ಮಾನಸಿಕ ಒತ್ತಡ, ಖರ್ಚು ಎಲ್ಲವೂ ಒಟ್ಟಿಗೆ ಆಗಮಿಸಬಹುದು
ವ್ಯಾಪಾರ, ವ್ಯವಹಾರ ಸಂಬಂಧಗಳು ಕೂಡಿ ಬರುವ ದಿನವಾಗಿದೆ
ಇಂದು ಖಾಸಗಿ ಕೆಲಸ ಮಾಡುವವರಿಗೆ ಹೆಚ್ಚಿನ ಹಣ ಸಿಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3:00 ರಿಂದ 4:30 ರವರೆಗೆ
ಮೇಷ ರಾಶಿ
- ಆರೋಗ್ಯದಲ್ಲಿ ಏರುಪೇರು ಆದರೆ ಗಾಬರಿ ಬೇಡ ಚಿಕಿತ್ಸೆ ಪಡೆಯಿರಿ
- ಅಧಿಕ ಖರ್ಚು, ಕೆಲಸಕ್ಕೆ ಅಡಚಣೆ
- ತುಂಬಾ ಅಗತ್ಯವಾಗಿ ಯೋಜಿಸಿದ್ದ ಕಾರ್ಯಕ್ರಮ ಸ್ಥಗಿತವಾಗಬಹುದು
- ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷಾ ಸಿದ್ಧತೆಗಳಿಗೆ ಅವಕಾಶವಿದ್ದರೂ ಮನಸ್ಸಿರುವುದಿಲ್ಲ
- ಮಾನಸಿಕ ಒತ್ತಡ, ಖರ್ಚು ಎಲ್ಲವೂ ಒಟ್ಟಿಗೆ ಆಗಮಿಸಬಹುದು
- ಇಂದು ಬೇರೆ ಬೇರೆ ಕಿರಿಕಿರಿಗಳಿಂದ ದಿನ ಕಳೆಯಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ವೃಷಭ
- ಈ ದಿನ ಚೆನ್ನಾಗಿದೆ ಆದರೆ ಅನಗತ್ಯ ಕೆಲಸಗಳಿಗೆ ಸಮಯ ವ್ಯರ್ಥ ಮಾಡಬಾರದು
- ಕುಟುಂಬದವರ ಸಂತೋಷ ಮತ್ತು ತೃಪ್ತಿ ನಿಮಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ
- ಮಂಗಳ ಕಾರ್ಯದ ಬಗ್ಗೆ ಚರ್ಚೆ ನಡೆಯಬಹುದು
- ಮನೆಯಲ್ಲಿ ಕಳೆಯುವ ಪ್ರತಿಯೊಂದು ಮೌಲ್ಯಯುತವಾಗಿರುತ್ತದೆ
- ವ್ಯಾಪಾರ, ವ್ಯವಹಾರ ಸಂಬಂಧಗಳು ಕೂಡಿ ಬರುವ ದಿನವಾಗಿದೆ
- ಮಕ್ಕಳು, ವಿದ್ಯಾರ್ಥಿಗಳು ತಮ್ಮ ತಮ್ಮ ಲೋಕದಲ್ಲಿ ವ್ಯವಹರಿಸುತ್ತಾರೆ
- ಮಹಾಲಕ್ಷ್ಮಿಯನ್ನ ಪಾರ್ಥನೆ ಮಾಡಿ
ಮಿಥುನ
- ಖಾಸಗಿ ಕೆಲಸ ಮಾಡುವವರಿಗೆ ಹೆಚ್ಚಿನ ಹಣ ಸಿಗಬಹುದು
- ಬೆಳಗ್ಗೆ ಶುಭ ಸುದ್ದಿ ಕೇಳಬಹುದು
- ಆರೋಗ್ಯದಲ್ಲಿ ತುಂಬಾ ಜಾಗ್ರತೆ ವಹಿಸಿ
- ಅಪೂರ್ಣವಾದ ಕೆಲಸಗಳಿಗೆ ಅವಮಾನ
- ನವವಿವಾಹಿತರಿಗೆ ಪ್ರವಾಸದ ಖುಷಿ ಮನೆಮಾಡಿರುತ್ತದೆ
- ಬೇರೆಯವರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ವ್ಯವಹರಿಸಿ
- ಓಂ ನಮಃ ಶಿವಾಯ ಮಂತ್ರ ಪಠಣೆ ಮಾಡಿ
ಕಟಕ
- ಹಳೆಯ ವ್ಯವಹಾರದ ಬಾಕಿ ಈ ದಿನ ಕೈ ಸೇರಬಹುದು
- ನಿಮ್ಮ ವ್ಯವಹಾರ, ದುಡ್ಡಿನ ವಿಚಾರಗಳನ್ನು ಮನೆಯಲ್ಲಿ ಹೇಳುವುದು ಒಳಿತು
- ನೌಕರಿಯಲ್ಲಿ, ವೃತ್ತಿಯಲ್ಲಿ ಸಮಾಧಾನ ಇರುತ್ತದೆ
- ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆಗಳು, ಜಗಳಗಳು ಆಗಬಹುದು
- ವೃತ್ತಿಪರ ಮಹಿಳೆಯರಿಗೆ ಆರ್ಥಿಕ ನೆರವು ಸಿಗಬಹುದು
- ದಿನಚರಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು
- ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ
ಸಿಂಹ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ
- ಮನೆ, ನಿವೇಶನ ಮಾರುವವರಿಗೆ ಲಾಭವಿದೆ
- ಮನೆಯಲ್ಲಿ, ನಿವೇಶನ ಈ ದಿನ ಖರೀದಿಸಿದರೆ ನಷ್ಟ
- ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲವಾಗಬಹುದು
- ಸರ್ಕಾರದ ಕೆಲವು ನಿಯಮಗಳು, ಕಾನೂನು ಕ್ರಮಗಳು ನಿಮಗೆ ಅಡ್ಡಿಯಾಗಬಹುದು
- ಕುಟುಂಬದವರ ವಿಶ್ವಾಸ ಚೆನ್ನಾಗಿರಬೇಕು, ಇಲ್ಲದಿದ್ದರೆ ವ್ಯವಹಾರ ಸುಗಮವಿಲ್ಲ
- ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಕನ್ಯಾ
- ನೌಕರಿಯ ಅಥವಾ ವೃತ್ತಿಯಲ್ಲಿ ಹೊಸ ಹೊಸ ಆಹ್ವಾನಗಳು ಬರಬಹುದು
- ಮೂಳೆ ನೋವಿನಿಂದ ಬಳಲುತ್ತಿರುವವರಿಗೆ ತೊಂದರೆ ಇದೆ ಎಚ್ಚರಿಕೆ
- ನಿಮ್ಮ ಮೂಲ ಉದ್ದೇಶ ಏನಿದೆಯೋ ಅದನ್ನ ತಲಪುವಿರಿ
- ಹೊಸ ಯೋಜನೆ ಪ್ರಾರಂಭಿಸಲು ಅವಕಾಶವಿದೆ
- ಸ್ವಂತ ಉದ್ದಿಮೆ ಹೊಂದಿರುವವರಿಗೆ ಚೆನ್ನಾಗಿದೆ
- ವೈದ್ಯರಿಗೆ ಹಿನ್ನಡೆ ನಷ್ಟ ಆಗಬಹುದು
- ನವಗ್ರಹರ ಪ್ರಾರ್ಥನೆ ಮಾಡಿ ವಿಶೇಷವಾಗಿ ಮಂಗಳಗ್ರಹ ಆರಾಧನೆ ಮಾಡಿ
ತುಲಾ
- ನಿಮ್ಮ ವೃತ್ತಿಯಲ್ಲಿ ಕಿರಿಕಿರಿಯಾಗುವುದರಿಂದ ಬೇಸರ ಮಾಡಿಕೊಳ್ಳುತ್ತೀರಿ
- ಯೋಗ್ಯರಲ್ಲದವರ ಪರಿಚಯ, ಅವರ ಜೊತೆ ಕೆಲಸ ಮಾಡಬೇಕಾದ ಪ್ರಸಂಗ ಬರಬಹುದು
- ಪೂರ್ವ ಜನ್ಮದ ಸುಕೃತ ನೆನೆದು ಬೇಸರ ಪಡಬಹುದು
- ಧನಾತ್ಮಕ ಚಿಂತನೆಯು ನಿನಗೆ ಯಶಸ್ಸು ನೀಡುತ್ತದೆ
- ನಿಮ್ಮ ವಿದ್ಯೆ, ಬುದ್ಧಿ ಚಾಣಾಕ್ಷತನದಿಂದ ನಿಮಗೆ ಗೆಲುವಿದೆ
- ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಾಣಬಹುದು
- ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ
- ಉದ್ಯೋಗದಲ್ಲಿ ನಿಮ್ಮ ಗುರಿ ಸಾಧಿಸಲು ತುಂಬಾ ಸವಾಲುಗಳು ಎದುರಾಗುತ್ತವೆ
- ವೈವಾಹಿಕ ಜೀವನದಲ್ಲಿ ವ್ಯತ್ಯಯ-ಕಲಹ, ಹೊಂದಾಣಿಕೆ ಬೇಕು
- ಅಹಂಭಾವದ ಕಾರಣದಿಂದಾಗಿ ತುಂಬಾ ಸಮಸ್ಯೆಗಳು ಬರುತ್ತವೆ
- ಹೊಂದಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ ಅನಿವಾರ್ಯ ಇರಬಹುದು
- ಕೋಪ , ಅಸಹನೆ ತೊಂದರೆಗೆ ಅವಕಾಶವಾಗಬಹುದು
- ತಾಯಿಯವರ ಆರೋಗ್ಯದ ಗಮನಿಸಿ
- ಶ್ರೀಸೂಕ್ತ ಮಂತ್ರ ಶ್ರವಣ ಮಾಡಿ
ಧನುಸ್ಸು
- ತೆರೆದ ಮನಸ್ಸಿನಿಂದ ಮಾತನಾಡದೆ ತೊಂದರೆ, ಸಮಸ್ಯೆ
- ರಾತ್ರಿ ಹೊತ್ತಿಗೆ ಮನೆಯಲ್ಲಿ ಜಗಳವಾಗಬಹುದು
- ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತೊಂದರೆಯಾಗಬಹುದು
- ಆಹಾರ, ಔಷಧಗಳೆರಡು ವ್ಯತ್ಯಾಸವಾಗಿ ಆತಂಕವಾಗಬಹುದು
- ಕಷ್ಟಪಟ್ಟು ದುಡಿದು ತಿನ್ನುವವರಿಗೆ ಇಂದು ಒಳಿತಲ್ಲಾ
- ಕಣ್ಣಿನ ವಿಚಾರದಲ್ಲಿ ತೊಂದರೆ, ದೋಷ ಹಾಗೂ ನಷ್ಟ ಕಾಣಬಹುದು
- ದುರ್ಗಾ ಪ್ರಾರ್ಥನೆ ಮಾಡಿ
ಮಕರ
- ದೀರ್ಘಕಾಲದ ಪ್ರೇಮಿಗಳಿಗೆ ಶುಭದಿನ
- ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮವಾದ ದಿನ
- ಮನೆಯಲ್ಲಿ ಮದುವೆ ವಿಚಾರ ಮುನ್ನಡೆಗೆ ಬರಬಹುದು
- ಬೇರೆ ಬೇರೆ ವಿಚಾರದಲ್ಲಿ ಮನೆಯವರನ್ನ ನಿಷ್ಠೂರ ಮಾಡಿಕೊಳ್ಳುತ್ತೀರಿ
- ಸಮಸ್ಯೆ ಬಗೆಹರಿಸುವಲ್ಲಿ ನೀವು ಯಶಸ್ವಿಯಾಗುವಿರಿ
- ಆದರೆ ಮನೆಯಲ್ಲಿ ನಿಮ್ಮ ಮಾತಿಗೆ ಬೇಸರವಾಗಬಹುದು
- ಗಣಪತಿಯನ್ನ ಪ್ರಾರ್ಥನೆ ಮಾಡಿ
ಕುಂಭ
- ಕುಟುಂಬ ಸದಸ್ಯರು ಸಾಮರಸ್ಯದಿಂದ ಇರುವುದಕ್ಕೆ ನೀವೇ ಕಾರಣರಾಗುತ್ತೀರಿ
- ನೀವು ಆಡಿದ ಮಾತುಗಳು ಹಲವರಿಗೆ ಮಾರ್ಗದರ್ಶನ
- ಆಂತರಿಕ ಶತ್ರುಗಳು ನಿಮ್ಮನ್ನು ಅವಮಾನಿಸಲು ಕಾಯುತ್ತಿರುತ್ತಾರೆ
- ನೀವು ಎಷ್ಟೇ ಪ್ರಯತ್ನಿಸಿದರೂ ಶತ್ರುಗಳನ್ನ ಕಡಿಮೆ ಮಾಡಿಕೊಳ್ಳಲು ಕಷ್ಟ
- ತುಂಬಾ ಕೋಪ, ತಾಳ್ಮೆ ಕಳೆದುಕೊಳ್ಳುವುದು ಪ್ರಸಂಗ ಬರಬಹುದು
- ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿ ತೊಂದರೆಯ ಸಂಭವವಿದೆ
- ಇಂದ್ರಾಕ್ಷಿ ದೇವಿಯನ್ನ ಪ್ರಾರ್ಥನೆ ಮಾಡಿ
ಮೀನ
- ಅಪಮಾನಕ್ಕೆ ಉದಾರ ಸ್ವಭಾವ ತೋರಿಸುವ ನಿಮ್ಮನ್ನು ನೋಡಿ ಜನ ಆಶ್ಚರ್ಯ ಪಡುತ್ತಾರೆ
- ಪ್ರಮುಖ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕ ವಿಶೇಷವಾಗಿರುತ್ತದೆ
- ವಿದ್ಯಾರ್ಥಿಗಳು, ಸಹಪಾಠಿ ಮತ್ತು ಶಿಕ್ಷಕರ ನಡುವೆ ಜಗಳ ಬೇಡ ಸಹಾಯ ಮಾಡಿ
- ಪ್ರೇಮಿಗಳಿಗೆ ಶುಭ ದಿನವಾದರೂ ಸಮಸ್ಯೆಗೆ ಸಿಕ್ಕಿಕೊಳ್ಳಬಹುದು
- ಸಾಯಂಕಾಲಕ್ಕೆ ಅನಿರೀಕ್ಷಿತರ ಭೇಟಿಯಿಂದ ಶುಭ ಸೂಚನೆ ಸಿಗಬಹುದು
- ಶ್ರೀರಾಮ ಪರಿವಾರದ ದೇವತೆಗಳನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ