newsfirstkannada.com

×

ಮನೆಗೆ ನುಗ್ಗಿ ರಕ್ತದೋಕುಳಿ.. ಆನೇಕಲ್ ಸ್ಕ್ರಾಪ್ ರವಿ ಕೊಲೆ ಕೇಸ್‌ಗೆ ಬಿಗ್​ ಟ್ವಿಸ್ಟ್​; ಅಸಲಿಗೆ ಆಗಿದ್ದೇನು?

Share :

Published July 25, 2024 at 8:02pm

    ಗಲಾಟೆ ನಡೆಯುತ್ತಿದ್ದರು ಪೊಲೀಸರು ಕಂಟ್ರೋಲ್ ಮಾಡುವಲ್ಲಿ ವಿಫಲರಾದ್ರಾ?

    ಆನೇಕಲ್ ಪುರಸಭೆ 22ನೇ ವಾರ್ಡ್‌ ಬಹದ್ದೂರ್ ಪುರ ಸದಸ್ಯನಾಗಿದ್ದ ರವಿ

    ಮನೆಗೆ ನುಗ್ಗಿದ ದುಷ್ಕರ್ಮಿಗಳು ಅಟ್ಯಾಕ್ ಮಾಡುವುದಕ್ಕೆ ಕಾರಣವೇನು?

ಬೆಂಗಳೂರು: ಆತನೊಬ್ಬ ಏರಿಯಾ ಕೌನ್ಸಿಲರ್‌. ಏರಿಯಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರತಿನಿಧಿ. ಜನರು ಯಾವುದೇ ಸಮಸ್ಯೆ ಕೇಳ್ಕೊಂಡು ಬಂದರು ಆತ ಬಗೆಹರಿಸಲು ಪ್ರಯತ್ನಿಸುತ್ತಿದ್ದ. ಆದ್ರೆ, ಜನ ಮೆಚ್ಚುಗೆ ಪಡೆದಿದ್ದ ನಗರಸಭಾ ಸದಸ್ಯನನ್ನ, ಆತನ ಮನೆಯಿಂದ ಎಳೆದುಕೊಂಡು ಬಂದು, ಮನೆಯ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿಬಿಟ್ಟಿದ್ದಾರೆ. ಆ ಕೊಲೆಯ ರಹಸ್ಯ ಬೇಧಿಸಲು ಮುಂದಾದಾಗ, ಬಯಲಾಗಿದ್ದೇ ಆ ವೈಷಮ್ಯ.

ಈತನ ಹೆಸರು ರವಿ ಅಲಿಯಾಸ್ ಸ್ಕ್ರಾಪ್ ರವಿ. ಹೆಸರೇನೋ ವಿಚಿತ್ರವಾಗಿರಬಹುದು ಆದ್ರೆ, ವ್ಯಕ್ತಿ ಅಂತವನ್ನಲ್ಲಾ ಅಂತಾರೆ ಊರಿನ ಜನರು. ರವಿ ಹೇಳಿ, ಕೇಳಿ ಆನೇಕಲ್ ಪುರಸಭೆ 22ನೇ ವಾರ್ಡ್‌ ಬಹದ್ದೂರ್ ಪುರ ಸದಸ್ಯ ಬೇರೆ. ಈ ವಾರ್ಡ್‌ನಲ್ಲಿ ಈತನಿಗೆ ಜನಮನ್ನಣೆಯಂತೂ ಇತ್ತು. ಈತ ರಾಜಕೀಯವಾಗಿಯೂ ಚೆನ್ನಾಗಿಯೇ ಬೆಳೆಯುತ್ತಿದ್ದ. ಹೀಗಿರುವಾಗಲೇ ನಿನ್ನೆ ರಾತ್ರಿ ದುರ್ಘಟನೆಯೊಂದು ನಡೆದು ಬಿಟ್ಟಿದೆ.

ಮನೆಯಿಂದ ಧರಧರನೇ ಎಳೆದುಕೊಂಡು ಬಂದು ಕೊಲೆ
ಗ್ಯಾಂಗ್‌ವಾರ್‌ಗೆ ಬಲಿಯಾದನಾ ಪುರಸಭಾ ಸದಸ್ಯ?

ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿರೋ ರವಿ ಅಲಿಯಾಸ್‌ ಸ್ಕ್ರಾಪ್ ರವಿ ಮನೆಯಿದು. ಇದೇ ಮನೆಯಲ್ಲಿಯೇ ರಾತ್ರಿ ರವಿ ಮನೆಯಲ್ಲಿರ್ತಾನೆ. ಈ ವಿಚಾರವನ್ನ ತಿಳಿದುಕೊಂಡು ಬಂದ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ರವಿಯನ್ನ ಕೊಲೆ ಮಾಡಿರೋದು ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾವಾಗ ದುಷ್ಕರ್ಮಿಗಳು ರವಿಯ ಮನೆಗೆ ನುಗ್ಗಿ ಅಟ್ಯಾಕ್ ಮಾಡಿರೋ ವಿಚಾರ ತಿಳಿಯಿತೋ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ರವಿಯನ್ನ ಕೂಡಲೇ ಆಸ್ಪತ್ರೆಗೆ ಸಾಗಿಸಿದರು. ಆದ್ರೆ, ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆಗೆ ಸಾಗಿಸೋ ದಾರಿ ಮಧ್ಯೆಯೇ ರವಿ ಕೊನೆಯುಸಿರೆಳೆದಿದ್ದಾನೆ. ರವಿ ಹತ್ಯೆಯ ವಿಚಾರ ತಿಳಿಯುತ್ತಿದ್ದಂತೆ ಊರಿನವರೆಲ್ಲಾ ರೊಚ್ಚಿಗೆದ್ದರು. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ, ಸಿ.ಕೆ.ಬಾಬಾ ಆಗಮಿಸಿ ಪರಿಶೀಲನೆ ನಡೆಸಿದರು.

ಆನೇಕಲ್ ಪುರಸಭೆ ಕೌನ್ಸಿಲರ್ ರವಿ ಹತ್ಯೆಯಾಗಿದೆ. ರಾತ್ರಿ 8:30ರ ಸುಮಾರಿಗೆ ಮನೆ ಬಳಿ ಅಟ್ಯಾಕ್ ಆಗಿದೆ. ಕಾರಿನಲ್ಲಿ ಬಂದಿದ್ದ ಮೂರರಿಂದ ನಾಲ್ಕು ಜನ ಕೊಲೆ ಮಾಡಿದ್ದಾರೆ. ಮನೆ ಬಳಿಯೇ ಮಾತನಾಡುವ ನೆಪದಲ್ಲಿ ಕರೆದು‌ ಕೊಲೆಯಾಗಿದೆ. ಸದ್ಯ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಪತ್ತೆಗೆ ಎರಡು ತಂಡ ರಚನೆ ಮಾಡಲಾಗಿದೆ. ಶೀಘ್ರವಾಗಿ ಆರೋಪಿಗಳ ಬಂಧನ ಮಾಡಲಾಗುವುದು. ಪ್ರಾಥಮಿಕ ತನಿಖೆಯಲ್ಲಿ ಇತ್ತೀಚೆಗೆ ನಡೆದ ಮನೆ ಮೇಲೆ ದಾಳಿ ಕಾರಣ. ಕಳೆದ ಭಾನುವಾರ ಎರಡು ಬೈಕ್​ಗ​ಳಲ್ಲಿ ಬಂದಿದ್ದ ಆರು ಮಂದಿಯಿಂದ ದಾಂದಲೆ ನಡೆದಿದೆ. ಏರಿಯಾದಲ್ಲಿ ಸಿಕ್ಕ ಸಿಕ್ಕ ಬೈಕ್, ಕಾರು, ಆಟೋ ಗಾಜು ಪುಡಿ ಪುಡಿ ಮಾಡಿದ್ದಾರೆ. ಅಂದು ವಿನಯ್ ಅಲಿಯಾಸ್ ವಿನಿ ಎಂಬುವವನ ಮನೆ ಬಳಿಯು ದಾಳಿ ನಡೆದಿತ್ತು. ಮನೆ ಗೇಟ್ ಬಳಿ ಬಿಯರ್ ಬಾಟಲಿ ಹೊಡೆದಿದ್ದರು. ಕಿಟಕಿ ಗಾಜುಗಳನ್ನು ಪುಡಿಗೈದಿದ್ದ ಹೋಗಿದ್ದರು. ಇದೇ ವಿಚಾರಕ್ಕೆ ಕೌನ್ಸಲರ್ ರವಿ ಮರ್ಡರ್ ನಡೆದಿದೆ. ರವಿ ಹುಡುಗರೇ ಮನೆ ಬಳಿ ಬಂದು ಬಿಯರ್ ಬಾಟಲಿ ಹೊಡೆದು ಹೋಗಿದ್ದಾರೆ. ಕಿಟಕಿ ಗಾಜು ಪುಡಿಗೈದು ಹವಾ ಮೆಯಿಂಟೈನ್ ಮಾಡಿದ್ದಾರೆಂದು ಕೊಲೆ ಮಾಡಲಾಗಿದೆ.

ಸಿ.ಕೆ.ಬಾಬಾ, ಎಸ್ಪಿ, ಬೆಂಗಳೂರು ಗ್ರಾಮಾಂತರ

ಈ ಘಟನೆಯ ನಂತರ ಸ್ಥಳೀಯ ಮಹಿಳೆಯರು ಹಾಗೂ ಸಂಬಂಧಿಕರನ್ನ ಮಾತನಾಡಿಸಿದಾಗ ಸ್ಮಶಾನದ ಜಾಗಕ್ಕೆ ಗಲಾಟೆಯಾಗಿದ್ದು, ಈ ವಿಚಾರವಾಗಿ ಕೊಲೆ ನಡೆದಿದೆ ಅಂತಾ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಪೊಲೀಸರು ಸರಿಯಾಗಿ ಕ್ರಮಗೊಂಡಿಲ್ಲ ಅಂತಾ ಸಂಬಂಧಿಕರು ಆರೋಪಿಸಿದ್ದಾರೆ. ಅಂದ್ಹಾಗೇ, ರವಿಯ ಮೇಲೆ ಹಲ್ಲೆ ನಡೆಯಬಹುದು ಅನ್ನೋ ಸುಳಿವು ಸ್ಥಳೀಯರಿಗೆ ಗೊತ್ತಾಗಿತ್ತಂತೆ. ಅವರ ಮನೆಯವರಿಗೂ ರವಿನಾ ಹುಷಾರಾಗಿ ಇರೋಕೆ ಹೇಳಿದ್ದರಂತೆ.

ಅಲ್ಲದೇ, ಸರ್ಕಾರಿ ಜಾಗಕ್ಕಾಗಿ ಗಲಾಟೆ ತೆಗೆದಿದ್ದರು ಅಂತಾ ಆರೋಪಿಸಿದ್ದಾರೆ. ಹತ್ಯೆ ಮಾಡಿದ್ದಾನೆ ಎನ್ನಲಾದವನು ಒಂದು ವಾರದಲ್ಲಿ ರವಿಯನ್ನ ಕೊಲೆ ಮಾಡಿ, ಅದೇ ಸ್ಮಶಾನದಲ್ಲಿ ಮಲಗಿಸುತ್ತೇನೆ ಎಂದು ಚಾಲೆಂಜ್ ಹಾಕಿದ್ದನಂತೆ. ಮೇಲ್ನೋಟಕ್ಕೆ ಇದು ಎರಡು ಗುಂಪುಗಳ ನಡುವಿನ ವಾರ್ ಅಂತಾ ಹೇಳಲಾಗ್ತಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ವಿ ಅಂತಾ ಆರೋಪಿಸಿದ್ದಾರೆ. ಸರಣಿ ಗಲಾಟೆ ನಡೆಯುತ್ತಿದ್ದರು ಪೊಲೀಸರು ಕಂಟ್ರೋಲ್ ಮಾಡುವಲ್ಲಿ ವಿಫಲರಾಗಿದ್ದಾರೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಆರೋಪಿಗಳ ಪತ್ತೆಗೆ ಬಲೆ ಬೀಸಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮನೆಗೆ ನುಗ್ಗಿ ರಕ್ತದೋಕುಳಿ.. ಆನೇಕಲ್ ಸ್ಕ್ರಾಪ್ ರವಿ ಕೊಲೆ ಕೇಸ್‌ಗೆ ಬಿಗ್​ ಟ್ವಿಸ್ಟ್​; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/07/bng-death.jpg

Load More