ಡೆಂಗ್ಯೂ ಹರಡುತ್ತಾ? ಈ ಪ್ರಕರಣ ಹೆಚ್ಚಾಗಲು ಕಾರಣವೇನು?
ಮಣಿಪಾಲ್ ಆಸ್ಪತ್ರೆಯ ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥರ ವಿಶೇಷ ಸಂದರ್ಶನ
ಮಕ್ಕಳಲ್ಲಿ ಕಾಣಿಸಿಕೊಳ್ಳುವ ವೈರಲ್ ಫೀವರ್ ಬಗ್ಗೆ ಡಾಕ್ಟರ್ ಭಾಸ್ಕರ್ ಶೆಣೈ ಏನು ಹೇಳಿದ್ದಾರೆ ಗೊತ್ತಾ?
ಮಳೆಗಾಲದ ಸಮಯದಲ್ಲಿ ವೈರಲ್ ಫೀವರ್ಗಳು ಹೆಚ್ಚಾಗುತ್ತಿವೆ. ಮಕ್ಕಳಲ್ಲಿ ಈ ಪ್ರಕರಣಗಳು ಜಾಸ್ತಿಯಾಗಿ ಕಂಡುಬರುತ್ತಿವೆ. ಅದರ ಜೊತೆಗೆ ಡೆಂಗ್ಯೂ ಪ್ರಕರಣಗಳು ಅಲ್ಲಲ್ಲಿ ಕಾಣಿಸುತ್ತಿವೆ. ಮಕ್ಕಳಿಗೂ ಡೆಂಗ್ಯೂ ಹರಡುತ್ತಿದ್ದು, ಈ ಕುರಿತಾಗಿ ನ್ಯೂಸ್ಫಸ್ಟ್ ಕನ್ನಡ ಚಾನೆಲ್ ಮೂಲಕ ಹಿರಿಯ ಪತ್ರಕರ್ತೆಯಾದ ಅರ್ಚನಾ ರವಿಕುಮಾರ್ರವರು ಮಣಿಪಾಲ್ ಆಸ್ಪತ್ರೆಯ ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಭಾಸ್ಕರ್ ಶೆಣೈ ಅವರನ್ನು ಸಂದರ್ಶನ ಮಾಡಿದ್ದಾರೆ. ಪೋಷಕರಿಗೆ ಮುನ್ನಚ್ಚರಿಕೆ ಕ್ರಮವನ್ನು ಮತ್ತು ವೈರಲ್ ಫೀವರ್, ಡೆಂಗ್ಯೂ ಪ್ರಕರಣದ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಿದ್ದಾರೆ.
ಜ್ವರ, ನೆಗಡಿ ಸಾಮಾನ್ಯವಾಗಿ ಬಿಟ್ಟಿದೆ.. ಈ ಬಗ್ಗೆ ಡಾಕ್ಟರ್ ಏನು ಹೇಳುತ್ತೀರಾ?
ಮಕ್ಕಳು ಕಾಯಿಲೆ ಬೀಳುವುದು ಈಗ ಜಾಸ್ತಿಯಾಗಿದೆ. ಅದಕ್ಕೆ ಕಾರಣವೆಂದರೆ ವೈರಸ್ಗಳು ಜಾಸ್ತಿಯಾಗಿವೆ. ಅವುಗಳ ಬೆಳವಣಿಗೆ ಹೆಚ್ಚಾಗುತ್ತಿವೆ. ವಾತಾವರಣದಲ್ಲಿ ವೈರಸ್ಗಳು ಜಾಸ್ತಿ ಹರಡುತ್ತಿವೆ. ಮತ್ತೊಂದು ಕಾರಣವೆಂದರೆ ಮಕ್ಕಳು ಶಾಲೆಗೆ ಹೋಗ್ತಾರೆ. ತರಗತಿಯಲ್ಲಿ ಪಕ್ಕಪಕ್ಕ ಕುಳಿತಿರುವ ಕಾರಣ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಅವ್ರು ಆ ವೈರಸ್ ತೆಗೆದುಕೊಂಡು ಮನೆಗೆ ಬರ್ತಾರೆ.
ಇದನ್ನೂ ಓದಿ: Dr Bhaskar Shenoy: ದಿನಕ್ಕೆ ಎಷ್ಟು ಡೆಂಗ್ಯೂ ಕೇಸ್ ಬರುತ್ತೆ? ಇದರ ಲಕ್ಷಣಗಳ ಬಗ್ಗೆ ವೈದ್ಯರು ಹೇಳೊದೇನು?
ಈ ವರ್ಷ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿವೆ?
ಇಲ್ಲ. ಪ್ರತಿ ವರ್ಷ ಮಳೆಯ ಸೀಸನ್ನಲ್ಲಿ ಜಾಸ್ತಿ ಇರುತ್ತೆ. ಜೂನ್ ಕೊನೆ, ಜುಲೈ ಫಸ್ಟ್ ವೀಕ್ನಿಂದ ಜಾಸ್ತಿನೇ ಇರುತ್ತೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತನಕ ಇರುತ್ತೆ. ಅಕ್ಟೋಬರ್ ನಂತರ ಸ್ಕೂಲ್ ಕ್ಲೋಸ್ ಆಗುತ್ತೆ. ಈ ಸಮಯದಲ್ಲಿ ಕಡಿಮೆಯಾಗುತ್ತೆ. ಈ ಮೂರು ತಿಂಗಳು ಜಾಸ್ತಿನೇ. ಇದು ಈ ವರ್ಷದ ಅನುಭವ ಅಷ್ಟೇ ಅಲ್ಲ. ಪ್ರತಿ ವರ್ಷ ಈ ಅನುಭವ ಇದ್ದೇ ಇರುತ್ತೆ.
ಡೆಂಗ್ಯೂ ಪ್ರಕರಣಗಳು ಜಾಸ್ತಿಯಾಗಿವೆ?
ಮೊದಲ ಮಳೆ ಬಂದ ತಕ್ಷಣ ಡೆಂಗ್ಯೂ ಜಾಸ್ತಿಯಾಗುತ್ತೆ. ಡೆಂಗ್ಯೂ ಯಾವುದರಿಂದ ಪ್ರಾರಂಭವಾಗುತ್ತೆ ಎಂದು ನೋಡಬೇಕು. ಒಂದು ಸೊಳ್ಳೆಯಿಂದ ಶುರುವಾಗುತ್ತೆ. ಈ ಸೊಳ್ಳೆಗಳು ಶುದ್ಧ ನೀರಿನಲ್ಲಿ ಬೆಳೆಯುತ್ತವೆ. ಇದು ಹಗಲು ಹೊತ್ತು ಕಚ್ಚುವ ಸೊಳ್ಳೆಗಳು. ಸಾಮಾನ್ಯವಾಗಿ ತೆಂಗಿನ ಚಿಪ್ಪು, ಬಾಟಲಿ ಇದರ ಮೇಲೆ ನೀರು ನಿಲ್ಲುತ್ತವೆ. ಅದರ ಮೇಲೆ ಸೊಳ್ಳೆ ಮೊಟ್ಟೆ ಇಟ್ಟು ಮರಿ ಮಾಡುತ್ತವೆ.
ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಮಳೆಯ ಆರ್ಭಟ.. ಈ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ದಿನಕ್ಕೆ ಎಷ್ಟು ಕೇಸ್ ಬರುತ್ತದೆ?
ಸಾಮಾನ್ಯವಾಗಿ ಈ ಸೀಸನ್ ಶುರುವಾದ ಮೇಲೆ ಪ್ರತಿ ದಿನ 25 ರಿಂದ 30 ಡೆಂಗ್ಯೂ ಕೇಸ್ ನೋಡ್ತ್ತೇನೆ. ಕೆಲವೊಮ್ಮೆ ಜಾಸ್ತಿ ಇರುತ್ತೆ, ಕೆಲವೊಮ್ಮೆ ಕಡಿಮೆ ಇರುತ್ತೆ. ಇದರಲ್ಲಿ 4 ರಿಂದ 5 ಪ್ರತಿಶತ ಕೇಸ್ ಅಡ್ಮಿಟ್ ಆಗುತ್ತಾರೆ.
ಡೆಂಗ್ಯೂ ಲಕ್ಷಣಗಳು?
ಮೊದಲಿನ 4-5 ದಿನ ಜ್ವರ ಬರುತ್ತೆ. ಜ್ವರ ಬರುವ ಮೊದಲು ಮಕ್ಕಳು ಚೆನ್ನಾಗಿ ಇರುತ್ತಾರೆ. ಏಕಾಏಕಿ ಜ್ವರ ಬರುತ್ತದೆ. ಇದು ನಾಮರ್ಲ್ ಜ್ವರ ಅಲ್ಲ. ಇದನ್ನು ಬ್ರೇಕಿಂಗ್ ಬೋನ್ ಫೀವರ್ ಎನ್ನುತ್ತಾರೆ. ಬೆನ್ನು ಮೂಳೆ ಕೂಡ ಜ್ವರದಲ್ಲಿ ನೋವಾಗುತ್ತೆ. ಜ್ವರ 103, 104 ಹೋಗುತ್ತೆ, ಚಳಿಯಿಂದ ನಡುಗುತ್ತಾರೆ, ತಲೆನೋವು ಬರುತ್ತೆ, ಮೈ-ಕೈ ನೋವು, ಕೆಲವು ಮಕ್ಕಳಿಗೆ ಕಣ್ಣು ಕೆಂಪಾಗಬಹುದು. ಕಣ್ಣಿನ ಹಿಂಭಾಗ ನೋವಾಗುತ್ತದೆ (ರೆಟ್ರೋ ಆರ್ಬಿಟಲ್ ಪೇನ್). ಇದು ಡೆಂಗ್ಯೂ ಪ್ರಕರಣದಲ್ಲಿ ಜಾಸ್ತಿ ಇರುತ್ತದೆ.
ಇದನ್ನೂ ಓದಿ: ಸಾವಿನ ಸಂಖ್ಯೆ 143ಕ್ಕೆ ಏರಿಕೆ; ಕೇರಳ ಮಹಾ ದುರಂತದ ನೋವು ಮತ್ತಷ್ಟು ಕಾಡುವ ಆತಂಕ..
ಡೆಂಗ್ಯೂ ಜ್ವರ ಬಂದ್ರೆ 5 ದಿನ ಇರುತ್ತದೆ. ಏನೇ ಮೆಡಿಸಿನ್ ಕೊಟ್ರು ಅಷ್ಟು ಬೇಗ ಬಗ್ಗಲ್ಲ. ಇದು ಡೆಂಗ್ಯೂ ಮೊದಲನೇ ಲಕ್ಷಣ. ಕೆಲವು ಮಕ್ಕಳಿಗೆ ವಾಂತಿಯಾಗಬಹುದು, ಸುಸ್ತು ಆಗಬಹುದು, ಜ್ವರ ಹೋದ ಮೇಲೆ ಚೇತರಿಸಿಕೊಳ್ಳುತ್ತಾರೆ.
ಜ್ವರ ಬಂದಾಗ ಎಷ್ಟು ದಿನ ಒಳಗಾಗಿ ಡಾಕ್ಟರ್ ಭೇಟಿ ಮಾಡಬೇಕು?
ಸಾಮಾನ್ಯವಾಗಿ ಮಕ್ಕಳು ತುಂಬಾ ಜ್ವರದಿಂದ ನಡುಗುತ್ತಿರುವಾಗ ಯಾವ ಮಕ್ಕಳಿಗೂ ಸುಮ್ಮನೆ ಇರೋಕೆ ಆಗಲ್ಲ. ಒಂದನೇ ದಿನವೇ ಡಾಕ್ಟರ್ ಹತ್ರ ಬರುತ್ತಾರೆ. ಮೊದಲ 3-4 ದಿನ ಏನು ಮಾಡೋಕೆ ಆಗಲ್ಲ. ಜ್ವರಕ್ಕೆ ಔಷಧಿಯನ್ನು ಮಾತ್ರ ಕೊಡಬೇಕು. ಅದರಲ್ಲೂ ಪ್ಯಾರಾಸಿಟಮಾಲ್ ಮಾತ್ರೆ ಕೊಡಬೇಕು. ಉದಾಹರಣೆಗೆ ಮೆಫೆನೆಮಿಕ್ ಆ್ಯಸಿಡ್ ಅಂತ ಇರುತ್ತೆ, ಇಬುಪ್ರೊಪೇನ್ ಅಂತ ಇರುತ್ತೆ ಇಂಥಾ ಔಷಧಿ ಕೊಡಬಾರದು. ಜ್ವರ ಬಂದಾಗ ಕೂಡಲೇ ಮಕ್ಕಳನ್ನು ವೈದರ ಬಳಿ ಕರೆದುಕೊಂಡು ಬರಬೇಕಾಗಿಲ್ಲ. 1-2 ದಿನಕ್ಕಾದರೂ ತೊಂದರೆ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ