ಮಿಸ್ಟರ್ ಬೀನ್ ಫೇಕ್ ಫೋಟೋದ ಅಸಲಿಯತ್ತು.. ಈಗ ಹೇಗಿದ್ದಾರೆ?
ವಿಭಿನ್ನ, ವಿಚಿತ್ರ ಹಾವಭಾವಗಳೊಂದಿಗೆ ಮಿಸ್ಟರ್ ಬೀನ್ ಫೇಮಸ್
ಹಾಸಿಗೆ ಹಿಡಿದಿದ್ದಾರೆ ಅನ್ನೋ ಫೋಟೋ ಕೊಲಾಜ್ ಮಾಡಿ ವೈರಲ್
ಮಿಸ್ಟರ್ ಬೀನ್.. ವಾವ್ಹ್..! ಎಂಥ ಮೇರು ಕಲಾವಿದ. ಅವರ ನಟನೆಯನ್ನು ನೋಡುತ್ತಿದ್ದರೆ ಎಷ್ಟೇ ನೋವು, ಕಷ್ಟವಿದ್ದರೂ ಹೊಸ ಹುಮ್ಮಸ್ಸು, ಖುಷಿ, ಸಂತೋಷ, ಜೀವನ ಉತ್ಸಾಹ ಎಲ್ಲವೂ ಬಂದು ಬಿಡುತ್ತದೆ. ಇದೇ ಕಾರಣಕ್ಕೆ ಕೋಟ್ಯಾಂತರ ಅಭಿಮಾನಿಗಳು ಅವರನ್ನು ಪ್ರೀತಿಸುತ್ತಾರೆ.
ತಮ್ಮ ವಿಭಿನ್ನ, ವಿಚಿತ್ರ ಹಾವ-ಭಾವಗಳೊಂದಿಗೆ ನಟಿಸಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ನಕ್ಕು, ನಗಿಸುವ ಟ್ಯಾಲೆಂಟ್ ಮಿಸ್ಟರ್ ಬೀನ್ಗೆ ಇದೆ. ಅಂದ್ಹಾಗೆ ಮಿಸ್ಟರ್ ಬಿನ್ ನಿಜವಾದ ಹೆಸರು ರೋವನ್ ಅಟ್ಕಿನ್ಸನ್ (Rowan Atkinson). ಇವರನ್ನು ನೋಡುತ್ತಿದ್ದರೆ ಜನರು ತಮ್ಮ ನೋವುಗಳನ್ನೇ ಮರೆಯುತ್ತಾರೆ. ಅಂತಹ ಮಹಾನ್ ನಟನ ಕುರಿತು ಕೆಟ್ಟ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಇದನ್ನೂ ಓದಿ:ಬೂಮ್ರಾಗೆ ಬಿಗ್ ಶಾಕ್.. ಟೆಸ್ಟ್ ತಂಡದ ಉಪನಾಯಕನ ಪಟ್ಟದಿಂದ ಕೊಕ್..!
ಅದು ಏನೆಂದರೆ ಮಿಸ್ಟರ್ ಬೀನ್, ಅನಾರೋಗ್ಯಕ್ಕೆ ಒಳಗಾಗಿ ಬೆಡ್ ಮೇಲಿರೋ ಅದಾಗಿದೆ. 69 ವರ್ಷದ ಮಿಸ್ಟರ್ ಬೀನ್ ಹಾಸಿಗೆ ಮೇಲೆ ಮಲಗಿದ್ದ ಫೋಟೋ ನೋಡಿ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಆದರೆ ಅದು ನಿಜವಲ್ಲ. ಸುಳ್ಳು ಸುದ್ದಿ!
ಈ ಹಿಂದೆಯೂ ಸೋಶಿಯಲ್ ಮೀಡಿಯಾದಲ್ಲಿ ಮಿಸ್ಟರ್ ಬೀನ್ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಿದ್ದವು. 2017ರಲ್ಲಿ ಮಿಸ್ಟರ್ ಬೀನ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದು ಸುಳ್ಳೆಂದು ಗೊತ್ತಾದ ಮೇಲೆಯೇ ಆಘಾತಕ್ಕೆ ಒಳಗಾಗಿದ್ದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು.
ಇದನ್ನೂ ಓದಿ:40 ವರ್ಷಗಳ ನಂತರ ಫೋನ್ ಮಾಡಿದ ಪತ್ನಿ.. ಆಗಲೂ ಮಾತನಾಡದೇ ಜೀವ ಬಿಟ್ಟ ಪತಿ..
ಏನಿದು ಕತೆ..?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋವು AI ಸಹಾಯದಿಂದ ಎಡಿಟ್ ಮಾಡಲಾಗಿದೆ. ಅಂದರೆ ಫೇಸ್ ಟ್ಯಾಪಿಂಗ್ ಡಿವೈಸ್ (Face Tapping Device) ಬಳಸಿ ಎಡಿಟ್ ಮಾಡಲಾಗಿದೆ. ಇನ್ನು ಅದರ ಮೂಲ ಫೋಟೋ 75 ವರ್ಷದ ಬ್ಯಾರಿ ಬಾಲ್ಡರ್ಸ್ಟೋನ್ ಅವರದ್ದಾಗಿದೆ. ಇವರು ಪಾರ್ಕಿನ್ಸನ್ (Parkinson) ರೋಗದಿಂದ ಬಳಲುತ್ತಿದ್ದಾರೆ. 2020 ಜನವರಿ 30ರಂದು ಖಾಸಗಿ ವೆಬ್ಸೈಟ್ನಲ್ಲಿ ಪ್ರಕಟಿಸಿದ ಸುದ್ದಿಯಲ್ಲಿ ಇದೇ ರೀತಿಯ ಕೊಂಚ ವ್ಯತ್ಯಾಸದ ಫೋಟೋ ಕಂಡು ಬಂದಿತ್ತು. ಈ ಬಗ್ಗೆ ತನಿಖಾ ವರದಿ ನಡೆಸಿದಾಗ ಅದು ಮಿಸ್ಟರ್ ಬೀನ್ ಅಲ್ಲ ಅನ್ನೋದು ಕನ್ಫರ್ಮ್ ಆಗಿದೆ.
ಇದನ್ನೂ ಓದಿ:ಬ್ಯಾಂಕ್ ಕೆಲಸ ಐದು ದಿನದಲ್ಲಿ ಮುಗಿಸಿಕೊಳ್ಳಿ.. ಆಗಸ್ಟ್ನಲ್ಲಿ ಬ್ಯಾಂಕ್ಗಳಿಗೆ ಭರ್ಜರಿ ರಜೆ..!
ಮೂಲ ಫೋಟೋ ಜೊತೆಗೆ ವೈರಲ್ ಆಗಿರುವ ಫೋಟೋ ಹೋಲಿಕೆ ಮಾಡಿದಾಗ ಅಸಲಿ ವಿಚಾರ ಗೊತ್ತಾಗಿದೆ. ‘Mr. Bean in 2024’ ಎಂದು ಹೇಳಿಕೊಳ್ತಿರುವ ಫೋಟೋಗಳು ಫೇಕ್ ಅನ್ನೋದು ದೃಢಪಟ್ಟಿದೆ. ಅಂಗೈಯಲ್ಲೇ ಟೆಕ್ನಾಲಜಿಗಳು ಹೆಚ್ಚಾಗಿ ಸಿಗ್ತಿರೋದ್ರಿಂದ ರೂಮರ್ಸ್, ವೈರಲ್ಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದೆ ಮುಲ್ತಾನ್ ಸುಲ್ತಾನ್ಸ್ ವರ್ಸಸ್ ಇಸ್ಲಾಮಾಬಾದ್ ಯುನೈಟೆಡ್ ನಡುವಿನ PSL 2024 ಫೈನಲ್ ಮ್ಯಾಚ್ ಟೈಂನಲ್ಲಿ ಮಿಸ್ಟರ್ ಬೀನ್ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!
ಹಾಲಿವುಡ್ ನಟ ಮಿಸ್ಟರ್ ಬೀನ್, ಇತ್ತೀಚೆಗೆ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ (British Grand Prix) ಫುಲ್ ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದರು. ಜುಲೈ 7, 2024ರಂದು ಫಾರ್ಮುಲಾ ಒನ್ (Formula-1) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಅಂತ ಕೇಳಿದ್ಮೇಲೆ ಇನ್ನಷ್ಟು ಖುಷಿಯಾಗಿದ್ದಾರೆ ಫ್ಯಾನ್ಸ್.
ವಿಶೇಷ ವರದಿ: ನವೀನ್ ಕುಮಾರ್ ಬಿ.ಎನ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ