ಮಗಳ ಮದುವೆ ಮಾಡಿಸುವ ದೊಡ್ಡ ಕನಸು ಹೊತ್ತಿದ್ದ ಪೋಷಕರು
ಅಪ್ಪ-ಅಮ್ಮ, ತಂಗಿ ಎಲ್ಲರೂ ಭೂಕುಸಿತಕ್ಕೆ ಸಿಕ್ಕಿ ನೆಲ ಸಮಾಧಿ
ತಂಗಿ ಮೃತದೇಹ ಪತ್ತೆ.. ಅಪ್ಪ-ಅಮ್ಮನಿಗಾಗಿ ಹುಡುಕಾಡುತ್ತಿರೋ ಅಕ್ಕ
ಹಿರಿಯ ಮಗಳ ಮದುವೆ ಮಾಡಲು 4 ತಿಂಗಳು ಬಾಕಿ ಇತ್ತು. ಇದು ಅವರ ದೊಡ್ಡ ಕನಸು ಕೂಡ ಆಗಿತ್ತು. ಮಳೆ ಬಾರದೆ ಇದ್ದರೆ ಅದಕ್ಕಾಗಿ ಸಿದ್ಧತೆ ಮಾಡಲು ಮುಂದಾಗಿದ್ದರು. ಆದರೆ ವಯನಾಡಿನ ಭೂಕುಸಿತದಲ್ಲಿ ಅವರೆಲ್ಲರೂ ಮಣ್ಣು ಪಾಲಾಗಿದ್ದಾರೆ. ಮಗಳೊಬ್ಬಳನ್ನು ಉಳಿಸಿ ಉಳಿದವರೆಲ್ಲರು ಪ್ರಕೃತಿ ಮಾತೆಯ ರೌದ್ರ ನರ್ತನಕ್ಕೆ ಬಲಿಯಾಗಿದ್ದಾರೆ.
ಶಿವಣ್ಣ ಹಾಗೂ ಪತ್ನಿ ಸಬಿತಾಗೆ ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ಹಿರಿಯ ಪುತ್ರಿ ಶೃತಿಗೆ ಮದುವೆ ನಿಶ್ಚಯವಾಗಿತ್ತು. ಇದೇ ಡಿಸೆಂಬರ್ನಲ್ಲಿ ಮದುವೆ ಮಾಡುವುದಾಗಿ ಕುಟುಂಬಸ್ಥರು ನಿಶ್ಚಯಿಸಿಕೊಂಡಿದ್ದರು. ಆದರೆ ಜುಲೈ 30ರಂದು ಬಿದ್ದ ಮಳೆಗೆ ಭೂಕುಸಿತ ಸಂಭವಿಸಿ ತಂದೆ, ತಾಯಿ, ತಂಗಿ ಬಲಿಯಾಗಿದ್ದಾರೆ. ಮಾತ್ರವಲ್ಲದೆ ಅಜ್ಜ, ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ. ಶೃತಿ ತನ್ನ 6 ಜನರನ್ನು ಕಳೆದುಕೊಂಡಿದ್ದಾಳೆ.
ಇದನ್ನೂ ಓದಿ: ಗಲ್ಫ್ನಿಂದ ಓಡೋಡಿ ಬಂದ ಮಗನಿಗೆ ಸಿಕ್ಕಿದ್ದು ತಂದೆಯ ಮೃತದೇಹ.. ಅಮ್ಮ, ಹೆಂಡತಿ, ಮಗ ಎಲ್ಲರೂ ನಾಪತ್ತೆ
ಮನೆಯವರೆಲ್ಲರನ್ನು ಕಳೆದುಕೊಂಡ ಶೃತಿಗೆ ತನ್ನ 19 ವರ್ಷದ ತಂಗಿ ಶ್ರೇಯಾ ಮೃತದೇಹ ಸಿಕ್ಕಿದೆ. ತಂಗಿಯ ಮೃತದೇಹ ಕಂಡಂತೆ ಶೃತಿ ಕಣ್ಣೀರು ಸುರಿಸಿದ್ದಾಳೆ. ತನ್ನವರಿಗಾಗಿ ಹುಡುಕಾಡಿದ್ದಾಳೆ. ಅಮ್ಮ, ಅಪ್ಪನನ್ನು ಹುಡುಕಿ ಕೊಡಿ ಎಂದು ಕೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಮನಸ್ತಾಪಕ್ಕೆ ಬ್ರೇಕ್ ಹಾಕಿದ ಕೊಹ್ಲಿ-ಗಂಭೀರ್.. ಮೊದಲ ಭೇಟಿಯಲ್ಲಿ ಏನು ಮಾಡಿದ್ರು ಗೊತ್ತಾ?
ಶೃತಿ ಕೋಯಿಕ್ಕೋಡ್ನ ಮಿವ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೀಗ ತನ್ನವರನ್ನು ಕಳೆದುಕೊಂಡು ಶೃತಿಗೆ ದಿಕ್ಕು ತೋಚದಂತಾಗಿದೆ. ಅಪ್ಪ-ಅಮ್ಮ, ತಂಗಿ, ಅಜ್ಜ-ಅಜ್ಜಿ ಮರಳಿ ಬರುತ್ತಾರೆ ಎಂದು ಕಣ್ಣೀರಿನಲ್ಲೇ ದಿನದೂಡುತ್ತಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ