newsfirstkannada.com

ಹೊಸ ಸೆನ್ಸೇಷನ್ ಸೃಷ್ಟಿಸಿದ 51 ವರ್ಷದ ಟರ್ಕಿಶ್ ಶೂಟರ್; ಒಲಿಂಪಿಕ್ಸ್‌ನಲ್ಲಿ ಇವರ ದಾಖಲೆ ಏನು?

Share :

Published August 1, 2024 at 1:16pm

Update August 1, 2024 at 1:17pm

    ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಯೂಸುಫ್

    51ರ ಹರೆಯದ ಈ ಗುರಿಕಾರ ಮಾಡಿದ ಸಾಹಸ ಎಂಥಹದು ಗೊತ್ತಾ?

    ಸೋಶಿಯಲ್ ಮಿಡಿಯಾದಲ್ಲಿ ಯೂಸುಫ್​ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರ

ಪ್ಯಾರಿಸ್: ವಯಸ್ಸು ಕೇವಲ ಒಂದು ಅಂಕಿಯಷ್ಟೇ, ಸಾಧನೆಯ ಪಥದಲ್ಲಿ ಸಾಗುವ ಯಾರಿಗೂ ಕೂಡ ವಯಸ್ಸು ಅನ್ನೋದು ಅಡ್ಡಿ ಬರೋದಿಲ್ಲ. ಅದಕ್ಕೆ ದೊಡ್ಡ ಸಾಕ್ಷಿಯಾಗಿ ಈಗಾಗಲೇ ಜಗತ್ತಿನಲ್ಲಿ ಹಲವು ಜನರು ನಿಂತಿದ್ದಾರೆ. ಅವರ ಸಾಲಿಗೆ ಸೇರುತ್ತಾರೆ ಟರ್ಕಿಶ್​ನ ಈ ಶೂಟರ್ ಯೂಸುಫ್​ ಡಿಕೆಕ್​.

ಇದನ್ನೂ ಓದಿ: ಇಂಟರ್’ನೆಟ್’ನಲ್ಲಿ ಅತಿಹೆಚ್ಚು ಸರ್ಚ್‌ಗೆ ಒಳಗಾದ ಮನು ಭಾಕರ್​​ ಜಾತಿ; ಇದೆಂಥಾ ಮನಸ್ಥಿತಿ! 

ಪ್ಯಾರಿಸ್​ನಲ್ಲಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಹಲವರು ಚಿನ್ನ ಗೆದ್ದಿದ್ದಾರೆ, ಇನ್ನೂ ಹಲವರು ಬೆಳ್ಳಿ ಗೆದ್ದಿದ್ದಾರೆ, ಕೆಲವರು ಕಂಚು, ಇನ್ನೂ ಕೆಲವರು ಪಟ್ಟ ಪ್ರಯತ್ನಕ್ಕೆ ಗೆಲುವು ಸಿಗದೆ ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ. ಪದಕ ಗೆದ್ದವರೆಲ್ಲಾ ಸುದ್ದಿಯಾಗಿದ್ದಾರೆ. ಆದ್ರೆ ಈ ಟರ್ಕೀಶ್ ಶೂಟರ್ ಯೂಸುಫ್ ಡಿಕೆಕ್​ ಮಾತ್ರ ಇಂಟರ್​​ನೆಟ್​ನಲ್ಲಿ ಹಲ್​ಚಲ್​ ಎಬ್ಬಿಸಿದ್ದಾನೆ. ಅದಕ್ಕೆ ಕಾರಣ ಅವನ ವಯಸ್ಸು ಮತ್ತು ಅಖಾಡದಲ್ಲಿ ಗುರಿಯಿಟ್ಟ ರೀತಿ.

ಇದನ್ನೂ ಓದಿ:ಹಾರ್ದಿಕ್​ ಪಾಂಡ್ಯಗೆ ಬಿಗ್ ಶಾಕ್‌.. ಡ್ರೆಸ್ಸಿಂಗ್​ ರೂಮ್‌ನಲ್ಲೇ ಕೋಚ್‌ ಗಂಭೀರ್​​ ವಾರ್ನಿಂಗ್‌; ಹೇಳಿದ್ದೇನು?

ಫ್ರಿಲ್ಸ್ ಗೀಯರ್ ಸಹಾಯವಿಲ್ಲದೇ ಗುರಿಯಿಟ್ಟ ಗುರಿಕಾರ

51 ವರ್ಷದ ಯೂಸುಫ್ 10 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದ್ರೆ ಸಾಧಾರಣವಾಗಿ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಫ್ರಿಲ್ಸ್ ಗೀಯರ್ ಅನ್ನು ಉಪಯೋಗಿಸಿದ್ದಾರೆ. ಆದ್ರೆ ಈ ಗುರಿಕಾರ ಮಾತ್ರ ಅಂತಹ ಯಾವ ಸೌಲಭ್ಯಗಳನ್ನು ಬಳಸದೇ ಕಣ್ಣಿಗೊಂದು ಗ್ಲಾಸ್ ಹಾಕಿಕೊಂಡು ನೇರವಾಗಿ ಹಕ್ಕಿಯ ಕಣ್ಣಿಗೆ ಗುರಿಯಿಟ್ಟು ಹೊಡೆದ ಅರ್ಜುನನಂತೆ ತನ್ನ ಟಾರ್ಗೆಟ್​ಗೆ ಗುರಿಯಿಟ್ಟು ಬೆಳ್ಳಿ ಪದಕ ಗೆದ್ದುಕೊಂಡಿದ್ದಾನೆ. ಇದು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಒಂದು ಇತಿಹಾಸವನ್ನೇ ಬೆರೆದಿದೆ. ಯಾವೊಬ್ಬ ಸ್ಪರ್ಧಿಯೂ ಯೂಸುಫ್​ ರೀತಿಯ ಸಾಹಸಕ್ಕೆ ಕೈ ಹಾಕಿಲ್ಲ. ಯಾವೊಬ್ಬ ಸ್ಪರ್ಧಿಯೂ ಬಗೆಯ ಸ್ಪರ್ಧೆ ಕೊಟ್ಟಿಲ್ಲ. ಬರಿಗೈಯಲ್ಲಿ ಪಿಸ್ತೂಲು ಹಿಡಿದು ನೇರ ಗುರಿಯತ್ತ ನುಗ್ಗಿದೆ ಯೂಸುಫ್​ನ ಪಿಸ್ತೂಲಿನ ಗುರಿ. ಯೂಸುಫ್​ನ ಈ ಸಾಧನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಗುರಿ ಅಂದ್ರೆ ಇದು, ಸ್ಪರ್ಧೆ ಅಂದ್ರೆ ಇವನು ಅನ್ನೋ ಮಟ್ಟಕ್ಕೆ ಯೂಸುಫ್​ನನ್ನು ಹಾಡಿ ಹೊಗಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಸೆನ್ಸೇಷನ್ ಸೃಷ್ಟಿಸಿದ 51 ವರ್ಷದ ಟರ್ಕಿಶ್ ಶೂಟರ್; ಒಲಿಂಪಿಕ್ಸ್‌ನಲ್ಲಿ ಇವರ ದಾಖಲೆ ಏನು?

https://newsfirstlive.com/wp-content/uploads/2024/08/Turkish-shooter-Dikec-Yusuf.jpg

Load More