newsfirstkannada.com

ರಾಹುಲ್​​​ ದ್ರಾವಿಡ್​ಗೆ ವಿದೇಶದಿಂದ ಬಿಗ್ ಆಫರ್.. ಕನ್ನಡಿಗನಿಗಾಗಿ ಈ ದೇಶದಲ್ಲಿ ಭಾರೀ ಫೈಟ್​!

Share :

Published August 5, 2024 at 12:01pm

    ಮುಖ್ಯ ​ಕೋಚ್​ ಸ್ಥಾನಕ್ಕಾಗಿ ದಿಗ್ಗಜರ ನಡುವೆ ದೊಡ್ಡ ಪೈಪೋಟಿ

    ಮ್ಯಾಥ್ಯೂವ್​​ ಮೋಟ್ ಕೊಕ್ ಕೊಟ್ಟು ರಾಹುಲ್ ದ್ರಾವಿಡ್​ಗೆ ಗಾಳ

    ಚಾಂಪಿಯನ್​ ಕೋಚ್​ ದ್ರಾವಿಡ್​ಗೆ ಆಫರ್​ಗಳ ಮೇಲೆ ಆಫರ್​​​​​!

ಚಾಂಪಿಯನ್ ಕೋಚ್​​ ರಾಹುಲ್​ ದ್ರಾವಿಡ್​​ಗೆ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆ. ಒಂದರ ಹಿಂದೆ ಮತ್ತೊಂದು ಆಫರ್​​​​​, ದಿ ವಾಲ್​ರನ್ನ ಹುಡುಕಿ ಬರ್ತಿವೆ. ಇದ್ರಲ್ಲಿ ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಅಂತ ಭಾರತ ತಂಡದ ಮಾಜಿ ಕೋಚ್​ಗೆ ಗೊಂದಲ​​ ಶುರುವಾಗಿದೆ. ಅಷ್ಟಕ್ಕೂ ದ್ರಾವಿಡ್​​ಗೆ ಬಂದಿರೋ ಹೊಸ ಆಫರ್​ ಯಾವುದು?.

‘ನಿರುದ್ಯೋಗಿ’ ವಾಲ್​ಗೆ 2 ಆಫರ್​​​..! ದ್ರಾವಿಡ್ ಆಯ್ಕೆ ಯಾವುದು..?

ರಾಹುಲ್​ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್​​​​​​ ಗೆದ್ದಿದ್ದೇ ಬಂತು. ದಿ ವಾಲ್​ ಅದೃಷ್ಟವೇ ಬದಲಾಗಿದೆ. ಒಂದರ ಹಿಂದೆ ಒಂದು ಆಫರ್​​ ಅವರನ್ನ ಹುಡುಕಿಕೊಂಡು ಬರ್ತಿವೆ. ಮುಂದಿನ ಐಪಿಎಲ್ ಸೀಸನ್​​ನಲ್ಲಿ ಪ್ರಮುಖ ತಂಡವೊಂದರ ಹೆಡ್​ಕೋಚ್ ಆಗ್ತಾರೆ ಅನ್ನು ಸುದ್ದಿ ಹರಿದಾಡ್ತಿರೋವಾಗಲೇ ಚಾಂಪಿಯನ್​ ಕೋಚ್​ಗೆ ಇದೀಗ ಮತ್ತೊಂದು ದೊಡ್ಡ ಆಫರ್​​​​​​ ಬಂದಿದೆ.

ಇದನ್ನೂ ಓದಿ: ಕಾಮುಕನ ಅಟ್ಟಹಾಸ, ತಬ್ಬಿಕೊಂಡು ಬಲವಂತ ಚುಂಬನ.. ಮಹಿಳೆಯರಿಗೆ ಸಿಲಿಕಾನ್​ ಸಿಟಿ ಎಷ್ಟು ಸೇಫ್?

ಇಂಗ್ಲೆಂಡ್​ ಕೋಚ್ ಆಗುವಂತೆ ದ್ರಾವಿಡ್​ಗೆ ಆಹ್ವಾನ..!

ಟಿ20 ವಿಶ್ವಕಪ್​​ ಮುಕ್ತಾಯದ ಬಳಿಕ ತಾನು ಇನ್ಮುಂದೆ ನಿರುದ್ಯೋಗಿ ಅಂದಿದ್ದ ಲೆಜೆಂಡ್ರಿ ರಾಹುಲ್​ಗೆ ಇಂಗ್ಲೆಂಡ್​​ ತಂಡದ ಹೆಡ್​ಕೋಚ್​​ ಆಫರ್​ ಅರಸಿ ಬಂದಿದೆ. ಟಿ20 ವಿಶ್ವಕಪ್​ ಹಾಗೂ ಒನ್ಡೆ ವಿಶ್ವಕಪ್​ ಫೇಲ್ಯೂರ್​ ಬೆನ್ನಲ್ಲೆ ECB ವೈಟ್​​​ ಬಾಲ್​​ ಹೆಡ್​ಕೋಚ್​​​​​ ಮ್ಯಾಥ್ಯೂವ್​​ ಮೋಟ್​ರನ್ನ ಕೆಳಗಿಳಿಸಿದೆ. ಇವರ ಬದಲಿಗೆ ಚಾಂಪಿಯನ್ ಕೋಚ್ ದ್ರಾವಿಡ್​ರನ್ನ ನೇಮಿಸಿಕೊಳ್ಳಲು ಇಂಗ್ಲೆಂಡ್​​​​​ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್​ ಪ್ಲಾನ್​​ ಮಾಡಿದೆ.

ಈ ನಡುವಲ್ಲೆ ಮಾಜಿ ಚಾಂಪಿಯನ್ ಕ್ಯಾಪ್ಟನ್ ಇಯಾನ್​​ ಮಾರ್ಗನ್​, ಕೂಡ ರಾಹುಲ್ ದ್ರಾವಿಡ್​ ಇಂಗ್ಲೆಂಡ್​ ತಂಡದ ವೈಲ್​​​​ಬಾಲ್​ ಕೋಚ್ ಆದ್ರೆ, ಬೆಸ್ಟ್​ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದ್ರಾವಿಡ್​ ತಂಡಕ್ಕೆ ಸೂಕ್ತ ಎಂದು ಮಾರ್ಗನ್​ ಹೇಳಿದ್ದಾರೆ.

ಇಂಗ್ಲೆಂಡ್​ ಕೋಚ್ ಆಗಲು ದಿಗ್ಗಜರಿಂದ ಪೈಪೋಟಿ..!

ಸದ್ಯ ಇಯಾನ್ ಮಾರ್ಗನ್ ಏನೋ ಇಂಗ್ಲೆಂಡ್​ ತಂಡದ ಕೋಚ್​​ ಆಗಲು ರಾಹುಲ್​ ದ್ರಾವಿಡ್​​ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಇಂಗ್ಲೆಂಡ್​ ತಂಡದ ಹೆಡ್​ಕೋಚ್​​​ ಹುದ್ದೆಗೇರುವುದು ಸುಲಭವಿಲ್ಲ. ಯಾಕಂದ್ರೆ ಈ ಸಿಂಹಾಸನದ ಪಟ್ಟಕ್ಕೆ ದಿಗ್ಗಜರ ನಡುವೆ ಪೈಪೋಟಿ ಏರ್ಪಟ್ಟಿದೆ. ದ್ರಾವಿಡ್ ಸೇರಿದಂತೆ ಸ್ಟೀಫನ್ ಪ್ಲೇಮಿಂಗ್​​​, ರಿಕಿ ಪಾಂಟಿಂಗ್​​​​ ಹಾಗೂ ಕುಮಾರ್ ಸಂಗಕ್ಕಾರ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.

ದ್ರಾವಿಡ್​ ಮುಂದಿದೆ ರಾಜಸ್ಥಾನದ ಹೆಡ್​​​​ ಕೋಚ್​​​ ಆಫರ್​​​..!

ದ್ರಾವಿಡ್​ ಭಾರತಕ್ಕೆ ವಿಶ್ವಕಪ್​​ ಗೆಲ್ಲಿಸಿಕೊಡ್ತಿದ್ದಂತೆ ರಾಜಸ್ಥಾನ ರಾಯಲ್ಸ್ ಗಾಳ ಹಾಕಿದೆ. 18ನೇ ಐಪಿಎಲ್​​ ಸೀಸನ್​ನಲ್ಲಿ ರಾಜಸ್ಥಾನ ತಂಡದ ಹೆಡ್​ಕೋಚ್​​ ಆಗುವಂತೆ ಆಫರ್​​​ ಕೊಟ್ಟಿದೆ. ಈ ಬಗ್ಗೆ ದ್ರಾವಿಡ್​ ಜೊತೆ ಮಾತುಕತೆ ನಡೆದಿದೆ. ಆದ್ರೆ, ನಿರ್ಧಾರ ಮಾತ್ರ ಸಸ್ಪೆನ್ಸ್​ ಆಗುಳಿದಿದೆ.

ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?

ಕುತೂಹಲ ಹುಟ್ಟಿಸಿದ ರಾಹುಲ್​ ದ್ರಾವಿಡ್​ ಆಯ್ಕೆ.!

ರಾಹುಲ್​ ದ್ರಾವಿಡ್​​​​ ರಾಜಸ್ಥಾನ ರಾಯಲ್ಸ್​ ತಂಡದ ಹೆಡ್​​ಕೋಚ್ ಆಗ್ತಾರೆ ಅನ್ನುವ ಹೊತ್ತಲ್ಲೆ, ದ್ರಾವಿಡ್​ಗೆ ಇಂಗ್ಲೆಂಡ್​ ತಂಡದ ಕೋಚ್​ ಆಫರ್ ಬೇರೆ ಬಂದಿದೆ. ಅಲ್ಲಿಗೆ ದ್ರಾವಿಡ್​ರನ್ನ ಹುಡುಕಿ ಬಂದ ಕೋಚ್​ ಆಫರ್​ಗಳ ಸಂಖ್ಯೆ ಎರಡಕ್ಕೇರಿದೆ. ಆದರೆ ಇದ್ರಲ್ಲಿ ದಿ ವಾಲ್​ರ ಮೊದಲ ಆಯ್ಕೆ ಯಾವುದಾಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.

ಫ್ಯಾಮಿಲಿಗೆ ಹೆಚ್ಚು ಸಮಯ ಕೊಡಬೇಕು ಅನ್ನೋ ಕಾರಣಕ್ಕೆ ಟೀಮ್​​ ಇಂಡಿಯಾ ಕೋಚ್​ ಹುದ್ದೆಯಲ್ಲಿ ದ್ರಾವಿಡ್​ ಮುಂದುವರಿದಿಲ್ಲ. ಐಪಿಎಲ್ ಕೋಚ್​ ಆದ್ರೆ 2 ತಿಂಗಳು ಮಾತ್ರ ಕೆಲಸ ಇರುತ್ತೆ. ಬಳಿಕ ಫ್ಯಾಮಿಲಿ ಜೊತೆ ಸಮಯ ಕಳೆಯಬಹುದು. ಹೀಗಾಗಿ ಇಂಗ್ಲೆಂಡ್​ ಕೋಚ್​​ ಆಗುವ ಸಾಧ್ಯತೆ ಕಮ್ಮಿ. ಆದ್ರೂ, ಅಚ್ಚರಿಯ ನಿರ್ಧಾರ ತೆಗದುಕೊಳ್ಳುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಾಹುಲ್​​​ ದ್ರಾವಿಡ್​ಗೆ ವಿದೇಶದಿಂದ ಬಿಗ್ ಆಫರ್.. ಕನ್ನಡಿಗನಿಗಾಗಿ ಈ ದೇಶದಲ್ಲಿ ಭಾರೀ ಫೈಟ್​!

https://newsfirstlive.com/wp-content/uploads/2024/08/RAHUL_DRAVID-3.jpg

Load More