ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ ಗೊಂದಲಗಳಿರುತ್ತದೆ
ತಂದೆಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ಆತಂಕ ಬೇಡ
ಅನಾರೋಗ್ಯ ಪೀಡಿತರಿಗೆ ಸುಧಾರಣೆಯಿದೆ, ಭರವಸೆ ಹೆಚ್ಚಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಮಂಗಳ ಕಾರ್ಯಗಳ ಸೂಚನೆ ಸಿಗಬಹುದು
- ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳಾಗುತ್ತದೆ
- ಕೌಟುಂಬಿಕವಾಗಿ ಉತ್ತಮ ವಾತಾವರಣವಿರುತ್ತದೆ
- ಅವಿವಾಹಿತೆ ಹೆಣ್ಣು ಮಕ್ಕಳಿಗೆ ಶುಭ ಸೂಚನೆ ಇದೆ
- ಅನಾರೋಗ್ಯ ಪೀಡಿತರಿಗೆ ಸುಧಾರಣೆಯಿದೆ ಭರವಸೆ ಹೆಚ್ಚಾಗಬಹುದು
- ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವವರಿಗೆ ಶುಭವಿದೆ
- ಭಗವತೀ ಉಪಾಸನೆ ಮಾಡಿ
ವೃಷಭ
- ಸಣ್ಣ ಪುಟ್ಟ ವಿಚಾರಗಳಿಗೆ ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
- ತುಂಬಾ ಅಗತ್ಯವಿರುವ ಕೆಲಸಗಳು ವಿಳಂಬವಾಗಬಹುದು
- ನಿಮ್ಮ ನಿರ್ಧಾರಗಳಲ್ಲಿ ಹಲವು ದೋಷಗಳಿರಬಹುದು
- ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕಬೇಡಿ
- ಕುಟುಂಬ ಸದಸ್ಯರ ಸಹಕಾರ ತುಂಬಾ ಅಗತ್ಯವಿರುತ್ತದೆ
- ತಂದೆಗೆ ಹೃದಯ ಸಂಬಂಧೀ ತೊಂದರೆ ಕಾಣಬಹುದು ಆತಂಕ ಬೇಡ
- ಮಹಾದಹರ ಮಂತ್ರ ಶ್ರವಣ ಮಾಡಿ
ಮಿಥುನ
- ವ್ಯಾಪಾರಸ್ಥರಿಗೆ ಶುಭ-ಲಾಭಗಳಿರುವ ದಿನ
- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯ ಇದಾಗಿದೆ
- ಕಡಿಮೆ ಸಮಯದಲ್ಲಿ ಗುಣಮಟ್ಟದ ಕೆಲಸ ಮಾಡಿ ಗೌರವಕ್ಕೆ ಪಾತ್ರರಾಗುತ್ತೀರಿ
- ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ ಗೊಂದಲಗಳಿರುತ್ತದೆ
- ನಿಮ್ಮ ದಾಖಲೆ ಪ್ರತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು
- ಅಗತ್ಯ ಬಿದ್ದರೆ ದಾಖಲಾತಿಗಳ ತಿದ್ದುಪಡಿ ಮಾಡಸಬೇಕಾಗಲಿದೆ
- ಪರಂಜ್ಯೋತಿ ಕೋಶಾಂಬಾ ಮಂತ್ರ ಪಠಿಸಿ
ಕಟಕ
- ಕುಟುಂಬದವರ ಸಂತೋಷಕ್ಕಾಗಿ ನೀವು ತ್ಯಾಗ ಮಾಡಬೇಕಾಗಬಹುದು
- ತುಂಬಾ ಒತ್ತಡದ ಕೆಲಸಗಳಿರುವುದರಿಂದ ಆಯಾಸವಾಗಲಿದೆ
- ತುಂಬಾ ವಿಶ್ರಾಂತಿಯ ಅಗತ್ಯವಿರುತ್ತದೆ ಆರೋಗ್ಯದ ಬಗ್ಗೆ ಗಮನಿಸಿ
- ಆತುರದಲ್ಲಿ ಯಾವುದೇ ನಿರ್ಧಾರಗಳು ಬೇಡ
- ನಿಮ್ಮ ಕಾರ್ಯವೈಖರಿ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
- ಸ್ನೇಹಿತರ ಕೆಲವು ವಿಚಾರಗಳು ಸ್ವಭಾವಗಳು ನೋವನ್ನುಂಟಮಾಡಬಹುದು
- ಏಕಾಕ್ಷರ ಮಾಯಾ ಮಂತ್ರವನ್ನು ಜಪ ಮಾಡಿ
ಸಿಂಹ
- ವಿದ್ಯಾರ್ಥಿಗಳಿಗೆ ಉತ್ತಮ ದಿನ
- ಬೇರೆಯವರಿಗೆ ಅಥವಾ ಸಹಪಾಠಿಗಳಿಗೆ ದಾನ ಮಾಡುವುದಕ್ಕೆ ಮುಂದಾಗುತ್ತೀರಿ
- ಸಾಲ ಬಾಕಿ ಬರುವವರಿಗೆ ಹಣ ಕೈಸೇರಬಹುದು
- ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಮಂದಗತಿಯನ್ನು ಹೊಂದುತ್ತದೆ
- ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
- ಸಾಯಂಕಾಲ ಅಷ್ಟು ಚೆನ್ನಾಗಿರುವ ವಾತಾವರಣ ಮನೆಯಲ್ಲಿರುವುದಿಲ್ಲ
- ಕುಂಭಕಂಠಿನೀ ಮಂತ್ರವನ್ನು ಜಪ ಮಾಡಿ
ಕನ್ಯಾ
- ಅವಕಾಶಗಳ ಲಾಭವನ್ನು ಪಡೆಯಲು ಮುಂದಾಗಬೇಡಿ ಅವಮಾನವಾದೀತು
- ರಾಯಭಾರೀ ಕೆಲಸ ಮಾಡುವವರಿಗೆ ಜಯವಿದೆ
- ರಾಜಕೀಯ ವ್ಯಕ್ತಿಗಳು ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶನ ಮಾಡಬಹುದು
- ಪೂರ್ವಿಕರ ವ್ಯಾಪಾರ ವೃದ್ದಿಯಾಗಲಿದೆ
- ಹಳೆಯ ನೆನಪು ಎಚ್ಚರಿಕೆಯಾಗಿ ಪರಿಣಮಿಸಬಹುದು
- ಸಂಬಂಧಿಕರ ಬೆಂಬಲ ಮುಖ್ಯವಾಗುತ್ತದೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ
- ಸುಮುಖಿ ದೇವಿಯನ್ನು ಪ್ರಾರ್ಥಿಸಿ
ತುಲಾ
- ಸಣ್ಣಪುಟ್ಟ ವಿಚಾರಗಳಿಗೆ ಮನಸ್ಸು ವಿಕೃತವಾಗುವುದನ್ನು ತಪ್ಪಿಸಿ
- ಜಗಳವೇ ಪರಿಹಾರವಲ್ಲ ಎಂಬುದನ್ನು ಅರಿಯಬೇಕಾಗುತ್ತದೆ
- ನಿಮ್ಮ ಕ್ಷೇತ್ರದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಅಡೆತಡೆ ಕಾಣಬಹುದು
- ವಯಸ್ಸಿನ ಅರಿವಿಲ್ಲದ ಯುವ ಪ್ರೇಮಿಗಳಿಗೆ ತೊಂದರೆಯಿದೆ ಜಾಗ್ರತೆವಹಿಸಿ
- ಬೇರೆಯವರಿಗೆ ಸಹಾಯ ಮಾಡಲು ಹೋಗಿ ತೊಂದರೆಯಾಗಬಹುದು
- ಮನಸ್ಸಿನಲ್ಲಿ ಕಲ್ಮಶಗಳಿಲ್ಲದಿದ್ದರೂ ಹೊಸದಾಗಿ ಹುಟ್ಟುವ ಸಾಧ್ಯತೆಗಳಿರುತ್ತದೆ
- ಮನೋಭವ ಮಂತ್ರವನ್ನು ಜಪ ಮಾಡಿ
ವೃಶ್ಚಿಕ
- ವಿದ್ಯಾರ್ಥಿಗಳು ಅಕ್ರಮ ಚಟುವಟಿಕೆ ವಿಚಾರಗಳಿಗೆ ಭಾಗಿಯಾಗಬಹುದು
- ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಿ ಮನಸ್ಸು ಬೇರೆಡೆಗೆ ಎಳೆಯುತ್ತದೆ
- ನಕಾರಾತ್ಮಕ ವಿಷಯಗಳೇ ಹೆಚ್ಚು ಗಮನ ಸೆಳೆದು ದಾರಿ ತಪ್ಪಿಸಬಹುದಾಗಿದೆ
- ಮನಸ್ಸು ಅತೃಪ್ತಿಯಿಂದ ಕೂಡಿರುತ್ತದೆ ಸಮಾಧಾನಬೇಕು
- ಮಾಡಬೇಕಾದ ಕರ್ತವ್ಯ ಕೆಲಸದಲ್ಲಿ ಬಲಹೀನರಾಗಬಹುದು
- ನಾನೆಲವನ್ನೂ ಕಳೆದುಕೊಂಡೆ ಎಂಬ ನೋವು ಕಾಡಬಹುದು ಮನಸ್ಸು ಸ್ಥಿರವಾಗಿರಲಿ
- ರಕ್ತೇಶ್ವರಿ ಮಂತ್ರ ಜಪ ಮಾಡಿ
ಧನುಸ್ಸು
- ಮನೆಯಲ್ಲಿ ಹಿರಿಯರ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಭಾಜನರಾಗುತ್ತೀರಿ
- ಪ್ರೇಮಿಗಳಿಗೆ ತುಂಬಾ ಕುತೂಹಲಕರ ಸಮಯ ಎಂದು ಹೇಳಬಹುದು
- ಆಸಕ್ತಿಗನುಗುಣವಾದ ಕೆಲಸಗಳು ಸಿಗಬಹುದು
- ಅಲಂಕಾರ ಸಾಮಾಗ್ರಿಗಳಿಗೆ ಉಡುಗೊರೆಗಳಿಗೆ ತುಂಬಾ ಖರ್ಚು ಮಾಡುತ್ತೀರಿ
- ಪಿತ್ರಾರ್ಜಿತ ಆಸ್ತಿಯು ಗೊಂದಲ ಸೃಷ್ಟಿ ಮಾಡಬಹುದು
- ಹೆಣ್ಣು ಮಕ್ಕಳಿಗೆ ಸಾಯಂಕಾಲದ ಹೊತ್ತಿಗೆ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಿ
- ರೇಣುಕಾಂಬ ದೇವಿಯನ್ನು ಪ್ರಾರ್ಥಿಸಿ
ಮಕರ
- ಮನಸ್ಸು ಒಪ್ಪುವ ಕೆಲಸಕ್ಕೆ ಮುಂದಾಗಬೇಕು
- ಹತ್ತು ಹಲವು ಆಲೋಚನೆಗಳು ಬೇಡ
- ಸಂಬಂಧಿಕರು ಹಾಗೂ ಸ್ನೇಹಿತರ ಒತ್ತಡ ಹೆಚ್ಚಾಗಿರುತ್ತದೆ
- ಉನ್ನತ ಹುದ್ದೆಯಲ್ಲಿರುವವರಿಗೆ ದಾಕ್ಷಿಣ್ಯಕ್ಕೆ ಒಳಗಾಗಬೇಕಾದ ಸಮಯ
- ಹಣ-ದ್ರವ್ಯಕ್ಕೆ ಆಸೆ ಪಟ್ಟು ಅವಮಾನವಾಗಬಹುದು
- ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಾಗುತ್ತದೆ
- ಕರ್ತವ್ಯ ಲೋಪ ಕಾಣಬಹುದು
- ಚೌಡಿ ದೇವಿಯನ್ನು ಆರಾಧನೆ ಮಾಡಿ
ಕುಂಭ
- ಕಾರ್ಯಕ್ಷೇತ್ರ ವ್ಯಾಪಾರಗಳಲ್ಲಿ ಪೈಪೋಟಿಯಿಂದ ತೊಂದರೆ ಸಂಭವ
- ಬೇರೆಯವರನ್ನು ತೃಪ್ತಿ ಪಡಿಸಲು ಹಣ ಖರ್ಚಾಗಬಹುದು
- ನಿಯಮಿತ ಆಹಾರ ಸೇವನೆ ಒಳಿತು ಅನಗತ್ಯವಾಗಿ ತಿನ್ನಬಾರದು
- ಶರೀರದ ನೋವು ನಿಮ್ಮನ್ನು ಕಾಡುತ್ತದೆ
- ಮನಸ್ಸು ಮಾತ್ರ ವ್ಯವಹಾರದ ಮೇಲೆ ಇರುತ್ತದೆ
- ಬಿಳಿ ಎಕ್ಕದ ಗಿಡವನ್ನು ಪೂಜಿಸಿ
ಮೀನ
- ಹಳೆಯ ಶತ್ರುಗಳ ಕಾಟ ಇಂದು ತೊಂದರೆಗೆ ಸಿಲುಕಿಸಬಹುದು
- ಕುಟುಂಬದ ಸಮಸ್ಯೆಗಳು ಇರುತ್ತದೆ
- ವೈಯಕ್ತಿಕ ವಿಚಾರಕ್ಕೆ ಮನೆಯವರಿಗೆಲ್ಲಾ ಅವಮಾನವಾಗಬಹುದು
- ಮಾನಸಿಕವಾಗಿ ಕುಗ್ಗಿ ಹೋಗುತ್ತೀರಿ
- ವ್ಯಾಯಾಮದಿಂದ ದೇಹಕ್ಕೂ, ಧ್ಯಾನದಿಂದ ಮನಸ್ಸಿಗೂ ನೆಮ್ಮದಿ ಸಿಗಬಹುದು
- ಶತ್ರು ಸಂಹಾರಕ ಹಿಡುಂಬ ಮಂತ್ರವನ್ನು ಜಪ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ