newsfirstkannada.com

ಕಾಮುಕನ ಅಟ್ಟಹಾಸ, ತಬ್ಬಿಕೊಂಡು ಬಲವಂತ ಚುಂಬನ.. ಮಹಿಳೆಯರಿಗೆ ಸಿಲಿಕಾನ್​ ಸಿಟಿ ಎಷ್ಟು ಸೇಫ್?

Share :

Published August 5, 2024 at 7:43am

    ವಾಕ್​ ಮಾಡಲು ನಿಂತಿದ್ದ ಮಹಿಳೆಯನ್ನ ಟಾರ್ಗೆಟ್ ಮಾಡಿದ್ದ

    ಮಹಿಳೆಗೆ ಗೊತ್ತಾಗದಂತೆ ತನ್ನ ವಿಕೃತಿ ತೋರಿದ್ದ ದುಷ್ಟ ಕಾಮುಕ

    ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರಿಗೆ ಸೇಫ್ಟಿಯೇ ಇಲ್ವಾ?

ಹೆಣ್ಮಕ್ಕಳೇ ರಾಜಧಾನಿ ಬೆಂಗಳೂರಿನಲ್ಲಿ ಬೆಳಂಬೆಳಗ್ಗೆ ನೀವು ಒಂಟಿಯಾಗಿ ಓಡಾಡ್ತೀರಾ..? ಹಾಗಿದ್ರೆ ಎಚ್ಚರ! ಇಲ್ಲೊಂದು ಘಟನೆ ಬಗ್ಗೆ ತಿಳಿದುಕೊಂಡರೇ ಹೊರಗಡೆ ಓಡಾಡೋದಕ್ಕೆ ನೀವು ಬೆಚ್ಚಿ ಬೀಳ್ತೀರಾ? ಬೆಳಂಬೆಳಗ್ಗೆಯೇ ಸಿಲಿಕಾನ್​ ಸಿಟಿಯಲ್ಲಿ ಮಹಿಳೆಯರಿಗೆ ಸೇಫ್ಟಿಯೇ ಇಲ್ವಾ?.

ಸಮಯ ಬೆಳಗ್ಗೆ 5 ಗಂಟೆ 1 ನಿಮಿಷ 18 ಸೆಕೆಂಡ್

ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ಮಹಿಳೆ ರಸ್ತೆ ಬದಿಯಲ್ಲಿ ನಿಂತು ತಲೆಯನ್ನ ಬಾಚಿಕೊಳ್ತಾ ಇದ್ದಳು. ಅದೇ ಸಮಯಕ್ಕೆ ಓರ್ವ ಯುವಕ ಹೇಗೆ ಕೈ ಬೀಸ್ತಾ ಬೀಸ್ತಾ, ಅತ್ತಿಂದಿತ್ತ ನೋಡ್ತಾ ಇದ್ದ. ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕ್ತಾ ಎಂಟ್ರಿ ಕೊಟ್ಟಿದ್ದಾನೆ. ​

ಇದನ್ನೂ ಓದಿ: ಅಯ್ಯೋ ದುರಂತ!.. 18 ಫ್ಯಾಮಿಲಿ ಕಾಪಾಡಿದ್ದ ರಿಯಲ್ ಹೀರೋ.. ಕಾರು ಸಮೇತ ಕಣ್ಮುಂದೆಯೇ ಕೊಚ್ಚಿ ಹೋದ

ಮಹಿಳೆಗೆ ಗೊತ್ತಾಗದಂತೆ ಆಕೆಯ ಬಳಿ ತನ್ನ ವಿಕೃತಿ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡೋಕು ಭಯಪಡುವಂತೆ ವಾತಾವರಣ ನಿರ್ಮಾಣವಾಗಿದೆ. ಅಂದಾಗೆ ಈ ಘಟನೆ ನಡೆದಿರೋದು ಇದು ಕಳೆದ ಶುಕ್ರವಾರ ಬೆಳಂಬೆಳಗ್ಗೆ. ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ರಸ್ತೆ ಬದಿ ವಾಕ್​ ಮಾಡಲು ನಿಂತಿದ್ದ ಮಹಿಳೆ ಕಾಮುಕನೊಬ್ಬ ಕಾಟಕೊಟ್ಟಿದ್ದಾನೆ. ಮಹಿಳೆಗೆ ಗೊತ್ತಾಗದಂತೆ ಆಕೆಯ ಬಳಿ ತನ್ನ ವಿಕೃತಿ ತೋರಿದ್ದಾನೆ. ಕಾಮುಕನ ಕೈಯಿಂದ ತಪ್ಪಿಸಿಕೊಂಡ ಮಹಿಳೆ ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಈ ವೇಳೆ ಕಾಮುಕ ಸ್ಥಳದಿಂದ ಎಸ್ಕೇಪ್​ ಆಗ್ಬಿಟ್ಟಿದ್ದಾನೆ.

ಇದನ್ನೂ ಓದಿ: ಜಿಮ್​ ವಸ್ತುಗಳ ಸೇಲ್ಸ್​ಮ್ಯಾನ್​ ಮೃತದೇಹ ಪತ್ತೆ.. ಪ್ರಕರಣ ಬೆನ್ನ ಹತ್ತಿದ್ದ ಪೊಲೀಸರಿಗೆ ಶಾಕ್​ ಮೇಲೆ ಶಾಕ್​!

ಕಳೆದ ಶುಕ್ರವಾರವೇ ಈ ಘಟನೆ ನಡೆದಿದ್ರೂ ಮಹಿಳೆ ದೂರು ನೀಡಿರಲಿಲ್ಲ. ಸಿಸಿಟಿವಿ ದೃಶ್ಯ ಯಾವಾಗ ಮಾಧ್ಯಮಗಳಲ್ಲಿ ಪ್ರಸಾರವಾಯ್ತೋ ಆಗ ನೊಂದ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಡಿವಿಆರ್​ ಅನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಅದೇನೆ ಹೇಳಿ.. ಇಷ್ಟು ದಿನ ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಒಬ್ಬಂಟಿಯಾಗಿ ಓಡಾಡೋದೆ ಕಷ್ಟ ಆಗಿತ್ತು. ಈ ವಿಡಿಯೋ ನೋಡ್ತಿದ್ರೆ ಬೆಳಗ್ಗೆ ಹೇಗಪ್ಪಾ ಮಹಿಳೆಯರು ಓಡಾಡೋದು ಅನ್ನುವಂತಾಗ್ಬಿಟ್ಟಿದೆ. ಇದ್ರ ಮಧ್ಯೆ ಸಿಲಿಕಾನ್​ ಸಿಟಿ ಬೆಂಗಳೂರು ಮಹಿಳೆಯರಿಗೆ ಎಷ್ಟು ಸೇಫ್​ ಅನ್ನೋ ಪ್ರಶ್ನೆ ಉದ್ಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಮುಕನ ಅಟ್ಟಹಾಸ, ತಬ್ಬಿಕೊಂಡು ಬಲವಂತ ಚುಂಬನ.. ಮಹಿಳೆಯರಿಗೆ ಸಿಲಿಕಾನ್​ ಸಿಟಿ ಎಷ್ಟು ಸೇಫ್?

https://newsfirstlive.com/wp-content/uploads/2024/08/BNG_WOMAN-3.jpg

Load More