ನಿಮ್ಮ ಮೊಂಡು ಸ್ವಭಾವವನ್ನ ಪರಿವರ್ತಿಸಿಕೊಳ್ಳಲು ಸಕಾಲ, ಪ್ರಯತ್ನ ಬೇಕು
ನೀವು ಎಷ್ಟು ನಯವಾಗಿರುತ್ತಿರೋ ಅಷ್ಟು ಗೌರವ ಇಂದು ನಿಮ್ಮದಾಗುತ್ತದೆ
ಮಹಿಳೆಯರ ಸೌಂದರ್ಯವರ್ಧಕ ವಸ್ತು ಖರೀದಿಯಲ್ಲಿ ಆಸಕ್ತಿ ತೋರಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಆರಿದ್ರಾ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು
- ಬೇಕಾದವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡುತ್ತೀರಿ
- ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಲು ಪ್ರಯತ್ನಿಸಿ ವಿಫಲರಾಗುತ್ತೀರಿ
- ಇಷ್ಟಾರ್ಥಗಳು ಈಡೇರುತ್ತವೆ ದುರಾಸೆ ತಪ್ಪಿದ್ದಲ್ಲ
- ಹಳೆಯ ರೋಗಗಳಿಂದ ಮುಕ್ತಿ ಸಿಗಬಹುದು
- ಈ ದಿನ ಭಾವನೆಗಳನ್ನು ನಿಯಂತ್ರಿಸಿ
- ಚಂಡಿಕೇಶ್ವರನನ್ನು ಪ್ರಾರ್ಥಿಸಿ
ವೃಷಭ
- ಉದ್ಯೋಗ ಹುಡುಕುತ್ತಿರುವವರಿಗೆ ಅನುಕೂಲವಿದೆ
- ಶತ್ರುಗಳ ಕಾಟ ಕಾಡಬಹುದು
- ಇಂದು ನಿಮಗೆ ಧನಲಾಭವಾಗಬಹುದು
- ಆರೋಗ್ಯದಲ್ಲಿ ಏರುಪೇರಾಗಬಹುದು ಚಿಕಿತ್ಸೆ ಪಡೆಯಿರಿ
- ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಬಹುದು
- ವ್ಯಾಪಾರ ಮಾಡುವವರಿಗೆ ಲಾಭವಿದೆ
- ಪ್ರತ್ಯಂಗಿರಾ ದೇವಿಯನ್ನು ಉಪಾಸನೆ ಮಾಡಿ
ಮಿಥುನ
- ಮೇಲಾಧಿಕಾರಿಗಳಿಂದ ನಿಂದನೆಗೊಳಗಾಗುತ್ತೀರಿ
- ಇಂದು ತಲೆ ನೋವಿನ ಸಮಸ್ಯೆ ಕಾಡಬಹುದು
- ನಕಾರಾತ್ಮಕ ಆಲೋಚನೆಗಳು ಬರದಂತೆ ಪಡೆಯಿರಿ
- ಎಲ್ಲಾ ಅನುಕೂಲಗಳಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
- ಮಾನಸಿಕ ಒತ್ತಡ ಕೋಪ ಬರಬಹುದು
- ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ
ಕಟಕ
- ಪ್ರಯಾಣದಲ್ಲಿ ತೊಂದರೆಯಿದೆ ಎಚ್ಚರಿಕೆವಹಿಸಿ
- ನಿಮ್ಮ ಪರಿಶ್ರಮವು ಲೆಕ್ಕಕ್ಕೆ ಬರುವುದಿಲ್ಲ
- ಉದ್ಯೋಗದಲ್ಲಿ ಸ್ಥಾನಮಾನಗಳು ಸಿಗಬಹುದು
- ಮನಸ್ಸಿನಿಂದ ವೃತ್ತಿ ಅಥವಾ ಉದ್ಯೋಗದ ಚಿಂತೆ ದೂರವಾಗಬಹುದು
- ಬರಬೇಕಾದ ಬಾಕಿ ಹಣ ಇಂದು ಬರುವ ಯೋಗವಿದೆ
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ಕುಲದೇವತಾ ಆರಾಧನೆ ಮಾಡಿ
ಸಿಂಹ
- ತಂದೆಯವರ ಸಂಪೂರ್ಣ ಸಹಾಯ ಸಹಕಾರ ಸಿಗಲಿದೆ
- ವಸ್ತು ಖರೀದಿ ಅಥವಾ ವ್ಯಾಪಾರದಲ್ಲಿ ಲಾಭವಿದೆ
- ನೌಕರಿಯ ಬಗ್ಗೆ ಸ್ನೇಹಿತರಿಂದ ತೊಂದರೆ ಇದೆ
- ಕುಟುಂಬದ ನಿರ್ವಹಣೆ ಹಣದ ದೃಷ್ಟಿಯಿಂದ ಕಷ್ಟವಾಗಬಹುದು
- ಶುಭ ಕಾರ್ಯಕ್ಕೆ ಹೋಗಲು ಮನಸ್ಸು ಇರುವುದಿಲ್ಲ
- ಸಾಯಂಕಾಲದ ವೇಳೆಗೆ ಅಶುಭ ವಾರ್ತೆ, ಮನೆಯಲ್ಲಿ ಆತಂಕ
- ಗುರು ದತ್ತಾತ್ರೇಯರನ್ನ ಪ್ರಾರ್ಥನೆ ಮಾಡಿ
ಕನ್ಯಾ
- ಉದ್ಯಮಿಗಳಿಗೆ ಹಣದ ಏರುಪೇರಿನಿಂದ ತೊಂದರೆಯಾಗಬಹುದು
- ಆಯಾಸದಿಂದ ಕಿರಿಕಿರಿ ಆಗಬಹುದು
- ನಿಗೂಢ ವಿಷಯಗಳನ್ನು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ
- ಆಯಾಸದಿಂದ ಕಿರಿಕಿರಿಯಾಗಬಹುದು
- ಮನೆಯಲ್ಲಿ ಕಹಿ ವಿಚಾರಗಳನ್ನು ಮಾತನಾಡಬೇಡಿ
- ಹೊಟ್ಟೆಗೆ ಸಂಭಂದಿಸಿದ ತೊಂದರೆ ಕಾಣಬಹುದು
- ದಾಂಪತ್ಯದಲ್ಲಿ ವಿರಸ, ಬಿರುಕು ತೋರುತ್ತದೆ ಹೊಂದಾಣಿಕೆ ಅಗತ್ಯ
- ಐಕ್ಯಮತ್ಯ ಮಂತ್ರ ಶ್ರವಣ ಮಾಡಿ
ತುಲಾ
- ಬಂಧುಗಳಲ್ಲಿದ್ದ ವಿರಸ, ಭಿನ್ನಾಭಿಪ್ರಾಯ ದೂರವಾಗುತ್ತದೆ
- ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೆಲವು ಗೊಂದಲಗಳು ಕಾಡಬಹುದು
- ಇಂದು ಮುದ್ರಕರಿಗೆ ಶುಭ ದಿನ
- ಸಾಕು ಪ್ರಾಣಿಯ ಬಗ್ಗೆ ಸ್ವಲ್ಪ ಎಚ್ಚರಿಕೆವಹಿಸಿ ತೊಂದರೆಯಿದೆ
- ಅರಿಯದ ವಿಚಾರಗಳಲ್ಲಿ ಸಿಲುಕಬಹುದು
- ಮನೆಯಲ್ಲಿ ಮಂಗಳ ಕಾರ್ಯ, ಮದುವೆ ವಿಚಾರ ಪ್ರಸ್ತಾಪಿಸಬಹುದು
- ವ್ಯಕ್ತಿತ್ವ, ಸ್ವಭಾವದಲ್ಲಿ ಕೆಲವು ಬದಲಾವಣೆಗಳಾಗಬಹುದು
- ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಬಹುದು
- ಆರೋಗ್ಯದಲ್ಲಿ ತುಂಬಾ ಏರುಪೇರು ಕಾಣಬಹುದು
- ಮನೆಯಲ್ಲಿ ಗಾಜಿನ ವಸ್ತು ಒಡೆಯಬಹುದು, ಅಪಶಕುನ ಭಾವ
- ಸಾಯಂಕಾಲದಲ್ಲಿ ವ್ಯವಹಾರಿಕ, ಹಣದ ವಿಚಾರಕ್ಕೆ ಕಲಹ, ಜಗಳ ಬೇಡ
- ರುದ್ರ ಮಂತ್ರ ಶ್ರವಣ ಮಾಡಿ
ವೃಶ್ಚಿಕ
- ಆನೇಕ ಕೆಲಸಗಳಲ್ಲಿ ತುಂಬಾ ಗಮನ ಕೊಟ್ಟು ವ್ಯವಹರಿಸಬೇಕು
- ಎದುರಾಳಿಗಳ ಅಥವಾ ಶತ್ರುಗಳ ಬಲ ತಿಳಿದು ವ್ಯವಹರಿಸಿ
- ಬೇರೆಯವರ ತಪ್ಪನ್ನು ಹೇಳಬೇಡಿ
- ನಾಟಕೀಯ ಬುದ್ಧಿಯಿಂದ ನಿಮಗೆ ಹಿನ್ನಡೆಯಾಗಬಹುದು
- ವೈಯಕ್ತಿಕ ವಿಚಾರದಲ್ಲಿ ಕೆಲವು ಸುಧಾರಣೆಯ ಅಗತ್ಯ ಕಾಣಬಹುದು
- ಮನಸ್ಸಿನ ಗೊಂದಲ ಗೊಂದಲಗಳು ದೂರವಾದರೆ ನಿಂತ ಕೆಲಸ ಚಾಲನೆ ಪಡೆಯುತ್ತವೆ
- ನವಗ್ರಹರನ್ನು ವಿಶೇಷವಾಗಿ ಚಂದ್ರಗ್ರಹನನ್ನು ಪ್ರಾರ್ಥಿಸಿ
ಧನುಸ್ಸು
- ಬೇರೆಯವರ ವಿಚಾರಕ್ಕೆ ತಲೆ ಹಾಕಿ ಅವಮಾನವಾಗಬಹುದು
- ಹೊಸ ಸಂಬಂಧದ ವಿಚಾರ ಚರ್ಚೆಯಾಗುತ್ತದೆ
- ಕೆಲವು ವಿಚಾರಗಳಲ್ಲಿ ಮನೆಯಲ್ಲಿ ನಿಮ್ಮನ್ನ ಪರಿಗಣಿಸುವುದಿಲ್ಲ
- ಮಹಿಳೆಯರ ಸೌಂದರ್ಯವರ್ಧಕ ವಸ್ತು ಖರೀದಿಯಲ್ಲಿ ಆಸಕ್ತಿ ತೋರಬಹುದು
- ನಿಮ್ಮ ಕೆಲಸ, ಒತ್ತಡವನ್ನು ಬೇರೆಯವರಿಗೆ ವಹಿಸಬೇಡಿ
- ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ
- ಮನೋಭವ ಮಂತ್ರ ಉಪಾಸನೆ ಮಾಡಿ
ಮಕರ
- ನೀವು ಎಷ್ಟು ನಯವಾಗಿರುತ್ತೀರೋ ಅಷ್ಟು ಗೌರವ ನಿಮ್ಮದಾಗುತ್ತದೆ
- ಸಾಯಂಕಾಲದ ಚರ್ಚೆ ನಿಮಗೆ ಯಾವ ಅನುಕೂಲರವಾಗಿಲ್ಲ
- ದಿನದ ಆರಂಭದಲ್ಲಿ ನಿಮಗೆ ತೊಂದರೆ, ಬೇಸರದ ಸೂಚನೆ ಇದೆ
- ನಿಮ್ಮ ಮನಸ್ಸು ಅಧೈರ್ಯದಿಂದ ಕೂಡಿರುತ್ತದೆ
- ಸ್ಥಿರ ಮನಸ್ಸು ಇಲ್ಲದೆ ಅನೇಕ ಗೊಂದಲಗಳಿಗೆ ಸಿಲುಕಬಹುದು
- ಜೊತೆಗಿದ್ದ ಸ್ನೇಹಿತರು ನಿಮ್ಮ ಸ್ವಭಾವದಿಂದ ದೂರವಾಗಬಹುದು
- ಭಗವದ್ಗೀತಾ ಶ್ಲೋಕ ಪಠಿಸಿ
ಕುಂಭ
- ಇಂದು ಸಹೋದರರಲ್ಲಿ ಭಿನ್ನಾಭಿಪ್ರಾಯದ ಮಾತುಗಳು ಬರಬಹುದು
- ಅನಗತ್ಯ ವಸ್ತು, ವಿಷಯಗಳಿಗೆ ಕಲಹವಾಗಬಹುದು
- ದೀರ್ಘಕಾಲದ ತೊಂದರೆ ಇರುವವರಿಗೆ ಸ್ವಲ್ಪ ಚೇತರಿಕೆ ಇದೆ
- ನಿಮ್ಮ ಮೊಂಡು ಸ್ವಭಾವವನ್ನು ಪರಿವರ್ತಿಸಿಕೊಳ್ಳಲು ಸಕಾಲ, ಪ್ರಯತ್ನ ಬೇಕು
- ಕುಟುಂಬದ ಮೂಲವನ್ನು ಸರಿಯಾಗಿ ಹುಡುಕಿ ಸರಿಪಡಿಸಿಕೊಳ್ಳಬಹುದು
- ಸತ್ಯಕ್ಕೆ ಹತ್ತಿರವಾದ ಉಪಯುಕ್ತವಾದ ಚರ್ಚೆ ಮಾಡುವುದು ಉತ್ತಮ
- ಉತ್ತಮ ಸಾಲಿಗ್ರಾಮ ರೂಪಿ ವಿಷ್ಣುವಿನ ಆರಾಧನೆ ಮಾಡಿ
ಮೀನ
- ಕುಟುಂಬದಲ್ಲಿ ಅಶಾಂತಿ ವಾತಾವರಣ
- ಆತುರದ ಮಾತು ತೊಂದರೆಯಾಗಬಹುದು
- ನಕಾರಾತ್ಮಕ ವಿಚಾರಗಳಿಗೆ ಸಮಯ ವ್ಯರ್ಥವಾಗಬಹುದು
- ವಸ್ತು ಖರೀದಿಯಲ್ಲಿ ಚರ್ಚೆ, ಅವಮಾನ, ಕಲಹ
- ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ, ಅನಾನುಕೂಲ
- ಬೇರೆಯವರನ್ನು ಯಾವಾಗಲೂ ಮಾತಿನಿಂದ ಅವಮಾನಿಸುವ ಅಭ್ಯಾಸ ದೂರಮಾಡಿ
- ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ