ವೇಗವಾಗಿ ಬಂದು ರಸ್ತೆ ಬದಿ ಕಂದಕಕ್ಕೆ ಗುದ್ದಿ ಪಲ್ಟಿಯಾದ ಟೆಂಪೋ
ಗೋಲಗೇರಿಯ ಗೊಲ್ಲಾಳೇಶ್ವರ ದೇಗುಲಕ್ಕೆ ಹೊರಟಿದ್ದ ಕುಟುಂಬ
ಭೀಕರ ಅಪಘಾತದ ಬಳಿಕ ಟೆಂಪೋ ಚಾಲಕ ಸ್ಥಳದಿಂದ ಪರಾರಿ
ವಿಜಯಪುರ: ಬಸ್ ಓವರ್ ಟೆಕ್ ಮಾಡಲು ಹೋಗಿ ಟೆಂಪೋ ಪಲ್ಟಿಯಾಗಿರೋ ಘಟನೆ ಸಿಂದಗಿ ತಾಲೂಕಿನ ಮಣ್ಣಾಪುರ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ 20 ಜನರಿಗೆ ಗಾಯಗಳಾಗಿದ್ರೆ ಮೂವರ ಸ್ಥಿತಿ ಗಂಭೀರವಾಗಿದೆ.
ಹಿಕ್ಕನಗುತ್ತಿ ಗ್ರಾಮದ ಒಂದು ಇಡೀ ಕುಟುಂಬ ಇಂದು ಟೆಂಪೋದಲ್ಲಿ ಗೋಲಗೇರಿಯ ಗೊಲ್ಲಾಳೇಶ್ವರ ದೇಗುಲಕ್ಕೆ ಹೊರಟಿತ್ತು. ವೇಗವಾಗಿ ಟೆಂಪೋ ಓಡಿಸುತ್ತಿದ್ದ ಚಾಲಕ, ಬಸ್ ಓವರ್ ಟೆಕ್ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಚಂದನಾಗೆ ಮಿಡಿದ ಜನರ ಕಣ್ಣೀರು.. ಅಂಗಾಂಗ ದಾನ ಮಾಡಿದ ಬಾಲಕಿಗೆ ಮೆರವಣಿಗೆ ಮೂಲಕ ಗೌರವ
ಬಸ್ ಅನ್ನು ಓವರ್ ಟೇಕ್ ಮಾಡುವಾಗ ಟೆಂಪೋ ರಸ್ತೆ ಬದಿಯ ಕಂದಕಕ್ಕೆ ಗುದ್ದಿ ಪಲ್ಟಿಯಾಗಿದೆ. ಟೆಂಪೋ ಪಲ್ಟಿಯಿಂದ 20ಕ್ಕೂ ಅಧಿಕ ಜನರಿಗೆ ಗಾಯವಾಗಿದೆ. 6 ಮಕ್ಕಳಿಗೂ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: ಕುದುರೆ ಸವಾರಿ ಮಾಡುವಾಗ ಯಾದವರಾಜ ವಂಶಸ್ಥ ದಾರುಣ ಸಾವು; ಕೊನೇ ಕ್ಷಣದ ವಿಡಿಯೋ ವೈರಲ್!
ಭೀಕರ ಅಪಘಾತದ ಬಳಿಕ ಟೆಂಪೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿಂಧಗಿ ತಾಲೂಕಾಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ಕೆಲವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ