newsfirstkannada.com

×

ಕೇರಳದಲ್ಲಿ ಮಂಡ್ಯ ಅಜ್ಜಿ, ಮೊಮ್ಮಗನ ದುರಂತ ಅಂತ್ಯ.. ಕುಟುಂಬದವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ

Share :

Published August 2, 2024 at 9:05am

Update August 2, 2024 at 9:07am

    ಕೇರಳದ ಭೂಕುಸಿತದಲ್ಲಿ ಮೃತಪಟ್ಟಿದ್ದ ಮಂಡ್ಯದ ಅಜ್ಜಿ ಮೊಮ್ಮಗ

    ಮೃತ ನಿಹಾಲ್ ತಾಯಿಯ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ

    ಮನವಿಯಂತೆ ಕೇರಳದಿಂದ ಕೆ.ಆರ್​. ಪೇಟೆಯಲ್ಲಿ ಅಂತ್ಯ ಸಂಸ್ಕಾರ

ಕೇರಳದ ವಯನಾಡಿನ ಭೂಕುಸಿತದಲ್ಲಿ ಮಂಡ್ಯದ ಅಜ್ಜಿ, ಮೊಮ್ಮಗ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟದ 55 ವರ್ಷದ ಲೀಲಾವತಿ ಹಾಗೂ 2.5 ವರ್ಷದ ಮೊಮ್ಮಗ ನಿಹಾಲ್ ಮೃತಪಟ್ಟಿದ್ದರು. ಮೃತ ನಿಹಾಲ್ ತಾಯಿ ಝಾನ್ಸಿ ಅವರು ಅಜ್ಜಿ ಮೊಮ್ಮಗನ ಅಂತ್ಯ ಸಂಸ್ಕಾರ ನಮ್ಮೂರಿನಲ್ಲಿಯೇ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಕರ್ನಾಟಕ ಸರ್ಕಾರ ಕೊನೆಗೂ ಆ ತಾಯಿ ಹೃದಯದ ಆಸೆ ನೆರವೇರಿಸಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ.. ಮಕ್ಕಳನ್ನು ಆಟ ಆಡಲು ಬಿಟ್ಟು ಯಾಮಾರಿದ್ರೆ ಅಪಾಯ; ಈ ವಿಡಿಯೋ ನೋಡಿ!

ಸಿಎಂ ಸಿದ್ದರಾಮಯ್ಯ ಸರ್ಕಾರ ಕೇರಳ ಸರ್ಕಾರದ ಜೊತೆ ಮಾತನಾಡಿ ಮೃತದೇಹ ರವಾನೆಗೆ ಅವಕಾಶ ಮಾಡಿಕೊಟ್ಟಿದೆ. ಕೇರಳದ ವಿಮ್ಸ್ ಆಸ್ಪತ್ರೆಯಿಂದ ಕೆ.ಆರ್​ ಪೇಟೆಗೆ ಮೃತದೇಹಗಳು ರವಾನೆಯಾಗಿವೆ. ಎರಡು ಫ್ರೀಜರ್​ ಆ್ಯಂಬುಲೆನ್ಸ್​ನಲ್ಲಿ ಪ್ರತ್ಯೇಕವಾಗಿ ಎರಡು ಮೃತದೇಹಗಳನ್ನು ತರಲಾಗಿದೆ. ಮೃತದೇಹಗಳು ಕೆ. ಆರ್. ಪೇಟೆ ತಲುಪುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಸೇರಿದಂತೆ ಶಾಸಕ ಹೆಚ್​.ಟಿ. ಮಂಜು ಅಂತಿಮ ದರ್ಶನ ಪಡೆದರು. ಮಧ್ಯರಾತ್ರಿಯೇ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಕೇರಳದಲ್ಲಿ ಮಂಡ್ಯ ಅಜ್ಜಿ, ಮೊಮ್ಮಗನ ದುರಂತ ಅಂತ್ಯ.. ಕುಟುಂಬದವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ

https://newsfirstlive.com/wp-content/uploads/2024/07/MND-KERALA-MISSING.jpg

Load More