newsfirstkannada.com

×

ಪೊಲೀಸ್ ಇಲಾಖೆಯಲ್ಲಿ ಸಲಿಂಗಕಾಮಿ ಇದ್ದಾರಾ? ACP ಚಂದನ್ ವಿರುದ್ಧ ಪ್ರತಾಪ್ ಸಿಂಹ ವೀರಾವೇಶ

Share :

Published July 31, 2024 at 1:59pm

    ಪುನೀತ್ ಕೆರೆಹಳ್ಳಿ ಅವರನ್ನು ನಗ್ನ ಮಾಡಿ ACP ಹಲ್ಲೆ ಮಾಡಿದ್ದಾರೆ

    ಪುನೀತ್ ಕೆರೆಹಳ್ಳಿ ಬಟ್ಟೆ ಯಾಕೆ ಬಿಚ್ಚಿಸಬೇಕಿತ್ತು ಎಂದ ಪ್ರತಾಪ್ ಸಿಂಹ

    ಅಂದು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ನಿಜಕ್ಕೂ ನಡೆದಿದ್ದೇನು?

ಬೆಂಗಳೂರು ರೈಲು ನಿಲ್ದಾಣಕ್ಕೆ ರಾಜಸ್ಥಾನದಿಂದ ಸಾಗಿಸಲಾದ ಟನ್‌ಗಟ್ಟಲೇ ಮಾಂಸದ ಪ್ರಕರಣಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಎಂಟ್ರಿ ಕೊಟ್ಟಿದ್ದಾರೆ. ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರ ಬಂಧನ, ಬಿಡುಗಡೆ ವಿರೋಧಿಸಿ ACP ಚಂದನ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಪ್ರತಾಪ್ ಸಿಂಹ ಅವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಇಂದು ಬೆಳಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಪುನೀತ್ ಕೆರೆಹಳ್ಳಿ ಅವರನ್ನು ಬೆತ್ತಲುಗೊಳಿಸಿ ಹಿಂಸೆ ಕೊಡಲಾಗಿದೆ. ಹೀಗಾಗಿ ಎಸಿಪಿ ಚಂದನ್ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ; ಪುನೀತ್​​ ಕೆರೆಹಳ್ಳಿ ತಂಡದಿಂದ ದಾಳಿ; ಮುಂದೇನಾಯ್ತು? 

ಪೊಲೀಸ್ ಠಾಣೆಗೆ ಪ್ರತಾಪ್ ಸಿಂಹ ಹಾಗೂ ಬೆಂಬಲಿಗರು ಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದರು. ಕಾರ್ಯಕರ್ತರನ್ನು ಬಸ್ ಹತ್ತಿಸಿ ತಳ್ಳಿದ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಮತ್ತೆ ಠಾಣೆಗೆ ಕರೆತಂದ ಘಟನೆಯೂ ನಡೆಯಿತು. ಠಾಣೆ ಹೊರಗೆ ನಿಂತು ಕೇಂದ್ರ ವಿಭಾಗ ಡಿಸಿಪಿ ಜೊತೆ ಕೆಲ ಕಾಲ ಪ್ರತಾಪ್ ಸಿಂಹ್ ಅವರು ಮಾತುಕತೆ ನಡೆಸಿದರು.

ಬಸವೇಶ್ವರನಗರ ಪೊಲೀಸ್ ಠಾಣೆ ಮುಂದೆ ಹಂಗಾಮ ನಡೆದ ಮೇಲೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಕಳೆದ 26ನೇ ತಾರೀಖು ಅಕ್ರಮ ಮಾಂಸ ಬರ್ತಿದೆ ಅಂತ ಪುನೀತ್ ಕೆರೆಹಳ್ಳಿ ಹೋಗಿದ್ದಾರೆ. ಪೊಲೀಸರು ಆರೋಗ್ಯ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಆಗ ಪುನೀತ್ ಕೆರೆಹಳ್ಳಿ ಮಾಂಸ ತಪಾಸಣೆ ಮಾಡಬೇಕು ಅಂದ್ರು. ಆಗ ಮಾಂಸದ ವ್ಯಾಪಾರಿ ಅಬ್ದುಲ್ ರಜಾಕ್ ಆಕ್ರಮಣಕಾರಿಯಾಗಿ ಮಾತನಾಡಿದ್ದಾರೆ. ಪುನೀತ್ ಕೆರೆಹಳ್ಳಿ ಮೇಲೆ ಆಗ ಕೇಸ್ ದಾಖಲು ಮಾಡಿದ್ರು.

ಇದನ್ನೂ ಓದಿ: ಬೆಂಗಳೂರಲ್ಲಿ ನಿಜವಾಗ್ಲೂ ನಾಯಿ ಮಾಂಸ ಮಾರಾಟ ಆಗ್ತಿದ್ಯಾ? ಗೃಹ ಸಚಿವ ಪರಮೇಶ್ವರ್​​ ಏನಂದ್ರು? 

ಎಸಿಪಿ ಚಂದನ್ ಅವರು ಪುನೀತ್ ಕೆರೆಹಳ್ಳಿ ಅವರನ್ನು ನಗ್ನ ಮಾಡಿ ಹಲ್ಲೆ ಮಾಡಿದ್ದಾರೆ. ಎಸಿಪಿ ಚಂದನ್ ಮಾಡಿದ್ದು ಅಂತ ಪುನೀತ್ ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಏನಾದ್ರೂ ಸಲಿಂಗಕಾಮಿ ಇದಾರಾ!? ಯಾಕೆ ಪುನೀತ್ ಕೆರೆಹಳ್ಳಿ ಬಟ್ಟೆ ಬಿಚ್ಚಿಸಬೇಕಿತ್ತು ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಸ್ಥಳೀಯ ಡಿಸಿಪಿ ಇಲ್ಲದ ಕಾರಣ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರಿಗೆ ದೂರು ನೀಡಿದ್ದೇವೆ. ಅಬ್ದುಲ್ ರಜಾಕ್ ಮೇಲೆ ಕೇಸ್ ಹಾಕಬೇಕು. ಹಾಗೂ ಎಸಿಪಿ ಚಂದನ್ ವಿರುದ್ದವೂ ಕ್ರಮ ಆಗಬೇಕು‌ ಅಂತ ದೂರು ನೀಡಿದ್ದಾರೆ.

ಪೊಲೀಸ್‌ ಕಮಿಷನರ್‌ಗೆ ದೂರು ಸಲ್ಲಿಕೆ
ಇದಾದ ಬಳಿಕ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಗೂ ಭೇಟಿ ನೀಡಿದ್ದರು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಈ ದೌರ್ಜನ್ಯವನ್ನ ಖಂಡಿಸಿ ಎಸಿಪಿ ಅವರನ್ನ ವಿಚಾರಣೆ ಮಾಡಬೇಕು ಅಂತಾ ಕೇಳಿಕೊಂಡಿದ್ದೇವೆ. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ರಿಗೆ ದೂರು ಕೊಟ್ಟ ವೇಳೆ ಇದು ಎಸಿಪಿ ವಿರುದ್ಧ ಆಗಿರೋದ್ರಿಂದ ಹಿರಿಯ ಅಧಿಕಾರಿಗಳಿಗೆ ದೂರು ಕೊಡುವಂತೆ ಸೂಚಿಸಿದರು. ಹೀಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಬಂದು ದೂರು ಕೊಟ್ಟಿದ್ದೇವೆೆ. ನಮ್ಮ ದೂರಿನ ಪ್ರತಿಯನ್ನ ಸ್ವೀಕಾರ ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸ್ ಇಲಾಖೆಯಲ್ಲಿ ಸಲಿಂಗಕಾಮಿ ಇದ್ದಾರಾ? ACP ಚಂದನ್ ವಿರುದ್ಧ ಪ್ರತಾಪ್ ಸಿಂಹ ವೀರಾವೇಶ

https://newsfirstlive.com/wp-content/uploads/2024/07/Acp-chandan-Pratap-Simha.jpg

Load More