newsfirstkannada.com

×

ನವಚಂಡಿಕಾ ಹೋಮದಿಂದ ದರ್ಶನ್​​ಗೆ ಒಳ್ಳೆಯದಾಗುತ್ತಾ? ಡಾ.ಶೆಲ್ವಪಿಳೈ ಅಯ್ಯಂಗಾರ್ ಅಭಿಪ್ರಾಯ ಏನು?

Share :

Published July 26, 2024 at 11:39am

    ಶಕ್ತಿ ದೇವತೆಯ ಮೊರೆ ಹೋದ ದರ್ಶನ್ ಪತ್ನಿ ವಿಜಯಲಕ್ಷ್ಮೀ

    ಕೊಲ್ಲೂರು ಮುಕಾಂಬಿಕಾ ಸನ್ನಿಧಿಯಲ್ಲಿ ನವಚಂಡಿಕಾ ಯಾಗ

    ನವಚಂಡಿಕಾ ಯಾಗ ಅಂದರೆ ಏನು? ವಿದ್ವಾಂಸರ ಅಭಿಪ್ರಾಯ ಏನು?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಸೆರೆಮನೆ ವಾಸಕ್ಕೆ ನಿಧಾನವಾಗಿ ಹೊಂದಿಕೊಂಡ ದಾಸ ಊಟಕ್ಕೆ ಮಾತ್ರ ಒಗ್ಗಿಕೊಳ್ತಿಲ್ಲ. ಹೀಗಾಗಿ ಮನೆ ಊಟಕ್ಕೆ ದರ್ಶನ್​ ಮಾಡಿದ್ದ ಮನವಿಯನ್ನು ಕೋರ್ಟ್​ ತಿರಸ್ಕರಿಸಿದೆ.

ಇದರ ಜೊತೆಗೆ ಸದ್ಯಕ್ಕೆ ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಲಕ್ಷಣವಂತೂ ಇಲ್ಲವೇ ಇಲ್ಲ. ಹೀಗಿರುವಾಗ ಪತಿಯ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಇನ್ನಿಲ್ಲದಂತೆ ಕಸರತ್ತು ನಡೆಸಿದ್ದು ಈಗ ದೇವರ ಮೊರೆ ಹೋಗಿದ್ದಾರೆ. ಪತಿಯ ಜೈಲು ವಿಮೋಚನೆಗಾಗಿ ಧರ್ಮಪತ್ನಿ ಶಕ್ತಿ ದೇವತೆಯ ಮೊರೆ ಹೋಗಿದ್ದು, ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನವಚಂಡಿಕಾ ಯಾಗ ನೆರವೇರಿಸಿದ್ದಾರೆ.

ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಯಾವಾಗ ಬರುತ್ತಾರೆ..? ಅಪ್​ಡೇಟ್ ಕೊಟ್ಟ NASA

ಈ ನವ ಚಂಡಿಕಾ ಯಾಗದ ಕುರಿತು ಹಿರಿಯ ವಿದ್ವಾಂಸ, ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ಮಾತನಾಡಿ, ದುರ್ಗಾ ಸಪ್ತಸತಿಯನ್ನು ಕ್ರಮಬದ್ಧವಾಗಿ ಪಾರಾಯಣ ಮಾಡಬೇಕು. ದುರ್ಗಾ ಸಪ್ತಸತಿಯಲ್ಲಿ ಹೇಳಿರುವಂತೆ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಬೇಕು. ತುಪ್ಪಾ, ಸಮಿತ್ತು, ಚರು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ಹೋಮ ಮಾಡೋದನ್ನು ನಾವು ಚಂಡಿಕಾ ಹೋಮ ಎನ್ನುತ್ತೇವೆ. ಒಮ್ಮೆ ಮಾಡಿದರೆ ಅದು ಏಕ ಚಂಡಿಕಾ ಹೋಮ ಆಗುತ್ತದೆ. ಒಂಬತ್ತು ಬಾರಿ ಮಾಡಿದರೆ ನವ ಚಂಡಿಕಾ ಯಾಗ. ನೂರು ಬಾರಿ‌ ಮಾಡಿದರೆ ಶತ ಚಂಡಿಕಾ ಯಾಗ, ಸಾವಿರ ಬಾರಿ ಮಾಡಿದರೆ ಸಹಸ್ರ ಚಂಡಿಕಾಯಾಗ ಆಗುತ್ತದೆ. ಆಷಾಢ ಮಾಸದಲ್ಲಿ ಮಾಡುವುದರಿಂದ‌ ಹೆಚ್ಚಿನ ಲಾಭ ಸಿಗಲಿದೆ ಎಂದಿದ್ದಾರೆ.

ದರ್ಶನ್ ವಿಚಾರವಾಗಿ ಮಾತನಾಡಿದ ಅವರು, ನಾವು ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತವನ್ನು ಒಪ್ಪಿಕೊಂಡಿದ್ದೇವೆ. ಕೆಟ್ಟ ಕೆಲಸ ಮಾಡಿದರೆ ಕೆಟ್ಟದಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ. ದರ್ಶನ್ ಮಾಡಿರುವುದು ಕೆಟ್ಟದ್ದು, ಒಳ್ಳೆಯದು ಗೊತ್ತಿಲ್ಲ. ಪ್ರಕರಣವೊಂದು ತನಿಖೆ ಹಂತದಲ್ಲಿದೆ. ಈಗಲೇ ನಾವು ಒಳ್ಳೆಯವರು, ಕೆಟ್ಟವರು ಎಂದು ನಿರ್ಧರಿಸೋಕೆ ಆಗಲ್ಲ.

ಇದನ್ನೂ ಓದಿ:ಮಾಡ್ರನ್ ಕ್ರಿಕೆಟ್​ನಲ್ಲಿ ಸೂರ್ಯ ಯಾಕೆ ಡೇಂಜರಸ್ ಗೊತ್ತಾ? ದಂಡಂ ದಶಗುಣಂ ಕತೆ..!

ಅವರು ಹಿಂದೆ ಮಾಡಿರುವ ಒಳ್ಳೆಯ ಕೆಲಸಗಳಿಂದ ಒಳ್ಳೆಯದಾಗಬಹುದು. ಯಾವುದೇ ಕಷ್ಟದ ಕಾಲದಲ್ಲಿ ದೇವಿಯನ್ನ ಪಠಣೆ ಮಾಡೋದ್ರಿಂದ ಒಳ್ಳೆಯದಾಗುತ್ತದೆ. ದರ್ಶನ್ ಅವರ ಧರ್ಮ ಪತ್ನಿಗೆ ಅದರ ಬಗ್ಗೆ ನಂಬಿಕೆ ಇದೆ. ಅದು ಅವರ ನಂಬಿಕೆ ಇರಬಹುದು. ಅಲ್ಲದೇ ದರ್ಶನ್ ಪ್ರಕರಣದಲ್ಲಿ ಅಸಲಿ ವಿಚಾರಗಳು ಆಕೆಗೆ ಗೊತ್ತಿರುತ್ತದೆ. ಕಷ್ಟದ ಪರಿಸ್ಥಿತಿಯಲ್ಲಿ ನವ ಚಂಡಿಕಾಯಾಗ ಮಾಡಿದರೆ ಒಳ್ಳೆಯದಾಗುತ್ತದೆ. ನವ ಚಂಡಿಕಾ ಯಾಗದಿಂದ ಸಂಕಷ್ಟದಿಂದ ಪಾರಾಗಬಹುದು. ನಟ ದರ್ಶನ್ ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶ ಪತ್ನಿ ವಿಜಯಲಕ್ಷ್ಮಿ ಅವರದ್ದು. ಯಾಗ ಮಾಡಿಸುತ್ತಿರುವುದರಿಂದ ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:24 ಗಂಟೆಯಲ್ಲಿ ಮತ್ತೆ 7 ಜನ ಸಾವು.. ಮಹಾರಾಷ್ಟ್ರಕ್ಕೆ ಮಳೆ ಕಂಟಕ.. ಏನೆಲ್ಲ ಅನಾಹುತ ಆಗ್ತಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನವಚಂಡಿಕಾ ಹೋಮದಿಂದ ದರ್ಶನ್​​ಗೆ ಒಳ್ಳೆಯದಾಗುತ್ತಾ? ಡಾ.ಶೆಲ್ವಪಿಳೈ ಅಯ್ಯಂಗಾರ್ ಅಭಿಪ್ರಾಯ ಏನು?

https://newsfirstlive.com/wp-content/uploads/2024/07/shelvapillai-iyengar-1.jpg

Load More