ಸಾಲು ಸಾಲು ಹಿನ್ನಡೆಯ ನಡುವೆಯೂ ಹಾರ್ದಿಕ್ ಶೈನ್
ಕಾರ್ಪೊರೇಟ್ ದುನಿಯಾಗೆ ಹಾರ್ದಿಕ್ ಹೊಸ ಕಿಂಗ್..!
ವಿಶ್ವಕಪ್ ಬಳಿಕ ಆಲ್ರೌಂಡರ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್..!
ವಿಶ್ವಕಪ್ ಗೆದ್ದಿದ್ದೇ ಗೆದ್ದಿದ್ದು ಹಾರ್ದಿಕ್ ಪಾಂಡ್ಯ ಲಕ್ ಚೇಂಜ್ ಆಗಿದೆ. ಪತ್ನಿ ದೂರಾದರು, ನಾಯಕತ್ವ ಕೈ ತಪ್ಪಿತು. ನಿಜ..! ಈ ಹಿನ್ನಡೆಯ ನಡುವೆಯೂ ಹಾರ್ದಿಕ್ ಪಾಂಡ್ಯ ಸಖತ್ ಶೈನ್ ಆಗ್ತಿದ್ದಾರೆ. ಕೋಟಿ ಕೋಟಿ ಹಣವನ್ನ ಹಾರ್ದಿಕ್ ಕಮಾಯ್ ಮಾಡ್ತಿದ್ದಾರೆ.
ಹಾರ್ದಿಕ್ ಪಾಂಡ್ಯ.. ಈ ವರ್ಷದಲ್ಲಿ ಭಾರತೀಯ ಕ್ರಿಕೆಟ್ ವಲಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕ್ರಿಕೆಟರ್. ಪಾಸಿಟಿವೋ.. ನೆಗೆಟಿವೋ.. ಒಂದಲ್ಲ.. ಒಂದು ರೀತಿಯಲ್ಲಿ ಪಾಂಡ್ಯ ಸಖತ್ ಸೌಂಡ್ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನ ಪಟ್ಟ ಏರಿದ್ರಿಂದ ಹಿಡಿದು, ಟೀಮ್ ಇಂಡಿಯಾದ ಟಿ20 ನಾಯಕತ್ವ ತಪ್ಪುವರೆಗೆ ಪಾಂಡ್ಯ ಮಾಡಿದ ಸದ್ದು ಅಷ್ಟಿಷ್ಟಲ್ಲ. ಈ 2024 ಇದ್ಯಲ್ಲ.. ಇದು ಹಾರ್ದಿಕ್ ಜೀವನದ ವಿಚಿತ್ರವಾದ ವರ್ಷ ಅಂದ್ರೂ ತಪ್ಪಾಗಲ್ಲ. ಈ ವರ್ಷದಲ್ಲಿ ಸಕ್ಸಸ್ನ ಸಿಹಿಯನ್ನ ಉಂಡಿದ್ದಾರೆ. ಫೇಲ್ಯೂರ್ನ ಕಹಿಯನ್ನೂ ಅನುಭವಿಸಿದ್ದಾರೆ.
ಇದನ್ನೂ ಓದಿ:ನಾಯಿ ಹೊಟ್ಟೆಗೆ ಜಾಸ್ತಿ ಹಾಕಿದ್ರೆ ಜೈಲಿಗೆ ಹೋಗ್ತೀರಿ ಹುಷಾರ್.. ಮಹಿಳೆಗೆ 2 ತಿಂಗಳ ಜೈಲು ಶಿಕ್ಷೆ ಕೊಟ್ಟ ಕೋರ್ಟ್..!
ಹಿನ್ನಡೆಯ ನಡುವೆಯೂ ಹಾರ್ದಿಕ್ ಶೈನ್
ಈ ವರ್ಷದಲ್ಲಿ ಹಾರ್ದಿಕ್ ಪಾಂಡ್ಯ ಸಾಲು ಸಾಲು ವೈಫಲ್ಯ ಕಂಡಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನಾದ ಬಳಿಕ ಟೀಕೆ, ನಿಂದನೆ ಎದುರಿಸಿದ್ರು. ಆ ಬಳಿಕ ವಿಶ್ವಕಪ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರೂ ಟೀಮ್ ಇಂಡಿಯಾ ನಾಯಕತ್ವ ಕೈ ತಪ್ಪಿತು. ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದು, ಪತ್ನಿ-ಮಗು ಬೇರೆಯಾದ್ರು. ಈ ಎಲ್ಲಾ ಹಿನ್ನಡೆಯ ನಡುವೆಯೂ ಹಾರ್ದಿಕ್ ಪಾಂಡ್ಯ ಶೈನ್ ಆಗ್ತಿದ್ದಾರೆ.
ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!
ಹಾರ್ದಿಕ್ ಹೊಸ ಕಿಂಗ್..!
ಜೀವನದ ಏರುಪೇರಿನ ನಡುವೆಯೂ ಹಾರ್ದಿಕ್ ಪಾಂಡ್ಯ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಗಗನದೆತ್ತರಕ್ಕೆ ಏರ್ತಿದೆ. ಟಿ20 ವಿಶ್ವಕಪ್ ಅಂತ್ಯದ ಬಳಿಕವಂತೂ ಹಾರ್ದಿಕ್ ಪಾಂಡ್ಯಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ಬ್ರ್ಯಾಂಡ್ವ್ಯಾಲ್ಯೂ ಡಬಲ್ ಆಗಿದ್ದು, ಜಾಹೀರಾತುದಾರರು ಹಾರ್ದಿಕ್ನ ಹುಡುಕಿಕೊಂಡು ಬರ್ತಿದ್ದಾರೆ. ಕಾರ್ಪೊರೇಟ್ ದುನಿಯಾದ ಹೊಸ ಕಿಂಗ್ ಆಗುವತ್ತ ಹಾರ್ದಿಕ್ ಹೆಜ್ಜೆ ಹಾಕ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಕ್ರೇಜ್ ಕಂಡು ಎಲ್ರೂ ಶಾಕ್
ವಿಶ್ವಕಪ್ ಬಳಿಕ ಹಾರ್ದಿಕ್ರ ಕ್ರೇಜ್ ಕೂಡ ಫ್ಯಾನ್ಸ್ ವಲಯದಲ್ಲಿ ಹೆಚ್ಚಾಗ್ತಿದೆ. T20 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದ ಬಳಿಕ ಟೀಮ್ ಇಂಡಿಯಾದ ವಿಜಯಯಾತ್ರೆ ನಡೀತು. ಅದಾಗಿ ಕೆಲ ದಿನಗಳ ಬಳಿಕ ಹಾರ್ದಿಕ್, ತಮ್ಮ ತವರು ವಡೋದರಾಗೆ ತೆರಳಿದರು. ಅಲ್ಲಿ ಹಾರ್ದಿಕ್ಗೆ ಅದ್ಧೂರಿ ಸ್ವಾಗತ ಸಿಗ್ತು. ಹಾರ್ದಿಕ್ಗೆ ಗ್ರ್ಯಾಂಡ್ ವೆಲ್ಕಮ್ ಮಾಡಲು ಫ್ಯಾನ್ಸ್ ಕಿಕ್ಕಿರಿದು ನೆರೆದಿದ್ರು. ಫ್ಯಾನ್ಸ್ ಕ್ರೇಜ್ ಕಂಡು ಎಲ್ಲರೂ ದಂಗಾದ್ರು. ಕಾರ್ಪೋರೇಟ್ ದುನಿಯಾ ಹಾರ್ದಿಕ್ ಹಿಂದೆ ಬಿದ್ದಿರೋದಕ್ಕೆ ಇದೂ ಒಂದು ಕಾರಣ.
ಒಂದಾಯ್ತು.. 2ನೇ ಪ್ರಾಡಕ್ಟ್ ಲಾಂಚ್ಗೆ ಸಿದ್ಧತೆ
ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್ ಪಾಂಡ್ಯ ಬ್ಯುಸಿನೆಸ್ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟಿದ್ರು. ಕೆಲ ಆನ್ಲೈನ್ ಶಾಪಿಂಗ್ ಸ್ಟೋರ್ಗಳ ಜೊತೆ ಟೈ ಅಪ್ ಆಗಿ ಪರ್ಫಾಮೆನ್ಸ್ ವೇರ್ ಕಂಪನಿ ಲಾಂಚ್ ಮಾಡಿದ್ರು. ಅದಾಗಿ ಕೆಲವೇ ದಿನಕ್ಕೆ ಮತ್ತೊಂದು ಪ್ರಾಡಕ್ಟ್ ಲಾಂಚ್ ಮಾಡಲು ಹಾರ್ದಿಕ್ ಮುಂದಾಗಿದ್ದಾರೆ. ಅಗಸ್ಟ್ 15ರಂದು ಹಾರ್ದಿಕ್ ಹೊಸ ಬ್ಯುಸಿನೆಸ್ ಬಗ್ಗೆ ತಿಳಿಸಲಿದ್ದಾರಂತೆ.
20 ಬ್ರ್ಯಾಂಡ್ಗಳಿಗೆ ಹಾರ್ದಿಕ್ ಅಂಬಾಸಿಡರ್
ಹಲವು ಪ್ರತಿಷ್ಠಿತ ಕಂಪನಿಗಳು ಪಾಂಡ್ಯ ಬೆನ್ನುಬಿದ್ದಿವೆ. ತಮ್ಮ ಬ್ರ್ಯಾಂಡ್ನ ಪ್ರಮೋಟ್ ಮಾಡುವಂತೆ ಪಾಂಡ್ಯಗೆ ಕೋಟಿ, ಕೋಟಿ ಹಣ ನೀಡಲು ರೆಡಿಯಾಗಿವೆ. ಸದ್ಯಕ್ಕೆ 20 ಬ್ರ್ಯಾಂಡ್ಗಳಿಗೆ ಹಾರ್ದಿಕ್ ಪಾಂಡ್ಯ ಅಂಬಾಸಿಡರ್ ಆಗಿದ್ದಾರೆ. ಈ ಬ್ರ್ಯಾಂಡ್ಗಳ ಒಂದೊಂದು ಶೂಟ್ಗೆ ಬರೋಬ್ಬರಿ 2.5 ಕೋಟಿ ಚಾರ್ಜ್ ಮಾಡ್ತಾರಂತೆ.
ಇದನ್ನೂ ಓದಿ:MS ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ಕೇಬಿಡ್ತು ಗುಡ್ನ್ಯೂಸ್..
ಖ್ಯಾತಿ ಹೆಚ್ಚಾದಂತೆ ಹಾರ್ದಿಕ್ ಪಾಂಡ್ಯ ಗಳಿಕೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ. 2022ರಲ್ಲಿ 34.8 ಮಿಲಿಯನ್ ಇದ್ದ ಬ್ರ್ಯಾಂಡ್ ವ್ಯಾಲ್ಯೂ, 2023ರಲ್ಲಿ 38.4 ಮಿಲಿಯನ್ಗೆ ಏರಿಕೆಯಾಗಿತ್ತು. ಈ ವರ್ಷ ಹಾರ್ದಿಕ್ ಪಾಂಡ್ಯ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. 2024ರ ಅಂತ್ಯಕ್ಕೆ ಹಾರ್ದಿಕ್ ಬ್ರ್ಯಾಂಡ್ವ್ಯಾಲ್ಯೂ 40 ಮಿಲಿಯನ್ನ ಗಡಿ ದಾಟೋದು ಪಕ್ಕಾ ಅನ್ನೋ ಮಾರ್ಕೆಟ್ನ ಲೆಕ್ಕಾಚಾರವಾಗಿದೆ.
ಒಟ್ಟಿನಲ್ಲಿ, ವೈಯಕ್ತಿಕ ಜೀವನ ಹಾಗೂ ಕರಿಯರ್ನಲ್ಲಿ ಹಿನ್ನಡೆ ಎದುರಾಗ್ತಿದ್ರೂ ಗಳಿಕೆಯಲ್ಲಿ ಮಾತ್ರ ಹಾರ್ದಿಕ್ ಮುನ್ನಡೆಯನ್ನೇ ಕಾಯ್ದುಕೊಂಡಿದ್ದಾರೆ. ಈ ಓಟ ನೋಡ್ತಿದ್ರೆ, ಪಾಂಡ್ಯ ಕಾರ್ಪೋರೆಟ್ ದುನಿಯಾದ ಕಿಂಗ್ ಆಗೋ ದಿನ ದೂರವಿಲ್ಲ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್