newsfirstkannada.com

×

ಶಿರೂರು ಘಟನೆ ಮಾಸುವ ಮುನ್ನವೇ ಮತ್ತೊಂದು ಭೂಕುಸಿತ.. ಒಂದು ಮಗು ಸೇರಿ 7 ಜನರು ಸಾವು

Share :

Published July 30, 2024 at 8:35am

    ಭಾರೀ ಭೂಕುಸಿತ.. ಸುಮಾರು 7 ಜನರು ಸಾವು, ಸಂಪರ್ಕ ಕಡಿತ

    ವಾಯುಪಡೆಯ 2 ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಚರಣೆ

    ಅಂಕೋಲಾದ ಶಿರೂರಿನಲ್ಲಿ ನಡೆದಂತೆಯೇ ಭಾರೀ ಭೂಕುಸಿತ

ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ಭೂಕುಸಿತ ಸಂಭವಿಸಿದ್ದು, ಸುಮಾರು 7 ಜನರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಜಿಲ್ಲೆಯ ಮೆಪ್ಪಾಡಿಯ ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ಈ ದುರ್ಘಟನೆ ಸಂಭವಿಸಿದೆ. ಭೂಕುಸಿತದ ಪರಿಣಾಮ ಮಣ್ಣಿನಡಿಯಲ್ಲಿ ಹಲವಾರು ಜನರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಒಂದು ಮಗು ಸೇರಿದಂತೆ 7 ಮೃತದೇಹಗಳು ಪತ್ತೆಯಾಗಿವೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಮತ್ತೊಮ್ಮೆ ಶಾಕ್​.. ಬಿಯರ್​ ಬೆಲೆ ಮತ್ತೆ ಏರಿಕೆ ಮಾಡಲು ನಿರ್ಧಾರ

ದುರಾದೃಷ್ಟವಶಾತ್ ಮುಂಡಕ್ಕೈ, ಚೂರಲ್ಮಾಲಕಾ, ಅಟ್ಟಮಾಲ ಮತ್ತು ನೂಲ್ಪಳ ಗ್ರಾಮಗಳು ಮಳೆಯಿಂದಾಗಿ ಭೂಕುಸಿತದಿಂದಾಗಿ ಹಾನಿಗೊಳಗಾಗಿವೆ. ಪರಿಣಾಮ ಸಂಪರ್ಕ ಕೂಡ ಕಡಿತಗೊಂಡಿವೆ.

ಇದನ್ನೂ ಓದಿ: 250 ಅಡಿ ಆಳದ ತೆರೆದ ಬೋರ್​ವೆಲ್​ಗೆ ಬಿದ್ದ 3 ವರ್ಷದ ಮಗು.. ಆರೋಗ್ಯ ಸ್ಥಿತಿ ಗಂಭೀರ

ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಈ ಕುರಿತಾಗಿ ಫೇಸ್​​ಬುಕ್​ನಲ್ಲಿ ಬರೆದುಕೊಂಡಿದ್ದು, ರಕ್ಷಣೆಗಾಗಿ ವಾಯುಪಡೆಯ 2 ಹೆಲಿಕಾಪ್ಟರ್ ವಯನಾಡಿಗೆ ತೆರಳಲಿದೆ ಎಂದು ಬರೆದುಕೊಂಡಿದ್ದಾರೆ. ಭೂಕುಸಿತ ಸಂಬಂಧ ಅನೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿ​​​ದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿರೂರು ಘಟನೆ ಮಾಸುವ ಮುನ್ನವೇ ಮತ್ತೊಂದು ಭೂಕುಸಿತ.. ಒಂದು ಮಗು ಸೇರಿ 7 ಜನರು ಸಾವು

https://newsfirstlive.com/wp-content/uploads/2024/07/wayanad.jpg

Load More