ಸಖತ್ ಸದ್ದು ಮಾಡುತ್ತಿರುವ ರಾಮನಗರ ಮರುನಾಮಕರಣ ವಿಚಾರ
ನಮ್ಮ ಆಸ್ತಿ ಬೆಲೆ ಹೆಚ್ಚಾಗುತ್ತೆ, 1 ಕೋಟಿ ಇರೋದು ₹5 ಕೋಟಿ ಆಗುತ್ತೆ
ರಾಮನಗರ ಅಲ್ಲೇ ಇರುತ್ತೆ, ರಾಮನೂ ಅಲ್ಲೇ ಇರ್ತಾನೆ- ಗೃಹ ಸಚಿವ
ರಾಜಕಾರಣಿಗಳು.. ಸೆಲೆಬ್ರೆಟಿಗಳು ಆಗಾಗ ಹೆಸರು ಬದಲಾಯಿಸಿಕೊಳ್ಳುವುದು ಸಾಮಾನ್ಯ. ರಾಜ್ಯದಲ್ಲಿ ರಾಮನಗರ ಮರುನಾಮಕರಣ ವಿಚಾರವೇ ಸಖತ್ ಸದ್ದು ಮಾಡ್ತಿದೆ. ಜಿಲ್ಲೆಯ ಹೆಸರು ಬದಲಾವಣೆಗೆ ಕಾಂಗ್ರೆಸ್ ವರ್ಸಸ್ ದೋಸ್ತಿ ನಾಯಕರ ನಡುವೆ ಮತ್ತೊಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ನೀರಿನ ಮೇಲೆ ಉದ್ಘಾಟನೆಯಾದ ಒಲಿಂಪಿಕ್ಸ್.. ಅದ್ಧೂರಿ ಕ್ರೀಡಾಜಾತ್ರೆಗೆ ವರ್ಣರಂಜಿತ ಚಾಲನೆ
ಆಂಗ್ಲರ ಕಾಲದಲ್ಲಿ ಕ್ಲೋಸ್‌ಪೇಟೆ. ಕೆಂಗಲ್ ಹನುಮಂತಯ್ಯ ಕಾಲದಲ್ಲಿ ರಾಮನಗರ. ಇದೀಗ ಬೆಂಗಳೂರು ದಕ್ಷಿಣ. ಅದ್ಯಾಕೋ ಏನೋ, ರಾಜಕಾರಣಿಗಳು ಪಕ್ಷ ಬದಲಾಯಿಸಿದಂತೆ ರೇಷ್ಮೆನಗರಿಯ ಹೆಸರು ಬದಲಾಗುತ್ತಿದೆ. ಸದ್ಯ ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಅಂತ ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ವಿಚಾರ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಧಾರಾಕಾರ ಮಳೆಗೆ ಸೋರುತ್ತಿರೋ ತಹಶೀಲ್ದಾರ್ ಕಚೇರಿ.. ಅಪಾಯದ ಮಟ್ಟ ಮೀರಿದ ರಾಜ್ಯದ ನದಿಗಳು, ಆತಂಕ
‘2028 ರೊಳಗೆ ಜಿಲ್ಲೆಗೆ ರಾಮನಗರ ಅಂತ ಹೆಸರು ಬರುತ್ತೆ’
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರಕ್ಕೆ ದೋಸ್ತಿಗಳು ಗರಂ ಆಗಿದ್ದಾರೆ. ಅದರಲ್ಲೂ ತಮ್ಮ ಕರ್ಮಭೂಮಿಯ ಮರುನಾಮಕರಣಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಈ ಭೂಮಿ ಇರೋ ತನಕ ರಾಮನಗರ ಹೆಸರು ತೆಗೆಯಲು ಆಗಲ್ಲ. ಹೆಸರು ಬದಲಾಯಿಸುವುದನ್ನು ಬಿಟ್ಟು ರಾಮನಗರ ಎಷ್ಟು ಅಭಿವೃದ್ಧಿ ಆಗಿದೆ ಅನ್ನೋದನ್ನ ನೋಡಲಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ.
‘ರಾಜಕೀಯ ಪತನ’
ರಾಮನ ಹೆಸರನ್ನು ತೆಗೆಯೋಕೆ ಆಗಲ್ಲ. ರಾಮನಗರದ ಇತಿಹಾಸ ಅವರಿಗೆ ಗೊತ್ತಿದ್ದರೆ ತಾನೇ. ಅದರ ಇತಿಹಾಸ ಗೊತ್ತಿದ್ದರೆ ಅದಕ್ಕೆ ಕೈ ಹಾಕುತ್ತಿರಲಿಲ್ಲ. ರಾಮನಗರದ ಹೆಸರು ತೆಗೆಯೋಕೆ ಹೋಗಲಿ, ರಾಜಕೀಯವಾಗಿ ಪತನ ಪ್ರಾರಂಭವಾಗುತ್ತದೆ ಎನ್ನುವುದು ಮಾತ್ರ ಹೇಳುತ್ತೇನೆ. ರಾಮನಗರವನ್ನ ಭೂಮಿ ಇರೋವರೆಗೆ ಹೆಸರು ತೆಗೆಯೋಕೆ ಆಗಲ್ಲ. 2006ರಲ್ಲೇ ಯಾಕೆ ಪ್ರತಿಭಟನೆ ಮಾಡಲಿಲ್ಲ.
ಹೆಸರು ಬದಲಾವಣೆ ಮಾಡಿದಾಕ್ಷಣ ಹೆಚ್ಚಾಗುತ್ತಾ?. ಮೊದಲು ಅಲ್ಲಿಯ ಕಾನೂನಿಯ ವ್ಯವಸ್ಥೆಗಳನ್ನ ಸರಿಯಾಗಿ ಇಡದೇ, ಕನಕಪುರದಲ್ಲಿ ಅವರ ಎಂಎಲ್ಸಿಯೇ ಇರುವಂತ ಊರಲ್ಲೇ ಒಬ್ಬ ದಲಿತನ ಕೈ ಕಟ್ ಮಾಡಿದ್ದಾರೆ. ಕಾನೂನೆಲ್ಲ ಹದಗೆಟ್ಟಿದೆ. ಅಲ್ಲಿ ಕಾನೂನು ವ್ಯವಸ್ಥೆ ಇದೆಯಾ?. ಇದನ್ನೇ ಸರಿಯಾಗಿ ಇಡದೇ ಯಾವ ಹೆಸರು ಬದಲಾವಣೆ ಮಾಡಿ ಏನು ಅಭಿವೃದ್ಧಿ ಮಾಡೋಕೆ ಸಾಧ್ಯ?.
ಭವಿಷ್ಯ 2028ರೊಳಗೆ ಅದರ ಹೆಸರು ಮತ್ತೆ ರಾಮನಗರ ಎಂದು ಪ್ರತಿಷ್ಠಾಪನೆ ಆಗುತ್ತದೆ. ನನಗೇನು ಆತಂಕ ಇಲ್ಲ. ಪಾಪ ನಾಲ್ಕು ಜನರ ಖುಷಿಗೆ ಅವರು ಏನೇನು ಬೇಕೋ ಅದನ್ನ ಮಾಡಿಕೊಳ್ಳುತ್ತಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವ
ಕುಮಾರಸ್ವಾಮಿ ಹೇಳಿಕೆಗೆ ಗೃಹಸಚಿವ ಪರಮೇಶ್ವರ ತಿರುಗೇಟು
ಇನ್ನು ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಕುಮಾರಸ್ವಾಮಿ ಹೇಳಿಕೆಗೆ ಗೃಹಸಚಿವ ಡಾ.ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ರಾಮನಗರ ಅಲ್ಲೇ ಇರುತ್ತೆ ಎಲ್ಲಿ ಹೋಗಲ್ಲ. ರಾಮನಗರ ಹೆಸರು ಬದಲಾಯಿಸಲ್ಲ. ರಾಮನಗರವನ್ನ ಬೆಂಗಳೂರು ವ್ಯಾಪ್ತಿಗೆ ತರ್ತೀವಿ. ರಾಮನಗರ ಹಾಗೇ ಇರುತ್ತೆ ರಾಮನಗರ ಜಿಲ್ಲೆ ಅನ್ನೋದರ ಬದಲಿಗೆ ಬೆಂಗಳೂರು ದಕ್ಷಿಣ ಅಂತ ಬರುತ್ತೆ ಎಂದಿದ್ದಾರೆ.
‘ರಾಮ ಅಲ್ಲೇ ಇರ್ತಾನೆ’
ರಾಮನಗರ ಬೆಂಗಳೂರಿಗೆ ಸೇರಿತು ಎಂದು ಆದರೆ, ಸ್ವಾಭವಿಕವಾಗಿ ಬೆಳವಣಿಗೆ ಆಗುತ್ತೆ ಎನ್ನುವ ಉದ್ದೇಶದಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಮನಗರ ಅಲ್ಲೇ ಇರುತ್ತೆ. ಎಲ್ಲಿಯೂ ಹೋಗಲ್ಲ. ಜಿಲ್ಲೆಯ ಬದಲಾಗಿ ಬೆಂಗಳೂರು ದಕ್ಷಿಣ ಎಂದು ಕೊಡ್ತಾರೆ.
ನಾವು ಏನನ್ನು ಬದಲಾವಣೆ ಮಾಡುತ್ತಿಲ್ಲ. ರಾಮನಗರ ಅಲ್ಲೇ ಇರುತ್ತೆ. ರಾಮನೂ ಅಲ್ಲೇ ಇರ್ತಾನೆ. ರಾಮನಗರವನ್ನ ಬೆಂಗಳೂರಿಗೆ ಸೇರಿಸಿಕೊಳ್ಳಲು ಮಾಡುತ್ತಿದ್ದೇವೆ.
ಡಾ.ಜಿ.ಪರಮೇಶ್ವರ್, ಗೃಹಸಚಿವ
ಇದನ್ನೂ ಓದಿ: ಮಾರ್ಟಿನ್ ಒಂದೇ ಅಲ್ಲ.. ಸತ್ಯಾ ರೆಡ್ಡಿ, ಸುನೀಲ್ ರೆಡ್ಡಿಯಿಂದ ಸ್ಯಾಂಡಲ್ವುಡ್ಗೆ ಪಂಗನಾಮ.. AP ಅರ್ಜುನ್ ಹೇಳಿದ ಸತ್ಯವೇನು?
ಇನ್ನು ಇದೇ ವಿಚಾರವಾಗಿ ಮಾತನಾಡಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮೂಲತಃ ನಾವು ಬೆಂಗಳೂರು ಜಿಲ್ಲೆಯವರು. ರಾಮನಗರ ಜಿಲ್ಲೆಯಿಂದ ಅಭಿವೃದ್ಧಿ ಆಗಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಆಗಬೇಕು ಎಂದು ನಾವು ಮನವಿ ಮಾಡಿದ್ದೇವೆ. ಕುಮಾರಸ್ವಾಮಿ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆಯ ಋಣ ತೀರಿಸಬೇಕು ಎಂದಿದ್ದಾರೆ.
ನಮ್ಮ ಜಿಲ್ಲೆ ಬಹಳ ಶೀಘ್ರವಾಗಿ ಅಭಿವೃದ್ಧಿಯಾಗಲೆಂದು ಎಲ್ಲರೂ ಕೂಡ ಇದನ್ನ ಮಾಡುತ್ತಿದ್ದೇವೆ. ನಮ್ಮ ಆಸ್ತಿ ಬೆಲೆ ಹೆಚ್ಚಾಗುತ್ತದೆ. ಒಂದು ಕೋಟಿ ಇರೋದು ₹5 ಕೋಟಿ ಆಗುತ್ತದೆ. 5 ಇರೋದು ₹10 ಕೋಟಿ ಆಗುತ್ತದೆ. ಯಾರು ವ್ಯಾಪಾರ ಮಾಡ್ತಾರೋ ಅವರಿಗೆ ಲಾಭ ಆಗುತ್ತೆ. ರೈತರ ಜಮೀನಿಗೆ ಒಳ್ಳೆಯ ಬೆಲೆ ಬಂದರೆ ಅವರಿಗೆ ತಾನೇ ಒಳ್ಳೆಯದು ಆಗೋದು.
ಇಕ್ಬಾಲ್ ಹುಸೇನ್, ಶಾಸಕ
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರವಾಗಿ ರಾಜ್ಯದಲ್ಲಿ ಮತ್ತೆ ಜಟಾಪಟಿ ಶುರುವಾಗಿದೆ. ಸದ್ಯ ಸಚಿವ ಸಂಪುಟದಲ್ಲಿ ಹೆಸರು ಬದಲಾವಣೆಗೆ ಅನುಮೋದನೆ ಸಿಕ್ಕಿದೆ. ಇದು ಮುಂದೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗೋದ್ರಲ್ಲಿ ಸಂಶಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ