newsfirstkannada.com

×

‘ಇನ್ನೆಷ್ಟು ಅವಕಾಶ ಕೊಡಬೇಕು..’ ಗೋಲ್ಡನ್ ಡಕ್ ಆದ ಟೀಂ ಇಂಡಿಯಾ ಆಟಗಾರನ ವಿರುದ್ಧ ಆಕ್ರೋಶ

Share :

Published July 29, 2024 at 7:51am

    ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ ಸಂಜು ಸ್ಯಾಮ್ಸನ್

    ಪ್ಲೇಯಿಂಗ್-11ನಲ್ಲಿ ಸ್ಥಾನ ಸಿಕ್ಕಿರೋದಕ್ಕೆ ಖುಷಿ ಪಟ್ಟಿದ್ದ ಫ್ಯಾನ್ಸ್

    ಒಂದು ರನ್ ಗಳಿಸದೇ ಔಟ್ ಆಗಿದ್ದಕ್ಕೆ ಅಭಿಮಾನಿಗಳಿಗೆ ಬೇಸರ

ಶ್ರೀಲಂಕಾ ವಿರುದ್ಧದ ಎರಡನೇ ಟಿ20ಯಲ್ಲಿ ಸಂಜು ಸ್ಯಾಮ್ಸನ್​​ಗೆ ಪ್ಲೇಯಿಂಗ್-11ನಲ್ಲಿ ಅವಕಾಶ ಸಿಕ್ಕಾಗ ಅಭಿಮಾನಿಗಳು ಖುಷಿ ಪಟ್ಟಿದ್ದರು. ಚಿನ್ನದಂಥ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಸಂಜು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ ಗೋಲ್ಡನ್ ಡಕ್ ಆದರು. ಗಿಲ್ ಗಾಯಗೊಂಡ ಹಿನ್ನೆಲೆಯಲ್ಲಿ ಸಂಜು ಪ್ಲೇಯಿಂಗ್ -11ನಲ್ಲಿ ಸ್ಥಾನ ಪಡೆದುಕೊಂಡಿದ್ದರು. ವಿಶೇಷ ಅಂದರೆ ಸಂಜು ಸ್ಯಾಮ್ಸನ್​​ಗೆ ಓಪನಿಂಗ್ ಬ್ಯಾಟ್ಸ್​ಮನ್​ ಆಗಿ ಮುಂಬಡ್ತಿಯೂ ಸಿಕ್ಕಿತ್ತು. ಈ ಅವಕಾಶವನ್ನು ಕೈಚೆಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗರಿಯಾಗಿದ್ದಾರೆ.

ಇದನ್ನೂ ಓದಿ:ಚರಂಡಿ ಪ್ರವಾಹಕ್ಕೆ ಕೊಚ್ಚಿಹೋದ IAS ಕನಸು.. ಶ್ರೇಯಾ ಯಾದವ್ ಕುಟುಂಬದ ಭರವಸೆ ಛಿದ್ರ, ಛಿದ್ರ..

ಈ ಮೂಲಕ ಸಂಜು ಸ್ಯಾಮ್ಸನ್ 3ನೇ ಟಿ20ಯಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಆರಂಭಿಕ ಆಟಗಾರನಾಗಿ ಸಂಜುಗೆ ಅಭ್ಯಾಸ ಇಲ್ಲ. ಆದರೆ ತಂಡದ ಪರಿಸ್ಥಿತಿಯಲ್ಲಿ ಅವಕಾಶ ಸಿಕ್ಕಾಗೆಲ್ಲ ಚೆನ್ನಾಗಿ ಆಡುವುದು ಅತ್ಯಗತ್ಯ. ಕೋಚ್ ಗೌತಮ್ ಗಂಭೀರ್ ಶಿವಂ ದುಬೆಯನ್ನು ಬೆಂಚ್​ನಲ್ಲಿರಿಸಿ ಸಂಜುಗೆ ಅವಕಾಶ ನೀಡಲು ಸಿದ್ಧರಿದ್ದರು. ಆದರೆ ಅದರ ಲಾಭವನ್ನು ಸಂಜು ಪಡೆಯಲಿಲ್ಲ.

ಇದನ್ನೂ ಓದಿ:RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್​ಪಾಸ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಇನ್ನೆಷ್ಟು ಅವಕಾಶ ಕೊಡಬೇಕು..’ ಗೋಲ್ಡನ್ ಡಕ್ ಆದ ಟೀಂ ಇಂಡಿಯಾ ಆಟಗಾರನ ವಿರುದ್ಧ ಆಕ್ರೋಶ

https://newsfirstlive.com/wp-content/uploads/2024/07/SANJU-SAMSON-1.jpg

Load More