newsfirstkannada.com

×

ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ.. ​ಸವಾರ ಸ್ಥಳದಲ್ಲೇ ಸಾವು

Share :

Published July 27, 2024 at 11:39am

    ಬಿಟ್ಟು ಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ನಡೆದ ದುರಂತ

    ಅಕೇಶಿಯಾ ಮರ ಬಿದ್ದು ಸಾವನ್ನಪ್ಪಿದ 26 ವರ್ಷದ ಯುವಕ

    ಮನೆಯಿಂದ ಹೋದವನು ವಾಪಸ್​​ ಬಾರದಿದ್ದಾಗ ಹುಡುಕಾಟ

ಶಿವಮೊಗ್ಗ: ಬಿಟ್ಟು ಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ಯುವಕ ಬಲಿಯಾದ ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್ ಮೇಲೆ ಅಕೇಶಿಯಾ ಮರ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯತ್​ನ ಮೀನ್ಮನೆಕೊಪ್ಪ ಎಂಬಲ್ಲಿ ಘಟನೆ ನಡೆದಿದೆ. ರಾಮಪ್ಪ (26) ಎಂಬ ಯುವಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಶಿರೂರು: ಲಾರಿ ಚಾಲಕ ಅರ್ಜುನ್​ ಹುಡುಕಲು ‘ಈಶ್ವರ’ನ ಮೊರೆ.. ಸಮುದ್ರದ ಆಳಕ್ಕೆ ಹೋಗಿ ಶವ ತರೋ ಸಾಹಸಿ ಈತ

ರಾಮಪ್ಪ ಕೋಣಂದೂರಿಗೆ ಕೆಲಸದ ನಿಮಿತ್ತ ತೆರಳಿದ್ದನು. ಕೋಣದೂರಿನಿಂದ ಮನೆಗೆ ಹಿಂದಿರುಗುವಾಗ ಘಟನೆ ನಡೆದಿದೆ. ಈ ವೇಳೆ ಬೈಕ್ ಮೇಲೆ ಅಕೇಶಿಯಾ ಮರಬಿದ್ದು ರಾಮಪ್ಪ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: ಅಲರ್ಟ್​! ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ಮಳೆ ಬರುತ್ತೆ.. ಎಚ್ಚರದಿಂದಿರಿ

ಚಲಿಸುತ್ತಿರುವಾಗಲೇ ಬೈಕ್ ಮೇಲೆ ಅಕೇಶಿಯಾ ಮರ ಬಿದ್ದಿದೆ. ರಾಮಪ್ಪ ಮನೆಗೆ ಬಾರದೆ ಹಿನ್ನೆಲೆ ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ.. ​ಸವಾರ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/07/Shivmogga-3.jpg

Load More