ಕೃಷ್ಣೆಯ ಪ್ರವಾಹದಿಂದ ಸಾಂಗ್ಲಿಗೆ ಸಂಕಷ್ಟ, ಜನರ ರಕ್ಷಣೆಗೆ ಬಂದ NDRF
ರಬಕವಿ-ಬನಹಟ್ಟಿ, ಜಮಖಂಡಿ ತಾಲ್ಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ
ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ, ರೈತರ ಬೆಳೆಗಳೆಲ್ಲ ಮುಳುಗಡೆ
ಕಳೆದ ಬಾರಿ ಕೈಕೊಟ್ಟು ಜಲಾಶಯಗಳನ್ನ ಬರಿದಾಗಿಸಿದ್ದ ಮಳೆರಾಯ ಈ ಬಾರಿ ರೌದ್ರವಾತಾರ ಪ್ರದರ್ಶಿಸಿ ಜಲಾಶಯಗಳನ್ನ ಮೈದುಂಬಿಸಿದ್ದಾನೆ. ಮಳೆರಾಯನ ಅಬ್ಬರಕ್ಕೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ರಾಜ್ಯದ ಹಲವೆಡೆ ಭತ್ತ ನಾಟಿ ಮಾಡುವ ಕೆಲಸ ಚುರುಕುಗೊಂಡಿದೆ.
ಕೃಷ್ಣೆ ಅಬ್ಬರಕ್ಕೆ ಸಾಂಗ್ಲಿ ನಗರ ತಲ್ಲಣ!
ಕೃಷ್ಣಾ ನದಿಯ ರೌದ್ರಾವತಾರಕ್ಕೆ ಮಹಾರಾಷ್ಟ್ರದ ಸಾಂಗ್ಲಿ ನಗರ ತಲ್ಲಣಗೊಂಡಿದೆ. ಸಾಂಗ್ಲಿ ನಗರಕ್ಕೆ ಕೃಷ್ಣಾ ನದಿ ಪ್ರವಾಹ ಲಗ್ಗೆ ಇಟ್ಟಿದ್ದು, ಕ್ಷಣ ಕ್ಷಣಕ್ಕೂ ನದಿಯ ಅಬ್ಬರ ಜೋರಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿರೋ ಜನರನ್ನ ರಕ್ಷಣೆ ಮಾಡಲು SDRF ಮತ್ತು NDRF ತಂಡಗಳು ಫೀಲ್ಡ್ಗಿಳಿದಿವೆ. ಸಾಂಗ್ಲಿ ನಗರಕ್ಕೆ ಪ್ರವಾಹ ಲಗ್ಗೆ ಇಟ್ಟಿರೋ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಮಾಜಿ MLA ಒತ್ತಡಕ್ಕೆ ಮಣಿದು ಟ್ರಾನ್ಸ್ಫರ್? ಕುಂದಾಪುರ ದಕ್ಷ ಅಧಿಕಾರಿ ಎಸಿ ರಶ್ಮಿ ದಿಢೀರ್ ವರ್ಗಾವಣೆ; ಆಕ್ರೋಶ
ಬಾಗಲಕೋಟೆ ಜಿಲ್ಲೆಯ ಗ್ರಾಮಗಳಲ್ಲಿ ಪ್ರವಾಹ ಭೀತಿ
ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಭಾರೀ ಮಳೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ಹಾಗೂ ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆ ಮುಧೋಳ, ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಕೃಷ್ಣಾ ಹಾಗೂ ಘಟಪ್ರಭಾ ತೀರದ ತಾಲೂಕು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಪ್ರವಾಹದ ನಡುವೆ ಬಿತ್ತನೆ ಕಾರ್ಯ ಚುರುಕು
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿಯಲ್ಲಿ ಪ್ರವಾಹದ ಮಧ್ಯೆ ಅನ್ನದಾತರು ಫುಲ್ ಜೋಶ್ನಿಂದ ಭತ್ತ ನಾಟಿ ಮಾಡ್ತಿದ್ದಾರೆ. ಕೃಷ್ಣಾ ನದಿ ಪ್ರವಾಹದಿಂದ ಸದ್ಯ 100 ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗಿದ್ದು, ಇಷ್ಟಾದ್ರೂ ಹಠ ಬಿಡದ ರೈತರು ಪ್ರವಾಹದ ಪಕ್ಕದಲ್ಲೇ ನಾಟಿ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕಾಲುವೆ ನೀರಿನಿಂದ ಅವಾಂತರ.. ಬೆಳೆ ಜಲಾವೃತ
ವಿಜಯಪುರದ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡ್ತಿರೋ ಹಿನ್ನೆಲೆ ರೈತರಿಗೆ ಸಂಕಷ್ಟ ಎದುರಾಗಿದೆ. ಕಾಲುವೆ ನೀರಿನಿಂದ ಬೆಳೆಗಳು ಜಲಾವೃತವಾಗಿದ್ದು, ಕಾಲುವೆ ದುರಸ್ತಿ ಮಾಡದ ಹಿನ್ನಲೆ ನೀರು ಜಮೀನಿಗೆ ಲಗ್ಗೆ ಇಟ್ಟಿದೆ ಅಂತ ರೈತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ರಾತ್ರಿ ರಾಡ್ನಿಂದ ಬೀಗ ಹೊಡೆದು ಮನೆಗೆ ನುಗ್ಗಿದ್ದ ಕಳ್ಳ.. ತಾನೇ 20 ರೂಪಾಯಿ ಇಟ್ಟು ಹೋದ!
ತುಂಗಭದ್ರಾ ಜಲಾಶಯ ಭರ್ತಿ.. ಬಾಗೀನ ಸಮರ್ಪಣೆ!
ವಿಜಯನಗರ ಜಿಲ್ಲೆಯಲ್ಲಿರೋ ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಮೈದುಂಬಿದೆ. ಟಿಬಿ ಡ್ಯಾಂ ಭರ್ತಿಯಾಗಿರೋದ್ರಿಂದ ಕಲ್ಯಾಣ ಕರ್ನಾಟಕ ಭಾಗದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಲಾಶಯ ಭರ್ತಿಯಾದ ಸಂಭ್ರಮದಲ್ಲಿ ಬಿಜೆಪಿ ಯುವ ಮುಖಂಡ ಸಿದ್ಧಾರ್ಥ್ ಸಿಂಗ್ ತುಂಗಭದ್ರೆಗೆ 108 ಬಾಗಿನ ಸಲ್ಲಿಸಿದರು.
ಇದನ್ನೂ ಓದಿ: ‘ಕ್ಯಾಪ್ಟನ್ ಅಲ್ಲ, ಲೀಡರ್ನಂತೆ ಕಾಣಿಸಿದ್ದಾರೆ’.. ರೋಹಿತ್ ಶರ್ಮಾ ಬಗ್ಗೆ ಸೂರ್ಯಕುಮಾರ್ ಅಚ್ಚರಿ ಹೇಳಿಕೆ!
ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿರೋ ಮಳೆರಾಯ ಜಲಾಶಯಗಳಿಗೆ ಜೀವಕಳೆ ತುಂಬಿದ್ದಾನೆ. ರಾಜ್ಯದ ಹಲವೆಡೆ ಭತ್ತ ನಾಟಿ ಮಾಡೋ ಕಾರ್ಯ ಚುರುಕುಗೊಂಡಿದ್ದು ರೈತರು ವರುಣನ ಮೇಲೆ ಭಾರ ಹಾಕಿ ಭೂಮಿತಾಯಿಯ ಮಡಿಲಿಗೆ ಭತ್ತ ನಾಟಿ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ