ರಾಷ್ಟ್ರ ರಾಜಧಾನಿಯಲ್ಲಿ ಮಳೆಯಿಂದಾದ ಅನಾಹುತಕ್ಕೆ ಯಾರು ಹೊಣೆ
ಭೀಕರ ಮಳೆಯಿಂದ ಓದುತ್ತಾ ಕುಳಿತ್ತಿದ್ದ ಮೂವರು ವಿದ್ಯಾರ್ಥಿಗಳು ಸಾವು
ಕೋಚಿಂಗ್ ಸೆಂಟರ್‌ನ ದುರಂತ ಖಂಡಿಸಿ ವಿದ್ಯಾರ್ಥಿಗಳು ಕೆಂಡಾಮಂಡಲ
ನವದೆಹಲಿ: ಐಎಎಸ್ ಆಗುವ ಕನಸು ಹೊತ್ತಿದ್ದ ಮೂವರು ವಿದ್ಯಾರ್ಥಿಗಳನ್ನ ವರುಣ ಬಲಿ ಪಡೆದಿದ್ದಾನೆ. ಲೈಬ್ರರಿಯಲ್ಲಿ ಕುಳಿತು ಓದುತ್ತಿರುವಾಗ ಚರಂಡಿ ಮೋರಿಯ ತಡೆಗೋಡೆ ಒಡೆದು ದುರ್ಘಟನೆ ಸಂಭವಿಸಿದೆ. ತಮ್ಮ ಮಕ್ಕಳು ಚೆನ್ನಾಗಿ ಓದಿ IAS ಆಗ್ತಾರೆ ಅಂತಾ ಪೋಷಕರು ಕಾಣ್ತಿದ್ದ ಕನಸಿಗೆ ವರುಣ ಕೊಳ್ಳಿ ಇಟ್ಟಿದ್ದಾನೆ. ಹಗಲು ರಾತ್ರಿ ಕಷ್ಟಪಟ್ಟು ಓದಿ ಆಫೀಸರ್ಗಳಾಗಬೇಕು ಅಂದುಕೊಂಡವರ ಬದುಕನ್ನೇ ಮಳೆರಾಯ ಕಸಿದುಕೊಂಡಿದ್ದಾನೆ. ರಾಷ್ಟ್ರರಾಜಧಾನಿಯಲ್ಲಿ ಮಳೆಯಿಂದಾದ ಈ ಅನಾಹುತ ಸುದ್ದಿ ಕೇಳಿ ಇಡೀ ದೇಶವೇ ಮರುಗಿದೆ.
ಇದನ್ನೂ ಓದಿ: ಗಂಗಾವಳಿ ನದಿ ರಭಸಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ಶಾಕ್.. 3 ಮೃತದೇಹಗಳ ಬಗ್ಗೆ ಏನ್ ಹೇಳಿದ್ದಾರೆ?
IAS ಕೋಚಿಂಗ್ ಸೆಂಟರ್ಗೆ ನುಗ್ಗಿದ ನೀರು, ಮೂವರು ಜಲಸಮಾಧಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಜನರು ಕಂಗಾಲಾಗಿದ್ದಾರೆ. ಐಎಎಸ್ ಕೋಚಿಂಗ್ ಸೆಂಟರ್ವೊಂದರ ನೆಲಮಳಿಗೆಗೆ ಏಕಾಏಕಿ ಮಳೆ ನೀರು ಲಗ್ಗೆ ಇಟ್ಟ ಪರಿಣಾಮ, ಓದುತ್ತಾ ಕುಳಿತ್ತಿದ್ದ ಮೂವರು ವಿದ್ಯಾರ್ಥಿಗಳು ಪ್ರಾಣವೇ ಹಾರಿ ಹೋಗಿದೆ. ದೆಹಲಿಯಲ್ಲಿ ಕಳೆದೊಂದು ವಾರದಿಂದ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಆದ್ರೆ ಮೊನ್ನೆ ರಾತ್ರಿ ಸುರಿದ ರಣಮಳೆ ಖಡಕ್ ಆಫೀಸರ್ ಆಗಬೇಕೆಂದು ಕನಸ್ಸು ಕಂಡಿದ್ದ ಮೂವರು ಆಕಾಂಕ್ಷಿಗಳ ಬಲಿ ಪಡೆದಿದೆ. ದೆಹಲಿಯ ಓಲ್ಡ್ ರಾಜೇಂದ್ರ ನಗರದ ಖ್ಯಾತ UPSC ಕೋಚಿಂಗ್ ಸೆಂಟರ್ಗೆ ಮಳೆ ನೀರು ನುಗ್ಗಿದ ರಭಸಕ್ಕೆ ಜಲಸಮಾಧಿಯಾಗಿದ್ದಾರೆ.
ಐಎಎಸ್ಗೆ ತಯಾರಾಗ್ತಿದ್ದ ಉತ್ತರ ಪ್ರದೇಶ ಮೂಲದ ಶ್ರೇಯಾ ಯಾದವ್ ಕೋಚಿಂಗ್ ಸೆಂಟರ್ಗೆ ನುಗ್ಗಿದ ನೀರಿನಲ್ಲಿ ಸಿಲುಕಿ ಜೀವ ಬಿಟ್ಟಿದ್ದಾಳೆ. ಕೇರಳ ಮೂಲದ ನಿವಿನ್ ಡಾಲ್ವಿನ್ ಎಂಬಾತ ಪ್ರಾಣ ಕಳೆದುಕೊಂಡಿದ್ದಾನೆ. ಇವ್ವರಿಬ್ಬರ ಜೊತೆ ತೆಲಂಗಾಣ ಮೂಲದ ಇನ್ನೋರ್ವ ವಿದ್ಯಾರ್ಥಿನಿ ತಾನ್ಯಾ ಸೋನಿ ಸಹ ಉಸಿರು ಚೆಲ್ಲಿದ್ದಾಳೆ.
ಇದನ್ನೂ ಓದಿ: ಶಿರೂರು ಗುಡ್ಡದಲ್ಲಿ ಮನಕಲಕುವ ಘಟನೆ.. ಊಟನೂ ತಿನ್ನದೇ ಮಾಲೀಕಗಾಗಿ ಕಾಯುತ್ತಿವೆ ನಾಯಿಗಳು
Students hold protest over death of 3 UPSC aspirants after Rau’s IAS coaching centre basement flooded in Delhi.
A video Thread 📍 pic.twitter.com/XCRkxbB2VW
— UPSC NOTES (@UPSC_Notes) July 27, 2024
ದುರ್ಘಟನೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರೋಟೆಸ್ಟ್
ಇನ್ನು, ಕೋಚಿಂಗ್ ಸೆಂಟರ್‌ನ ದುರಂತ ಖಂಡಿಸಿ ವಿದ್ಯಾರ್ಥಿಗಳ ಕೆಂಡಾಮಂಡಲವಾಗಿದ್ದಾರೆ. ಮೂವರು ವಿದ್ಯಾರ್ಥಿಗಳ ಸಾವಿಗೆ ಕೋಚಿಂಗ್ ಸೆಂಟರ್ ಬೇಜವಾಬ್ದಾರಿತನ ಕಾರಣ ಅಂತ ಕಿಡಿಕಾರಿ ಪ್ರತಿಭಟನೆ ನಡೆಸಿದ್ರು. ಸದ್ಯ, ಕೋಚಿಂಗ್ ಸೆಂಟರ್‌ನ ಮಾಲೀಕರು, ವ್ಯವಸ್ಥಾಪಕರನ್ನ ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಭವಿಷ್ಯದ ಬಗ್ಗೆ ಅಪಾರ ಕನಸು ಹೊತ್ತ ಆಕಾಂಕ್ಷಿಗಳು ಹೀಗೆ ಕಮರಿ ಹೋಗಿದ್ದು ದುರಂತವೇ ಸರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ