2ನೇ ಬಾರಿಗೆ ಚಿನ್ನ ಪದಕಕ್ಕೆ ಮುತ್ತಿಡುವ ಕನಸು
ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮೇಲೆ ಎಲ್ಲರ ಕಣ್ಣು
ಒಟ್ಟು 32 ಅಥ್ಲೀಟ್ಗಳು ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ
ಪ್ಯಾರಿಸ್ನಲ್ಲಿ ಈ ಬಾರಿಯ ಒಲಿಂಪಿಕ್ಸ್ ನಡೆಯುತ್ತಿದೆ. ಈಗಾಗಲೇ ಭಾರತಕ್ಕೆ ಮೂರು ಕಂಚಿನ ಪದಕ ಸಿಕ್ಕಿದೆ. ಆದರೆ ಚಿನ್ನದ ಪದಕಕ್ಕೆ ಮುತ್ತಿಡುವ ಸಂಭ್ರಮಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ. ಹೀಗಾಗಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮೇಲೆ ಎಲ್ಲರ ನಿರೀಕ್ಷೆಯಿದೆ.
ನೀರಜ್ ಚೋಪ್ರಾ ಈ ಹಿಂದೆಯೂ ಒಲಿಂಪಿಕ್ಸ್ನಲ್ಲಿ ಚಾಂಪಿಯನ್ ಆಗಿ ಗುರುತಿಸಿಕೊಂಡಿದ್ದಾರೆ. ಭಾರತಕ್ಕೆ ಚಿನ್ನ ಗೆಲ್ಲುವ ಮೂಲಕ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದವರಿವರು. ಮಾತ್ರವಲ್ಲದೆ, ಏಷ್ಯನ್ ಗೇಮ್ಸ್, ಡೈಮಂಡ್ ಲೀಗ್, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೂ ಗೆದ್ದ ಪರಾಕ್ರಮಿ.
ಚಿನ್ನ ಗೆಲುವ ಕನಸು
ಸದ್ಯ ಭಾರತೀಯರ ಕಣ್ಣು ನೀರಜ್ ಚೋಪ್ರಾ ಅವರ ಮೇಲಿದೆ. ಚಿನ್ನ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಿದೆ. ಆದರೆ ಕಣದಲ್ಲಿ ಹಲವಾರು ಸ್ಪರ್ಧಿಗಳಿದ್ದು, ಸಾಕಷ್ಟು ಸವಾಲುಗಳು ಇವೆ. ಮಾಹಿತಿ ಪ್ರಕಾರ, 2 ಗುಂಪುಗಳಲ್ಲಿ ಒಟ್ಟು 32 ಅಥ್ಲೀಟ್ಗಳು ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಒಂದು ವೇಳೆ ನೀರಜ್ ಬಿ ಗುಂಪಿನಲ್ಲಿ ಸ್ಥಾನ ಪಡೆದರೆ, ಮತ್ತೋರ್ವ ಕಿಶೋರ್ ಜೆನಾ ಅವರು ಎ ಗ್ರೂಪ್ನಲ್ಲಿರಲಿದ್ದಾರೆ.
ನೀರಜ್ಗೆ ಪೈಪೋಟಿ ನೀಡುವ ಸ್ಪರ್ಧಿಗಳು
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನೀರಜ್ಗೆ ಪ್ರಬಲ ಪೈಪೋಟಿ ನೀಡುವ ಆರು ಕ್ರೀಡಾಪಟುಗಳಿದ್ದಾರೆ. ಅವರೆಲ್ಲರು ಉತ್ತಮ ವೈಯಕ್ತಿಕ ದಾಖಲೆಗಳನ್ನು ಹೊಂದಿದ್ದಾರೆ. ನೀರಜ್ಗೆ ಜೆಕಿಯಾದ ಜಾಕುಬ್ ವಡ್ಲೆಜ್ಚ್ ಪೈಪೋಟಿ ನೀಡಲಿದ್ದಾರೆ.
ಜಾಕುಬ್ ವಡ್ಲೆಜ್ಚ್ ಹಿಂದಿನ ಎರಡು ವರ್ಷಗಳಲ್ಲಿ ಎದುರಿಸಿದ 19 ಇವೆಂಟ್ಗಳಲ್ಲಿ ಮೊದಲ 3 ಸ್ಥಾನವನ್ನು ಪಡೆದಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ ಅಗ್ರ ಜಾವೆಲಿನ್ ಎಸೆತಗಾರರಾಗಿ ಗುರುತಿಸಿಕೊಂಡಿದ್ದಾರೆ. ಮತ್ತೋರ್ವ ಜರ್ಮನ್ನ ಮ್ಯಾಕ್ಸ್ ಡೆಹ್ನಿಂಗ್ ಕೂಡ ನೀರಜ್ಗೆ ಪೈಪೋಟಿ ನೀಡುವ ಸ್ಪರ್ಧಿಯಾಗಿದ್ದಾರೆ. ಅಚ್ಚರಿಯೆಂದರೆ ಇವರು 2024ರ ಫೆಬ್ರವರಿಯಲ್ಲಿ 90 ಮೀ ಮಾರ್ಕನ್ನು ದಾಟಿದ್ದಾರೆ. ಆದರೆ ನೀರಜ್ ಈ ದಾಖಲೆಯನ್ನು ಮಾಡಬೇಕಿದೆ.
2022ರಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 90 ಮೀಟರ್ ದಾಟಿದ್ದಾರೆ. ಸದ್ಯ ಅವರು ಗಾಯದಿಂದ ವಾಪಸ್ಸಾಗುತ್ತಿದ್ದಾರೆ.
ಆಂಡರ್ಸನ್ ಪೀಟರ್ಸ್ ಮತ್ತೊಬ್ಬ ಸ್ಪರ್ಧಿಯಾಗಿದ್ದು, 2023ರಲ್ಲಿ ಕಳಪೆ ಫಾರ್ಮ್ನಲ್ಲಿದ್ದರು. ಆದರೆ 2022ರಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. ಅಂದಹಾಗೆಯೇ ಇವರು 2 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.
ಜಾವೆಲಿನ್ ಎಸೆತ ಯಾವಾಗ?
ಆಗಸ್ಟ್ 8ರಂದು ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯರು ನೀರಜ್ ಸ್ಪರ್ಧೆಯನ್ನು ಕಾಣುವ ತವಕದಲ್ಲಿದ್ದಾರೆ. ಭಾರತೀಯರ ನಿರೀಕ್ಷೆಯಂತೆ ನೀರಜ್ ಈ ಬಾರಿಯೂ ಚಿನ್ನ ಗೆದ್ದು ಮತ್ತೊಂದು ದಾಖಲೆ ನಿರ್ಮಿಸುವಲ್ಲಿ ರೆಡಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ