ಮೈಸೂರಿನ ಮಾಜಿ ಸಂಸದರಿಗೆ ಒಲಿದು ಬಂದ ಮಹತ್ವದ ಹುದ್ದೆ
CH ವಿಜಯ್ ಶಂಕರ್ ಈಗ ಯಾವ ರಾಜ್ಯದ ರಾಜ್ಯಪಾಲರು..?
ನೂತನ ರಾಜ್ಯಪಾಲರನ್ನು ನೇಮಕ ಮಾಡಿದ ರಾಷ್ಟ್ರಪತಿ ಮುರ್ಮು
ಬೆಂಗಳೂರು: ರಾಜಸ್ಥಾನ, ತೆಲಂಗಾಣ, ಪಂಜಾಬ್ ಸೇರಿದಂತೆ 9 ರಾಜ್ಯಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಅದರಂತೆ ಮೇಘಾಲಯದ ನೂತನ ಗವರ್ನರ್ ಆಗಿ ಮೈಸೂರಿನ ಮಾಜಿ ಸಂಸದ ಸಿ.ಹೆಚ್ ವಿಜಯ್ ಶಂಕರ್ ಅವರನ್ನ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಡ್ಯಾಂಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ; ಈಗಷ್ಟೇ ನಾಟಿ ಶುರುಮಾಡಿದ್ದ ಅನ್ನದಾತರಿಗೆ ಸಂಕಷ್ಟ
ರಾಣೆಬೆನ್ನೂರು ಮೂಲದವರಾದ ಚಂದ್ರಶೇಖರ್ ಹೆಚ್.ವಿಜಯ್ ಶಂಕರ್ ಇವರ ಪೂರ್ಣ ಹೆಸರು. ವಿಜಯ್ ಶಂಕರ್ 1956 ಅಕ್ಟೋಬರ್ 21ರಂದು ಜನಿಸಿದರು. ರಾಜಕೀಯ ಆರಂಭದ ದಿನಗಳಿಂದ ಬಿಜೆಪಿಯಲ್ಲಿದ್ದ ಇವರು, 2017ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. 2019ರಲ್ಲಿ ಮತ್ತೆ ಬಿಜೆಪಿಗೆ ಸೇರಿಕೊಂಡಿದ್ದಾರೆ. ಇದೀಗ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಮೊದಲು ಬಿಜೆಪಿಯಿಂದ ಸ್ಪರ್ಧೆ ಮಾಡಿ ಮೈಸೂರಿನ ಸಂಸದರಾಗಿದ್ದರು. 2014ರಲ್ಲಿ ಹಾಸನದಿಂದ ಸ್ಪರ್ಧೆ ಮಾಡಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿರುದ್ಧ ಸೋಲು ಕಂಡರು. ಮೈಸೂರಿನ ಹುಣಸೂರು ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್ನ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇದೆ.
ಇದನ್ನೂ ಓದಿ: IAS ಕೋಚಿಂಗ್ ಸೆಂಟರ್ಗೆ ಮಳೆ ನೀರು ನುಗ್ಗಿ ದುರಂತ.. ಮೂವರು ವಿದ್ಯಾರ್ಥಿಗಳು ಸಾವು
ರಾಜ್ಯಗಳಿಗೆ ಆಯ್ಕೆಯಾದ ನೂತನ ರಾಜ್ಯಪಾಲರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ