newsfirstkannada.com

‘ಅನರ್ಹ ಮಾಡಿದ್ದು ಫೋಗಟ್​ ವಿರುದ್ಧ ನಡೆದ ದೊಡ್ಡ ಷಡ್ಯಂತ್ರ’- ವಿಜೇಂದ್ರ ಸಿಂಗ್ ಶಾಕಿಂಗ್ ರಿಯಾಕ್ಷನ್!

Share :

Published August 7, 2024 at 4:12pm

Update August 7, 2024 at 4:29pm

    ವಿನೇಶ್ ಪೋಗಟ್​ ಅನರ್ಹತೆಯ ವಿರುದ್ಧ ವಿಜಯೇಂದ್ರ ಸಿಂಗ್ ಕೆಂಡ!

    ‘ಈ ರೀತಿಯ ಒಂದು ನಡೆ ಒಲಿಂಪಿಕ್ಸ್ ಇತಿಹಾಸದಲ್ಲಿ ನಾವು ನೋಡಿಲ್ಲ‘

    ‘ಇದು ಭಾರತ ಹಾಗೂ ಭಾರತದ ಕುಸ್ತಿಪಟುವಿನ ವಿರುದ್ಧ ಮಹಾ ಷಡ್ಯಂತ್ರ‘

ಪ್ಯಾರಿಸ್: ಇಡೀ ದೇಶಕ್ಕೆ ದೇಶವೇ ಒಂದು ಕಾತರತೆಯನ್ನು, ಕುತೂಹಲವನ್ನು ಹೆಮ್ಮೆಯೊಂದನ್ನ ಎದೆಯಲ್ಲಿಟ್ಟುಕೊಂಡು ಕುಳಿತಿತ್ತು. ಈಗಾಗಲೇ ಮೂರು ಕಂಚಿನ ಪದಕಗಳು ಬಂದಿವೆ. ಚಿನ್ನ, ಬೆಳ್ಳಿ ಬಾಕಿಯಿದೆ. ಫೈನಲ್​ಗೆ ಲಗ್ಗೆಯಿಟ್ಟಿರುವ ಕುಸ್ತಿಪಟು ವಿನೇಶ್ ಪೋಗಟ್ ಹಾಗೂ ಜಾವಲಿನ್ ಎಸೆತಗಾರ ನೀರಜ್​ ಚೋಪ್ರಾ ಅದನ್ನು ಪೂರ್ಣಗೊಳಿಸಲಿದ್ದಾರೆ ಅನ್ನೋ ತೀವ್ರ ನಿರೀಕ್ಷೆಗಳ ತುದಿಗಾಲಲ್ಲಿ ಇಡೀ ದೇಶವೇ ನಿಂತಿತ್ತು. ಆದ್ರೆ ಇಂದು ಆಗಿದ್ದೇ ಬೇರೆ.

29 ವರ್ಷದ ವಿನೇಶ್​ ಎಂಬ ಮಹಾ ಕುಸ್ತಿ ಪ್ರವೀಣೆ, ಎದುರಾದ ಎಲ್ಲಾ ಸವಾಲುಗಳನ್ನು ಅಡ್ಡಡ್ಡ ಮಲಗಿಸಿ ಫೈನಲ್​ಗೆ ಎಂಟ್ರಿ ಪಡೆದಿದ್ದಳು. ಆದ್ರೆ 100 ರಿಂದ 150 ಗ್ರಾಮ್ ತೂಕ ಹೆಚ್ಚಾಯ್ತು ಅನ್ನೋ ಕಾರಣದಿಂದಾಗಿ ಬರಿಗೈಯಲ್ಲಿ ಪ್ಯಾರಿಸ್​ನಿಂದ ವಾಪಸ್​​​ ಬರುವಂತಾಗಿದೆ. ಇದು ಕೋಟ್ಯಾನುಕೋಟಿ ಭಾರತೀಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ನೀತಿ ನಿಯಮಗಳ ಅಡಿಯಲ್ಲಿ ಪೋಗಟ್ ಅನರ್ಹತೆ ಎಷ್ಟು ಸರಿ ಎಂದು ಈಗ ನ್ಯಾಯ ಅನ್ಯಾಯಗಳ ತಕ್ಕಡಿಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯನ್ನಿಟ್ಟು ತೂಗುತ್ತಿದ್ದಾರೆ. ಇದು ಭಾರತ ಹಾಗೂ ಭಾರತದ ಕುಸ್ತಿಪಟುವಿನ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ ಅನ್ನುತ್ತಿದ್ದಾರೆ 2008ರ ಬೀಜಿಂಗ್ ಒಲಿಂಪಿಕ್ಸ್​​ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚು ಪದಕ ಗೆದ್ದಿದ್ದ ವಿಜೇಂದ್ರ ಸಿಂಗ್​.

ಇದನ್ನೂ ಓದಿ: ‘ಹೇಳಲು ಈಗ ಏನೂ ಉಳಿದಿಲ್ಲ, ನನ್ನ ಕನಸು ಏನಾಗಿತ್ತು ಅಂದರೆ..’ ಮಹಾವೀರ್ ಫೋಗಟ್ ಕಣ್ಣೀರು

ವಿಜಯೇಂದ್ರ ಸಿಂಗ್ ಹೇಳಿದ್ದೇನು? 
ಇದು ಭಾರತ ಹಾಗೂ ವಿನೇಶ್ ಪೋಗಟ್​ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ. ಇಡೀ ರಾತ್ರಿಯೊಳಗೆ ಐದರಿಂದ ಆರು ಕೆಜಿ ತೂಕವನ್ನು ಒಬ್ಬ ಕ್ರೀಡಾಳು ಇಳಿಸುತ್ತಾನೆ. ಕೇವಲ 100 ರಿಂದ 150 ಗ್ರಾಂ ತೂಕ ದೊಡ್ಡ ವಿಷಯವಾ, ಪೋಗಟ್​ಗೆ ತೂಕ ಇಳಿಸಿಕೊಳ್ಳಲು ಒಂದು ಅವಕಾಶ ನೀಡಬೇಕಿತ್ತು. ಈ ರೀತಿಯ ಅರ್ಹತೆ ಈ ಹಿಂದೆ ಎಂದೂ ನಡೆದಿಲ್ಲ. ಇದು ಅಕ್ಷರಶಃ ಷಡ್ಯಂತ್ರ, ಯಾರಿಗೋ ನಮ್ಮ ಸಂತೋಷವನ್ನು ನೊಡುವುದು ಬೇಕಿಲ್ಲ. ಅವರಿಗೆ ಅದು ಜೀರ್ಣ ಆಗುತ್ತಿಲ್ಲ. ಹೀಗಾಗಿಯೇ ಕುಸ್ತಿಪಟುವನ್ನು ಅನರ್ಹಗೊಳಿಸುವ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ವಿಜಯೇಂದ್ರ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:ವಿನೇಶ್​ ಫೋಗಟ್ ಮುಂದಿರೋ ಆಯ್ಕೆಗಳೇನು? ಪಿಟಿ ಉಷಾ ಜೊತೆ ಪ್ರಧಾನಿ ಮೋದಿ ಚರ್ಚೆ; ಹೇಳಿದ್ದೇನು?

ಒಲಿಂಪಿಕ್ಸ್​ನಂತಹ ಕ್ರೀಡಾಕೂಟದೊಳಗೆ ಭಾಗವಹಿಸುವ ನಮ್ಮಂಥ ಕ್ರೀಡಾಪಟುಗಳಿಗೆ ಯಾವುದೇ ಕೈಬ್ರೋಹೈಡ್ರೆಟ್ಸ್ ಅಥವಾ ಪ್ರೊಟೀನ್​ನ ಅಗತ್ಯವಿಲ್ಲ. ನಾವು ಮೊದಲು ರಿಕವರಿ ಆಗಬೇಕು. ತೂಕ ನಿಯಂತ್ರಣ ಅನ್ನೋದು ಕ್ರೀಡಾಪಟುಗಳ ಬದುಕಿನಲ್ಲಿ ಮೊದಲ ಆದ್ಯತೆಯಾಗಿರುತ್ತೆ ಎಂದು ವಿಜಯೇಂದ್ರ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅನರ್ಹ ಮಾಡಿದ್ದು ಫೋಗಟ್​ ವಿರುದ್ಧ ನಡೆದ ದೊಡ್ಡ ಷಡ್ಯಂತ್ರ’- ವಿಜೇಂದ್ರ ಸಿಂಗ್ ಶಾಕಿಂಗ್ ರಿಯಾಕ್ಷನ್!

https://newsfirstlive.com/wp-content/uploads/2024/08/VIJAYENDRA-ON-PHOGAT.jpg

Load More