newsfirstkannada.com

×

ಟ್ರಾಫಿಕ್ ಪೊಲೀಸ್ ಡ್ಯಾನ್ಸ್ ನೋಡಿ ಮುತ್ತಿನಂಥ ಮಾತು ಹೇಳಿದ ಆನಂದ್ ಮಹೀಂದ್ರ; ಮನ ಮುಟ್ಟಿದ ವಿಡಿಯೋ!

Share :

Published July 29, 2024 at 3:50pm

Update July 29, 2024 at 3:54pm

    ಡಾನ್ಸ್​ ಮಾಡುತ್ತಲೇ ಟಾಫ್ರಿಕ್ ಕಂಟ್ರೋಲ್ ಮಾಡುವ ಪೊಲೀಸಪ್ಪನ ವಿಡಿಯೋ

    ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ರೆ ತಪ್ಪದೇ ಬೀಳುತ್ತೆ ಸ್ಥಳದಲ್ಲಿಯೇ ಫೈನ್!

    ಈ ಟ್ರಾಫಿಕ್ ಪೊಲೀಸ್ ಡಿಫರೆಂಟ್‌ ಸ್ಟ್ರೈಲ್​ಗೆ ಆನಂದ ಮಹೀಂದ್ರಾ ಫಿದಾ

ಇಂದೋರ್: ಖ್ಯಾತ ಉದ್ಯಮಿ ಆನಂದ ಮಹಿಂದ್ರಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸದಾ ಆ್ಯಕ್ಟಿವ್ ಆಗಿ ಇರುತ್ತಾರೆ. ವಿಶೇಷ ಅನಿಸುವಂತ, ಜನಕ್ಕೆ ಸಂದೇಶ ನೀಡುವಂತ ವಿಡಿಯೋಗಳನ್ನ ಮಾತುಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಈಗ ಮತ್ತೊಮ್ಮೆ ಅಂತಹುದೇ ಒಂದು ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆನಂದ ಮಹಿಂದ್ರಾ ಅವರು ಟ್ರಾಫಿಕ್ ಪೋಲಿಸ್ ಒಬ್ಬ ವಿಭಿನ್ನವಾಗಿ ಕರ್ತವ್ಯ ನಿರ್ವಹಿಸುತ್ತಿರೋದನ್ನ ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ಕುದುರೆ ಸವಾರಿ ಮಾಡುವಾಗ ಯಾದವರಾಜ ವಂಶಸ್ಥ ದಾರುಣ ಸಾವು; ಕೊನೇ ಕ್ಷಣದ ವಿಡಿಯೋ ವೈರಲ್‌!

ಡಾನ್ಸಿಂಗ್ ಟ್ರಾಫಿಕ್ ಪೊಲೀಸ್ ಡಾನ್ಸ್ ವೈಖರಿಗೆ ಜನರು ಫಿದಾ

ಮಧ್ಯಪ್ರದೇಶದ ಇಂದೋರ್​ನಲ್ಲಿ ಟ್ರಾಫಿಕ್ ಪೊಲೀಸ್‌, ತನ್ನ ಕರ್ತವ್ಯವನ್ನು ವಿಭಿನ್ನವಾಗಿ ನಿರ್ವಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟ್ರಾಫಿಕ್ ಕಂಟ್ರೋಲ್ ಕೆಲಸ ಬೋರಾಗದಂತೆ ಡಾನ್ಸ್ ಮಾಡುತ್ತಾ, ವಿಭಿನ್ನ ವೈಖರಿಯಲ್ಲಿ ಟ್ರಾಫಿಕ್ ಸಂಜ್ಞೆಗಳನ್ನು ಮಾಡುತ್ತಾ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾನೆ. ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಾಹನಗಳನ್ನು ತಡೆದು ಫೈನ್ ಹಾಕುವ ಕೆಲಸವನ್ನು ಕೂಡ ಈ ಟ್ರಾಫಿಕ್ ಪೊಲೀಸ್ ಮಾಡುತ್ತಾರೆ.

ಈ ಟ್ರಾಫಿಕ್ ಪೇದೆಯ ಈ ವಿಭಿನ್ನ ಶೈಲಿಯ ಕರ್ತವ್ಯ ನಿರ್ವಹಿಸುವ ವಿಡಿಯೋವನ್ನು ಆನಂದ ಮಹೀಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜಗತ್ತಿನಲ್ಲಿ ಯಾವುದೇ ಕೆಲಸವು ಬೇಸರ ಎನಿಸುವಂತದಲ್ಲ ಅನ್ನೋದನ್ನ ಈ ಪೊಲೀಸ್ ನಿರೂಪಿಸಿದ್ದಾರೆ. ಈ ವಿಡಿಯೋ ಟ್ಯಾಗ್‌ ಮಾಡಿರುವ ಉದ್ಯಮಿ ಆನಂದ ಮಹಿಂದ್ರಾ ಅವರು ನೀವು ಆಯ್ದುಕೊಂಡ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ನಾವು ಯಾವುದೇ ಕೆಲಸದಲ್ಲಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶ್ರದ್ಧೆ, ಆಸಕ್ತಿ ಇರುವುದೇ ಮುಖ್ಯ ಅನ್ನೋ ಮಾತನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಾಫಿಕ್ ಪೊಲೀಸ್ ಡ್ಯಾನ್ಸ್ ನೋಡಿ ಮುತ್ತಿನಂಥ ಮಾತು ಹೇಳಿದ ಆನಂದ್ ಮಹೀಂದ್ರ; ಮನ ಮುಟ್ಟಿದ ವಿಡಿಯೋ!

https://newsfirstlive.com/wp-content/uploads/2024/07/Anand-Mahindra-On-Traffic-Police.jpg

Load More