ್ಮ ಸ್ಕೂಟರನ್ನು ಎಲೆಕ್ಟ್ರಿಕ್​ ಸ್ಕೂಟರನ್ನಾಗಿ ಪರಿವರ್ತಿಸಬಹುದು! ಬಹಳ ಸುಲಭ!

Share :

Published July 24, 2024 at 1:24pm

    ಬೆಂಗಳೂರು ಮೂಲದ ಸ್ಟಾರ್​​ಅಪ್​ ಕಂಪನಿಯಿದು!

    ಇಂಧನ ಬಳಕೆಯ ಸ್ಕೂಟರನ್ನು ಹೀಗೂ ಬದಲಾಯಿಸಬಹುದು

    ಗಂಟೆಗೆ ​​ 85kmನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ

ಭಾರತವು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಈಗಾಗಲೇ ಅನೇಕ ಸ್ಟಾರ್ಟ್​​ಅಪ್​​ಗಳು ಭಾರತದಲ್ಲಿ ಹುಟ್ಟಿಕೊಂಡು ವಿವಿಧ ವೈಶಿಷ್ಟ್ಯತೆಗಳುಳ್ಳ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ. ಮಾತ್ರವಲ್ಲದೆ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಇತ್ತ ಕರ್ನಾಟಕದಲ್ಲೂ, ಅದರಲ್ಲೂ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಅತ್ತ ಪೆಟ್ರೋಲ್​, ಡೀಸೆಲ್​ ವಾಹನಗಳು ಮೂಲೆ ಸರಿಯುತ್ತಿವೆ. ಇದರ ನಡುವೆ ಅನೇಕರಿಗೆ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಬೇಕೆಂಬ ಹಂಬಲವಿದೆ. ಆದರೆ ಸ್ಕೂಟರ್​ಗಳ ಕೈಗೆಟಕದ ಬೆಲೆಯಿಂದಾಗಿ ಹಿಂದೆ ಸರಿಯುತ್ತಿದ್ದಾರೆ. ಆದರೀಗ ಅಂತವರಿಗಾಗಿ ಇಂಧನ ಬಳಕೆಯ ಸ್ಕೂಟರ್​​ಗಳನ್ನೇ ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುವ ಅವಕಾಶವನ್ನು ಬೆಂಗಳೂರು ಮೂಲದ ಸ್ಟಾರ್ಟ್​ಅಪ್​ ತೆರೆದಿಟ್ಟಿದೆ. ಆ ಮೂಲಕ ಎಲೆಕ್ಟ್ರಿಕ್ ಸ್ಕೂಟರ್​​ ಖರೀದಿಸಲಾಗದವರು ತಮ್ಮ ಇಂಧನ ಬಳಕೆಯ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿಸಬಹುದಾಗಿದೆ.

ಸ್ಟಾರ್ಯಾ ಎಂಬ ಕಂಪನಿ ಇಂಧನ ಬಳಕೆಯ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ. ಅಂದಹಾಗೆಯೇ ಬೆಂಗಳೂರು ಮೂಲದ ಈ ಕಂಪನಿ 2018 ಜುಲೈ ತಿಂಗಳಲ್ಲಿ ಪ್ರಾರಂಭಗೊಂಡಿದೆ. CEO ರವಿಕುಮಾರ್​ ಜಗನ್ನಾಥ್​ ಇದನ್ನು ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ: ವೈರ್​​ಲೆಸ್​ ಚಾರ್ಜಿಂಗ್​ ರಸ್ತೆಯನ್ನೇ ನಿರ್ಮಿಸಿದ ಈ ದೇಶ.. ಇನ್ಮುಂದೆ ಚಾರ್ಜಿಂಗ್​ ಸ್ಟೇಷನ್​​ಗೆ ಹೋಗಬೇಕಾಗಿಲ್ಲ!

ಸ್ಟಾರ್ಯಾ ಸ್ವದೇಶಿ ಎಲೆಕ್ಟ್ರಿಕ್ ಪ್ರೊಪಲ್ಷನ್​​ ರೆಟ್ರೋಫಿಟ್​ ಕಿಟ್​ ಬಳಸಿ ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ. ಇದರ ಮೂಲಕ ಸ್ಕೂಟರ್​​ ಗರಿಷ್ಠ 6-6.5 ಕಿಲೋ ವ್ಯಾಟ್​​ ಶಕ್ತಿಯನ್ನು ಉತ್ಪಾದಿಸುತ್ತದೆ. ಗಂಟೆಗೆ ಸ್ಕೂಟರ್​​ 85 ಕಿಲೋ ಮೀಟರ್​ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಸ್ಟಾರ್ಯಾ ಪರಿವರ್ತಿತ ಎಲೆಕ್ಟ್ರಿಕ್​ ಸ್ಕೂಟರ್​ ಮೂಲಕ 185 ನ್ಯೂಟನ್​​ ಮೀಟರ್​​ಗಳ ಟಾರ್ಕ್​ ಪಡೆಯಬಹುದಾಗಿದೆ. ಇದರಲ್ಲಿ 51 ವೋಲ್ಟ್​ಗಳ ಬ್ಯಾಟರಿಯನ್ನು ಬಳಸಲಾಗುತ್ತಿದೆ. ಸಮತಟ್ಟಾದ ರಸ್ತೆಯಲ್ಲಿ ಗಂಟೆಗೆ 85 ಕಿಲೋ ಮೀಟರ್​​ ವೇಗದಲ್ಲಿ ಚಲಿಸಬಹುದಾಗಿದೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಶಾಲಾ ವಾಹನ.. ನಾಲ್ವರು ವಿದ್ಯಾರ್ಥಿಗಳು ಗಂಭೀರ

ಅಂದಹಾಗೆಯೇ ಸ್ಟಾರ್ಯಾ ತಂತ್ರಜ್ಞಾನ ವಿಚಾರದಲ್ಲಿ 4 ಪೇಟೆಂಟ್​​ ಪಡೆದಿದೆ. ಸ್ಕೂಟರ್​​ ಸವಾರಿಯ ಇತಿಹಾಸ, ಮೈಲೇಜ್​, ಪವರ್​ ಮುಂತಾದ ಮಾಹಿತಿಯನ್ನು ಟ್ರ್ಯಾಕ್​ ಮಾಡುವ ಅಪ್ಲಿಕೇಷನ್ಸ್ ಅಭಿವೃದ್ಧಿ ಪಡಿಸಿದೆ.

ಇನ್ನು ಸ್ಟಾರ್ಯಾ ಕಂಪನಿಯ ಕಾರ್ಯವನ್ನು ಆಟೋಮೋಟಿವ್​ ರಿಸರ್ಚ್​ ಆಸೋಸಿಯೇಷನ್​ ಆಫ್​ ಇಂಡಿಯಾ ಅನುಮೋದಿಸಿದೆ. ಹಳೆಯ ಬಜಾಜ್​​ ಚೇತಕ್​, ಹೋಂಡಾ ಕೈನೆಟಿಕ್​​ನಂತಹ ವಾಹನಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸ್ಕೂಟರನ್ನು ಎಲೆಕ್ಟ್ರಿಕ್​ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ.

ಇದನ್ನೂ ಓದಿ: ಜಾನುವಾರುಗಳಿಗೆ ನೀರು ಕುಡಿಸಲು ಹೋದ ವ್ಯಕ್ತಿ ಕೃಷಿ ಹೊಂಡದಲ್ಲಿ ಬಿದ್ದು ಸಾವು

ಗ್ರಾಹಕರು ತಮ್ಮ ಸ್ಕೂಟರನ್ನು ಎಲೆಕ್ಟ್ರಿಕ್​ ಸ್ಕೂಟರನ್ನಾಗಿ ಮಾರ್ಪಡಿಸಲು 90 ಸಾವಿರ ಖರ್ಚು ಮಾಡಬೇಕಿದೆ. ಅಥವಾ ಶೇ.40ರಷ್ಟು ಹಣವನ್ನು ಪಾವತಿಸಿ ಕೂಡ ಎಲೆಕ್ಟ್ರಿಕ್​ ವಾಹನವನ್ನಾಗಿ ಪರಿವರ್ತಿಸುವ ಆಯ್ಕೆಯನ್ನು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ.. ನಿಮ್ಮ ಸ್ಕೂಟರನ್ನು ಎಲೆಕ್ಟ್ರಿಕ್​ ಸ್ಕೂಟರನ್ನಾಗಿ ಪರಿವರ್ತಿಸಬಹುದು! ಬಹಳ ಸುಲಭ!

https://newsfirstlive.com/wp-content/uploads/2024/07/Starya.jpg

Load More