ಸಾವಿರ ಹಾಡುಗಳ ಸರದಾರ ಖ್ಯಾತ ಜಾನಪದ ಹಾಡುಗಾರ ಇನ್ನಿಲ್ಲ
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತಂದೆ ಆಲೂರು ನಾಗಪ್ಪ ಸಾವು
ಗಂಡು ಮಕ್ಕಳ ಹಾಗೇ ತಂದೆಯ ಅಂತ್ಯಸಂಸ್ಕಾರ ಮಾಡಿದ ಮಗಳು
ಕನ್ನಡ ಸಿನಿಮಾ, ಸಾಹಿತ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ದಿವ್ಯಾ ಆಲೂರು ಅವರು ತಂದೆ ಅವರು ನಿಧನರಾಗಿದ್ದಾರೆ. ಪ್ರಸಿದ್ಧ ಜಾನಪದ ಹಾಡುಗಾರ, ಸಾಹಿತಿ, ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ (74) ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮನೆ ಊಟಕ್ಕೆ ಹಂಬಲಿಸಿದ್ದ ದಾಸನಿಗೆ ಆಘಾತ; ದರ್ಶನ್ ಅರ್ಜಿ ವಜಾ ಆಗಿದ್ದಕ್ಕೆ 3 ಕಾರಣಗಳಿವೆ; ಏನದು?
ಈ ಬಗ್ಗೆ ಆಲೂರು ನಾಗಪ್ಪ ಅವರ ಮಗಳಾದ ದಿವ್ಯಾ ಆಲೂರು ಅವರು ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಅವರೇ ನೆರವೇರಿಸಿದ್ದಾರೆ. ಹಿಂದು ಧರ್ಮದಲ್ಲಿ ಗಂಡು ಮಕ್ಕಳು ಮಾತ್ರ ಈ ಕಾರ್ಯ ಮಾಡುತ್ತಾರೆ. ಆದರೆ ತಮ್ಮ ತಂದೆಯ ಅಂತ್ಯ ಕ್ರಿಯೆಯನ್ನು ಖುದ್ದು ದಿವ್ಯಾ ಅವರೇ ಮಾಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ದಿವ್ಯಾ ಆಲೂರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಂತ್ಯಕ್ರಿಯೆ ಮಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಆ ಪೋಸ್ಟ್ ಜೊತೆಗೆ ದಿವ್ಯಾ ಆಲೂರು ಅವರು, ಕಷ್ಟಕ್ಕೆ ಸುಖಕ್ಕೆ ಹೆಣ್ಣು ಮಕ್ಕಳು ಬೇಕು ಆದ್ರೆ, ಅಂತ್ಯಸಂಸ್ಕಾರಕ್ಕೆ ಏಕೆ ಅಡ್ಡಿ. ಪಿಂಡ ಇಡದಕ್ಕಾದ್ರೂ ಗಂಡು ಮಗು ಬೇಕು ಅಂತಾನೇ ಹೆಣ್ಣು ಭ್ರೂಣ ಹತ್ಯೆ ಎಷ್ಟೋ ಕಡೆ ನಡೆದಿದೆ. ಕಾಲ ಬದಲಾಗಿದೆ ನಾವು ಒಳ್ಳೆ ಬದಲಾವಣೆಗೆ ತೆರೆದುಕೊಳ್ಳೋಣ. ನಾನು ಯಾವ ಸಂಪ್ರದಾಯದ ವಿರೋಧಿಯಲ್ಲ ಆದರೆ ನಮ್ಮಪ್ಪನ ಅಂತ್ಯ ಸಂಸ್ಕಾರ ಮಾಡೋದು ನನ್ನ ಹಕ್ಕು ಅನ್ನೋ ಧೃಡ ಭಾವನೆ ಉಳ್ಳವಳು ನಾನು ಅಂತ ಬರೆದುಕೊಂಡಿದ್ದಾರೆ.
View this post on Instagram
ಇನ್ನು ಇದೇ ಫೋಸ್ಟ್ ನೋಡಿದ ಅದೆಷ್ಟೋ ಜನರು ಒಬ್ಬ ತಂದೆಗೆ ಇನ್ನು ಎಂತಹ ಮಗಳು ಸಿಗೋಕೆ ಸಾಧ್ಯ ಅಕ್ಕ. ನೀವು ನಮ್ಮ ಹೆಮ್ಮೆ. ನಿಮ್ಮ ನಿಲುವು ನಿಮ್ಮ ಧೈರ್ಯ ಅದೆಷ್ಟೋ ಹೆಣ್ಣುಮಕ್ಕಳಿಗೆ ಇನ್ನೆಲ್ಲೋ ಬದುಕುವ ಧೈರ್ಯ ಆಗಿರಬಹುದು. ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಇನ್ನಷ್ಟು ಶಕ್ತಿ ಕೂಡಲಿ ನಿಮಗೆ ಅಕ್ಕ, ಹದಿನೈದು ವರ್ಷಗಳ ಹಿಂದಿಯೇ ನನ್ನ ಅಮ್ಮ ದೈವಾದೀನರಾದಾಗ, ನನ್ನ ತಂದೆ ನನಗಿರೊದು ಒಬ್ಬಳೇ ಮಗಳು ಅವಳೇ ಕಾರ್ಯಗಳನ್ನು ಮಾಡಲಿ ಅನ್ನೊ ನಿರ್ಧಾರ ಮಾಡಿದ್ರು. ನಾವು ಆಗ ಇದೇ ತರನಾದ ಮಾತುಗಳನ್ನ ಕೇಳ್ಬೇಕಾಯ್ತು. ಬದಲಾವಣೆ ನಿಮ್ಮಿಂದಲೇ ನಡೆಯಲಿ ನಾನು ನಮ್ಮ ಅಪ್ಪ ಅಮ್ಮಗೆ ಒಬ್ಬಳೇ ಮಗಳು ನಮ್ಮ ಅಣ್ಣ ತೀರಿ ಹೋದರು ಅಪ್ಪ ಅಮ್ಮ ಜೊತೆ ನಾನೇ ಇರುವುದು ಅಗಾಗಿ ಎಲ್ಲಾ ಕರ್ತವ್ಯ ನನಗೆ ಸೇರಿದ್ದು ನಿಮ್ಮ ನೋಡಿ ನನಗೆ ಮತ್ತಷ್ಟು ಧೈರ್ಯ ಬಂದಿದೆ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ