newsfirstkannada.com

×

ಖಾಸಗಿ ಶಾಲಾ ಬಸ್ ಅಪಘಾತ.. ಸ್ಕೂಲ್‌ಗೆ ಹೊರಟಿದ್ದ 15 ಮಕ್ಕಳು ಆಸ್ಪತ್ರೆಗೆ ದಾಖಲು; ಏನಾಯ್ತು?

Share :

Published July 29, 2024 at 4:25pm

    ವೇಗಿವಾಗಿ ಬಂದು ಕಾರಿ​ಗೆ ಗುದ್ದಿದ ಖಾಸಗಿ ಶಾಲಾ ಬಸ್​ ಚಾಲಕ

    ಬೆಳಗ್ಗೆ ಬಸ್​ನಲ್ಲಿದ್ದ ಶಾಲೆಗೆ ಹೊರಟಿದ್ದ 15 ಮಕ್ಕಳಿಗೆ ಏನಾಯ್ತು?

    ಈ ಮಹಾನಗರಿಯಲ್ಲಿ ಹೆಚ್ಚುತ್ತಿದೆ ಭೀಕರ ಅಪಘಾತಗಳು

ಮುಂಬೈ: ದೇಶದ ವಾಣಿಜ್ಯ ರಾಜಧಾನಿಯಲ್ಲೊಂದು ಭೀಕರ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. 15ವಿದ್ಯಾರ್ಥಿಗಳನ್ನು ಹೊತ್ತುಕೊಂಡು ಹೊರಟಿದ್ದ ಖಾಸಗಿ ಶಾಲಾ ಬಸ್ಸೊಂದು  ಕಾರ್​ಗೆ ಗುದ್ದಿದ ಪರಿಣಾಮ ಬಸ್​ನ ಮುಂಭಾಗ ನಜ್ಜುಗುಜ್ಜಾಗಿದೆ. ಮುಂಬೈನ ಪಿಂಪ್ರಿ-ಚಿಂಚವಾಡ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಂದು ಮಧ್ಯಾಹ್ನ ಸುಮಾರು 12.30ಕ್ಕೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ:ಟ್ರಾಫಿಕ್ ಪೊಲೀಸ್ ಡ್ಯಾನ್ಸ್ ನೋಡಿ ಮುತ್ತಿನಂಥ ಮಾತು ಹೇಳಿದ ಆನಂದ್ ಮಹೀಂದ್ರ; ಮನ ಮುಟ್ಟಿದ ವಿಡಿಯೋ!

ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯ
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಸ್​ನಲ್ಲಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ. ಪೊಲೀಸರ ಹೇಳಿಕೆಯ ಪ್ರಕಾರ ದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಘಟನೆಯಲ್ಲಿ ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಖಾಸಗಿ ಶಾಲಾ ಬಸ್ ಅಪಘಾತ.. ಸ್ಕೂಲ್‌ಗೆ ಹೊರಟಿದ್ದ 15 ಮಕ್ಕಳು ಆಸ್ಪತ್ರೆಗೆ ದಾಖಲು; ಏನಾಯ್ತು?

https://newsfirstlive.com/wp-content/uploads/2024/07/DARSHAN-2-1.jpg

Load More