newsfirstkannada.com

×

ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಜೈ ಅಂತಿದ್ದಂತೆ ಅಲರ್ಟ್‌ ಆದ ಕಾಂಗ್ರೆಸ್.. ಕೌಂಟರ್ ಪ್ಲಾನ್ ರೆಡಿ; ಏನದು?

Share :

Published August 2, 2024 at 7:41am

    ನಾಳೆ ಬೆಳಗ್ಗೆಯೇ ಮೈಸೂರಿಗೆ ಬಿಜೆಪಿ ನಾಯಕರಿಂದ ಪಾದಯಾತ್ರೆಗೆ ಚಾಲನೆ

    ಕುಮಾರಸ್ವಾಮಿ ಮನವೊಲಿಸಿದ ಬಿಜೆಪಿ ನಾಯಕರ ಪಾದಯಾತ್ರೆಗೆ JDS​ ಸಾಥ್​

    ಬಿಜೆಪಿ, ಜೆಡಿಎಸ್ ದೋಸ್ತಿ ಪಾದಯಾತ್ರೆಗೆ ಕಾಂಗ್ರೆಸ್​ನಿಂದ ಕೌಂಟರ್

ವಾಲ್ಮೀಕಿ, ಮುಡಾ ಹಗರಣದ ವಿರುದ್ಧ ಹೋರಾಟ ಮಾಡ್ತಿರುವ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ಮನಸ್ತಾಪ ಏರ್ಪಟ್ಟು ನಾವು ಪಾದಯಾತ್ರೆ ಬರೋದಿಲ್ಲ ಅಂತಿದ್ದ ಹೆಚ್.ಡಿ.ಕುಮಾರಸ್ವಾಮಿ ಮನವೊಲಿಕೆಯೂ ಯಶಸ್ವಿಯಾಗಿದೆ. ನಾಳೆ ಬೆಳಗ್ಗೆಯಿಂದ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಪ್ರತಿದಿನವೂ ಸಭೆ ಮಾಡುತ್ತಾ ದೋಸ್ತಿ ಪಾದಯಾತ್ರೆಗೆ ಕೌಂಟರ್ ಕೊಡಲು ತಂತ್ರ ರೂಪಿಸಿದೆ.

ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಗೆ ಬಿಗ್ ಶಾಕ್; ಜೆಡಿಎಸ್ ಬೆಂಬಲ ಹಿಂಪಡೆದಿದ್ದು ಯಾಕೆ? 

ರಾಜ್ಯ ರಾಜಕೀಯದಲ್ಲಿ ಈಗ ಪಾದಯಾತ್ರೆಯ ಸಮಯ. ವಾಲ್ಮೀಕಿ, ಮುಡಾ ಹಗರಣದ ಆರೋಪ ಕಾಂಗ್ರೆಸ್ ಸರ್ಕಾರದ ಕೊರಳಿಗೆ ಸುತ್ತಿಕೊಂಡಿದೆ. ಸದನದ ಒಳಗೆ ಹೊರಗೆ ಹೋರಾಟ ಮಾಡಿದ್ದ ಮೈತ್ರಿ ಪಡೆ ಮತ್ತೊಂದು ಮಹಾ ಹೋರಾಟಕ್ಕೆ ಸಜ್ಜಾಗಿದೆ.

ಸರ್ಕಾರದ ಹಗರಣಗಳ ವಿರುದ್ಧ ದೋಸ್ತಿ ಪಾದಯಾತ್ರೆ ಕಹಳೆ
‘ದಳಪತಿ’ ಮನವೊಲಿಸಿದ ಬಿಜೆಪಿ.. ಪಾದಯಾತ್ರೆಗೆ JDS​ ಸಾಥ್​
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ವರ್ಷಕ್ಕೆ ಹಗರಣಗಳು ಹೆಗಲೇರಿವೆ. ವಾಲ್ಮೀಕಿ ಹಾಗೂ ಮೈಸೂರಿನ ಮುಡಾ ಹಗರಣಗಳು ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿವೆ. ವಿಪಕ್ಷಗಳು ಇದೇ ಅಸ್ತ್ರ ಹಿಡಿದು ಚಕ್ರವ್ಯೂಹ ರಚಿಸಿವೆ. ಸಿಎಂ ಸಿದ್ದರಾಮಯ್ಯನ್ನು ಇಕ್ಕಟ್ಟಿಗೆ ಸಿಲುಕಿಸಲು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆಗೆ ಸಜ್ಜಾಗಿದೆ.

ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಲು ರೆಡಿ.. ಆದ್ರೆ ಒಂದು ಕಂಡೀಷನ್; ಕುಮಾರಸ್ವಾಮಿ ಷರತ್ತು ಏನು? 

ಆರಂಭದಲ್ಲಿ ಬಿಜೆಪಿ ಪಾದಯಾತ್ರೆಗೆ ಬರೋದಿಲ್ಲ ಅಂತ ಮುನಿಸಿಕೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಸಕ್ಸಸ್ ಆಗಿದ್ದಾರೆ. ಹೆಚ್​ಡಿಕೆ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಸಾಥ್​ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ದೋಸ್ತಿ ಪಾದಯಾತ್ರೆಗೆ ಕಾಂಗ್ರೆಸ್​ನಿಂದ ಕೌಂಟರ್
ಇಂದಿನಿಂದಲೇ ಸಭೆ ಮೇಲೆ ಸಭೆ.. ಮೈತ್ರಿಗೆ ಟಕ್ಕರ್!
ಬಿಜೆಪಿ ಪಾದಯಾತ್ರೆಗೆ ದಳಪತಿ ಸಾಥ್​ ನೀಡುತ್ತಿದ್ದಂತೆ ಡಿಸಿಎಂ ಡಿಕೆಶಿ ಅಲರ್ಟ್​ ಆಗಿದ್ದಾರೆ. ಕಳೆದ ರಾತ್ರಿ ಏಕಾಏಕಿ ಸುದ್ದಿಗೋಷ್ಟಿ ನಡೆಸಿದ ಡಿಕೆಶಿ ಮೈತ್ರಿ ಪಾದಯಾತ್ರೆಗೆ ಕೌಂಟರ್ ನೀಡಿದ್ದಾರೆ. ಬಿಜೆಪಿ ಪಾದಯಾತ್ರೆಯ ಮಾರ್ಗದಲ್ಲಿ ಇಂದಿನಿಂದ ನಾವೂ ಕೂಡ ಪ್ರತಿದಿನ ಸಭೆ ಮಾಡುತ್ತೇವೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಕೇಳುತ್ತೇವೆ, ಉತ್ತರ ಕೊಡಲಿ ಅಂತ ಡಿಕೆಶಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಪಾದಯಾತ್ರೆಗೆ ಅವಕಾಶ ಇಲ್ಲ ಎಂದಿದ್ದಾರೆ.

ನಾಳೆಯಿಂದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್​ ಪಾದಯಾತ್ರೆ ಶುರುವಾಗಲಿದೆ. ಆದ್ರೆ ಇವತ್ತಿನಿಂದಲೇ ಪಾದಯಾತ್ರೆಗೆ ಟಕ್ಕರ್​ ಕೊಡಲು ಕಾಂಗ್ರೆಸ್ ನಾಯಕುರ ಅಖಾಡಕ್ಕೆ ಇಳಿಯಲಿದ್ದಾರೆ. ಇವತ್ತು ಬಿಡದಿಯಲ್ಲಿ ಬೃಹತ್ ಸಭೆ ನಡೆಸುವ ಮೂಲಕ ತಿರುಗೇಟು ನೀಡಲು ಕೈ ಪಡೆ ಸಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಜೈ ಅಂತಿದ್ದಂತೆ ಅಲರ್ಟ್‌ ಆದ ಕಾಂಗ್ರೆಸ್.. ಕೌಂಟರ್ ಪ್ಲಾನ್ ರೆಡಿ; ಏನದು?

https://newsfirstlive.com/wp-content/uploads/2024/08/Dkshivakumar-ON-Bjp-padayatre.jpg

Load More