newsfirstkannada.com

×

ಕೇರಳ ಭೂಕುಸಿತಕ್ಕೆ ಕಾರಣವಾಗಿದ್ದೇ ಶುಂಠಿ ಬೆಳೆನಾ? ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು?

Share :

Published July 30, 2024 at 4:24pm

    ವಯನಾಡು ಭೀಕರ ಭೂಕುಸಿತ ದುರಂತಕ್ಕೆ ಕಾರಣವಾಯ್ತಾ ಶುಂಠಿ?

    ಶುಂಠಿ ಬೆಳೆಗೂ ಭೂಮಿಯ ಫಲವತ್ತತೆಗೂ ಇರೋ ನಂಟೇನು..?

    ಪದೇ ಪದೇ ವಯನಾಡಿನಲ್ಲಾಗುತ್ತಿರುವ ಭೂಕುಸಿತಕ್ಕೆ ಕಾರಣವೇನು?

ವಯನಾಡ್​: ಕೇರಳದ ವಯನಾಡ್ ಜಿಲ್ಲೆ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲಿ ಸಂಭವಿಸಿದ ಭೂಕುಸಿತ ಮಾನವ ಕುಲಕ್ಕೆ ದೊಡ್ಡದೊಂದು ಸಂದೇಶವನ್ನು ರವಾನೆ ಮಾಡಿದೆ. ಭೂಮಿ ಮೇಲೆ ಮಾನವರಿಂದ ನಡೆಯುತ್ತಿರುವ ನಿರಂತರ ಶೋಷಣೆಯ ಪರಿಣಾಮವೇ ಈ ಶೋಚನಿಯ ಪರಿಸ್ಥಿತಿ ಅನ್ನೋ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ. ಕೇರಳದ ವಯನಾಡ್​ನಲ್ಲಿ ಭೂಕುಸಿತುಗಳು ಸರ್ವೇ ಸಾಮಾನ್ಯ ಎನ್ನುವಂತಾಗಿ ಹೋಗಿವೆ. ಅದಕ್ಕೆ ಹಲವು ಕಾರಣಗಳನ್ನು ಕೂಡ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಕಂಡು ಬಂದಿರೋದು ಶುಂಠಿ ಬೆಳೆ.

ಇದನ್ನೂ ಓದಿ: 24 ಗಂಟೆಯಲ್ಲಿ ಮೃತ್ಯು ಮಳೆ.. ವಯನಾಡ್​ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಸುರಿದ ಮಳೆ ಎಷ್ಟು ಗೊತ್ತಾ?

ಶುಂಠಿ ಬೆಳೆಯಿಂದ ಫಲವತ್ತತೆ ಕಳೆದುಕೊಳ್ತಾ ಭೂಮಿ?
ವಯನಾಡು ಭೂಕುಸಿತಕ್ಕೆ ಪ್ರಮುಖ ಕಾರಣ ಅಲ್ಲಿ ಅಪಾರವಾಗಿ ಬೆಳೆಯುತ್ತಿರುವ ಶುಂಠಿ ಬೆಳೆ ಎಂದೇ ಹೇಳಲಾಗುತ್ತಿದೆ. ವಯನಾಡು ಜಿಲ್ಲೆಯಲ್ಲಿ ಕಾಫಿಬೀಜ ಹಾಗೂ ಚಹಾ ಬೆಳೆಗಳ ಜೊತೆ ಜೊತೆಗೆ ಮೆಣಸು ಹಾಗೂ ಶುಂಠಿ ಬೆಳೆಯನ್ನು ಹೆಚ್ಚು ಬೆಳೆಯುತ್ತಾರೆ. ವಿಜ್ಞಾನಿಗಳು ಹೇಳುವ ಪ್ರಕಾರ ಈ ರೀತಿಯ ಭೂಕುಸಿತಕ್ಕೆ ಹೆಚ್ಚಾಗುತ್ತಿರುವ ಶುಂಠಿ ಬೆಳೆ ಕಾರಣ ಎಂದು ಹೇಳುತ್ತಿದ್ದಾರೆ. ಶುಂಠಿ ಬೆಳೆಯಿಂದಾಗಿ ಭೂಮಿ ತನ್ನ ಫಲವತ್ತತೆಯನ್ನು ಹಾಗೂ ಶಕ್ತಿಯನ್ನ ಕಳೆದುಕೊಳ್ಳುತ್ತದೆ. ಭೀಕರ ಮಳೆಗಳನ್ನು ಎದುರಿಸುವ ಸಾಮರ್ಥ್ಯ ನೆಲದಲ್ಲಿ ಉಳಿಯುವುದಿಲ್ಲ. ಹೀಗಾಗಿ ಈ ಕಡೆ ಪದೇ ಪದೇ ಭೂಕುಸಿತ ನಡೆಯುತ್ತಲೇ ಇರುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಯನಾಡ್​ನಲ್ಲಿ ಭೂಕುಸಿತ ಇದೇ ಮೊದಲನೆಲಲ್ಲ
ವಯನಾಡ್​ ಜಿಲ್ಲೆಯಲ್ಲಿ ಭೂಕುಸಿತದ ಸುದ್ದಿಗಳು ಇಂದು ನಿನ್ನೆಯದಲ್ಲ. ಹಲವು ಬಾರಿ ಇಲ್ಲಿಯ ಬೊಜ್ಜು ಭೂಮಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಕುಸಿದು ಬೀಳುತ್ತದೆ. ಈ ಹಿಂದೆ 2019ರಲ್ಲಿ ಮೆಪ್ಪಾಡಿಯಲ್ಲಿ ಭೂ ಕುಸಿತ ಸಂಭವಿಸಿತ್ತು. ಮೆಪ್ಪಾಡಿಯಿಂದ 20 ಕಿಲೋಮೀಟರ್ ದೂರದಲ್ಲಿ ಭೀಕರ ಭೂಕುಸಿತವಾಗಿತ್ತು. ಅಂದು ಕೂಡ ಇದೇ ರೀತಿ ಭೀಕರ ಮಳೆ ಸಂಭವಿಸಿತ್ತು. ಈಗ ಸಂಭವಿಸಿರುವ ಭೂಕುಸಿತಕ್ಕೂ ಮುನ್ನ ಮಳೆಯೂ ತನ್ನ ರೌದ್ರಾವತಾರವನ್ನು ತೋರಿಸಿ ತಣ್ಣಗಾಗಿತ್ತು. ಹೀಗಾಗಿ ಭೂಕುಸಿತಕ್ಕೆ ಪ್ರಮುಖ ಕಾರಣ ಭೀಕರವಾಗಿ ಸುರಿಯುತ್ತಿರುವ ಮಳೆ ಹಾಗೂ ಸಾಮರ್ಥ್ಯ ಕಳೆದುಕೊಳ್ಳುತ್ತಿರುವ ಭೂಮಿ ಎಂದೇ ಹೇಳಲಾಗುತ್ತಿದೆ.

ಅತಿಯಾದ ಮಳೆಯಿಂದಾಗಿ ಪ್ರದೇಶದ ಮಣ್ಣು ಸಡಿಲಗೊಳ್ಳುತ್ತದೆ. ಇತ್ತೀಚೆಗೆ ಅರಣ್ಯ ನಾಶ ಅನ್ನೋದು ಕೂಡ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದಾಗಿಯೂ ಭೂಮಿ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡು ಈ ರೀತಿಯಾದ ಭೂಕುಸಿತಕ್ಕೆ ಕಾರಣವಾಗುತ್ತ್ತದೆ. ಇನ್ನು ಶುಂಠಿ ಬೆಳೆಯೂ ಕೂಡ ಮಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಮಣ್ಣಿನ ಅಡಿಯಲ್ಲಿ ಪೊಳ್ಳು ಭಾಗದಲ್ಲಿ ನೀರು ಹರಿಯೋದು ಹೆಚ್ಚಳಗೊಂಡು ಭೂಕುಸಿತಕ್ಕೆ ಕಾರಣವಾಗುತ್ತದೆ. ಜೊತೆಗೆ ಬೆಟ್ಟ ಗುಡ್ಡಗಳ ಮೇಲೆ ಅವೈಜ್ಞಾನಿಕವಾಗಿ ಕಟ್ಟು ಕಟ್ಟಡಗಳು ಕೂಡ ಇಂತಹ ಭೂಕುಸಿತಕ್ಕೆ ನೇರ ಕಾರಣವಾಗುತ್ತವೆ. ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ಕಲ್ಲು ಗಣಿಗಾರಿಕೆಯೂ ನಡೆಯುತ್ತಿರುವುದರಿಂದಲೂ ಭೂಮಿಯ ನೀರು ಹೀರಿಕೊಳ್ಳುವ ಗುಣ ಕಳೆದುಕೊಳ್ಳುತ್ತದೆ ಇದರಿಂದಾಗಿಯೂ ಭೂಕುಸಿತದಂತಹ ದುರಂತಗಳು ಸಂಭವಿಸುತ್ತಿವೆ.

ಇದನ್ನೂ ಓದಿ :Landslide: 5 ವರ್ಷದ ಹಿಂದೆ ಕೇರಳ ಪುತ್ತುಮಲೆ ದುರಂತ.. ಅದೇ ಜಾಗದಿಂದ 2 ಕಿಮೀ ದೂರದಲ್ಲಿ ಪರ್ವತ ಪ್ರವಾಹ..!

ಸದ್ಯ ವಯನಾಡಿನ ಮೇಲೆ ವರುಣ ಅಕ್ಷರಶಃ ಮರಣ ಶಾಸನವನ್ನು ಬರೆದಿಟ್ಟು ಹೋಗಿದ್ದಾನೆ. ಬಂಡೆಗಳು ಉರುಳಿ ಊರಿಗೆ ಊರೇ ಸ್ಮಶಾನವಾಗಿ ಹೋಗಿದೆ. ವಯನಾಡು ಸೇರಿ ಮೆಪ್ಪಾಡಿ, ಕೊಯಿಕೋಡ್ ಸೇರಿ ಹಲವೆಡೆ ಭೂಮಿ ಕುಸಿದಿದ್ದು. ಮನುಷ್ಯನ ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆರುತ್ತಿದ್ದಾನೆ. ಪ್ರಕೃತಿಯನ್ನು ನಾವು ಕಾಯ್ದಷ್ಟು ಪ್ರಕೃತಿ ನಮ್ಮನ್ನು ಕಾಯುತ್ತಾಳೆ ಅನ್ನೋ ಮಾತು ವಯನಾಡು ಭೂಕುಸಿತದಂತಹ ದುರಂತಗಳು ಪ್ರತಿ ಬಾರಿ ಸತ್ಯ ಮಾಡಿ ತೋರಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳ ಭೂಕುಸಿತಕ್ಕೆ ಕಾರಣವಾಗಿದ್ದೇ ಶುಂಠಿ ಬೆಳೆನಾ? ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು?

https://newsfirstlive.com/wp-content/uploads/2024/07/wayanadu-landslide-ginger-crop.jpg

Load More