ಸದನದಲ್ಲಿ ವರ್ಗಾವಣೆ ದಂಧೆ ಪ್ರಸ್ತಾಪ
ಕುಮಾರಸ್ವಾಮಿಯಿಂದ ಸರ್ಕಾರಕ್ಕೆ ಚಾಟಿ
ವರ್ಗಾವಣೆ ರೇಟ್ ಕಾರ್ಡ್ ತೋರಿಸಿದ HDK
ಬೆಂಗಳೂರು: ರಾಜ್ಯದ ಜನತೆಗೆ ಐದು ಅಂಶಗಳ ಗ್ಯಾರಂಟಿ ನೀಡಿದ್ದ ಕಾಂಗ್ರೆಸ್ ಪಕ್ಷವು, ಅಧಿಕಾರಕ್ಕೆ ಬಂದ ಮೇಲೆ ‘ ಕಾಸಿಗಾಗಿ ಪೋಸ್ಟಿಂಗ್ ಗ್ಯಾರಂಟಿ ‘ ನೀಡಲು ಹೊರಟಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಇಲಾಖೆಗಳಲ್ಲಿ ವರ್ಗಾವಣೆಗೆ ದರ ನಿಗದಿ ಆಗಿದೆ. ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಯಾವುದೋ ಒಂದು ಇಲಾಖೆಯಲ್ಲಿ ನಿಗದಿ ಮಾಡಿರುವ ವರ್ಗಾವಣೆಯ ದರಪಟ್ಟಿ ನನ್ನ ಕೈಯ್ಯಲ್ಲಿ ಇದೆ. ಅದನ್ನು ಯಾರೋ ನನಗೆ ತಂದು ಈ ವಿವರ ನೀಡಿದ್ದಾರೆ ಎಂದರು.
‘ಕೃಷಿ ವರ್ಗಾವಣೆ ದಂಧೆ’ ಕಾರ್ಡ್ ಹೀಗಿದೆ..!
173 ವರ್ಗಾವಣೆಗೆ ಒಟ್ಟು ಹಣ: ₹13.90 ಕೋಟಿ
30 ಜಿಲ್ಲೆಗಳ ಒಟ್ಟು ವರ್ಗಾವಣೆ: 305
ವರ್ಗಾವಣೆಯ ಒಟ್ಟು ಹಣ : ₹33.78 ಕೋಟಿ
ಈ ದರಪಟ್ಟಿಯನ್ನು ಸದನದಲ್ಲಿ ಪ್ರದರ್ಶಿಸಿದ ಮಾಜಿ ಮುಖ್ಯಮಂತ್ರಿ ಅವರು; ಬೇಕಿದ್ದರೆ ಇದನ್ನು ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಕಳಿಸಿಕೊಡುವುದಾಗಿ ಹೇಳಿದರು.
ನಾನು ಯಾವುದೇ ಸಹನೆಯನ್ನು ಕಳೆದುಕೊಂಡಿಲ್ಲ, ನಾನು ಯಾವುದೇ ದ್ವೇಷ ವನ್ನು ಮಾಡ್ತಿಲ್ಲ. ಮತ್ತೆ ಹೆಡೆ ಎತ್ತಿದೆ ವರ್ಗಾವಣೆ ಮಾಫಿಯಾ. ನಾನು ಒಂದು ಗಿರಾಕಿಯ ಕರ್ಮಕಾಂಡವನ್ನು ಇಲ್ಲಿ ಹೇಳುತ್ತೇನೆ, ಅವರ ಹೆಸರೇಳಲ್ಲ. ಇದನ್ನು ಸ್ಪೀಕರ್ ಮತ್ತು ಸಿಎಂ ಅವರಿಗೆ ಕಳಿಸುತ್ತೇನೆ. ಆದರೆ ಒಂದು ನಿರ್ದಿಷ್ಟ ಇಲಾಖೆಯ ಕಥೆ ಇದು. ಎಷ್ಟೆಷ್ಟು ದರ ನಿಗದಿ ಮಾಡ್ಕೊಂಡಿದ್ದಾರೆಂದು ಇಲ್ಲಿದೆ ಎಂದರು ಅವರು.
ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ವರ್ಗಾವಣೆಯ ರೇಟ್ ಕಾರ್ಡ್ ಹೊರಡಿಸಿತ್ತು ಎನ್ನುತ್ತಾ ಕುಮಾರಸ್ವಾಮಿ ಅವರು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಮಾಧ್ಯಮಗಳಲ್ಲಿ ನೀಡಿದ್ದ ಹಗರಣಗಳ ರೇಟ್ ಕಾರ್ಡ್ ಜಾಹೀರಾತನ್ನು ಪ್ರದರ್ಶಿಸಿದರು.
ಹಿಂದೆ ನೀವು ಬಿಜೆಪಿ ಸರಕಾರದ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹಾಕಿದ್ದೀರಿ. ಮುಂದೆ ನಿಮ್ಮ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹೊರಡಿಸಬೇಕಾಗುತ್ತದೆ. ಅದರಿಂದ ಈಗಲೇ ಎಚ್ಚೆತ್ತುಕೊಂಡು ಸರಿ ಮಾಡಿಕೊಳ್ಳಿ ಎನ್ನುವ ಸದುದ್ದೆಶದಿಂದ ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ