newsfirstkannada.com

ಪ್ಯಾರಿಸ್‌ ಒಲಿಂಪಿಕ್ಸ್‌.. ‘ಕಿಕ್‌’ ಔಟ್‌ ಆದ ಪರಾಗ್ವೆಯನ್ ಸ್ವಿಮ್ಮರ್‌; ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

Share :

Published August 7, 2024 at 6:14pm

Update August 7, 2024 at 6:15pm

    ವಿನೇಶ್ ಫೋಗಟ್ ಅನರ್ಹರಾದ ಬಳಿಕ ಮತ್ತೊಂದು ಘಟನೆ

    ಪರಾಗ್ವೆಯನ್‌ ಸ್ವಿಮ್ಮರ್ ಲುವಾನಾ ಅಲೋನ್ಸೊಗೆ ಬಿಗ್ ಶಾಕ್‌!

    ಪ್ಯಾರಿಸ್‌ನಲ್ಲಿ ಈಜುಗಾರ್ತಿ ಲುವಾನಾ ಅಲೋನ್ಸೊಗೆ ಏನಾಯ್ತು?

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಸಾಕಷ್ಟು ವಿವಾದಗಳಿಗೆ ಸುದ್ದಿಯಾಗುತ್ತಿದೆ. ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಅನರ್ಹರಾದ ಬಳಿಕ ಮತ್ತೊಂದು ವಿಲಕ್ಷಣವಾದ ಘಟನೆ ಬೆಳಕಿಗೆ ಬಂದಿದೆ. ಪರಾಗ್ವೆಯನ್‌ ದೇಶದ ಈಜುಗಾರ್ತಿ ಲುವಾನಾ ಅಲೋನ್ಸೊ ಅವರನ್ನು ಪ್ಯಾರಿಸ್‌ನಿಂದ ಕಿಕ್ ಔಟ್ ಮಾಡಲಾಗಿದೆ.

ಇದನ್ನೂ ಓದಿ: ಮೈ ಮರೆತು ಬಾಯ್​ ಫ್ರೆಂಡ್​ ಜತೆ ನೈಟ್​ ಔಟ್​ಗೆ ಹೋದ ಬ್ರೆಜಿಲ್ ಆಟಗಾರ್ತಿ; ಒಲಿಂಪಿಕ್ಸ್​​ನಿಂದಲೇ ಔಟ್..​​!​

ಪರಾಗ್ವೆಯನ್‌ ಚೆಲುವೆ, ಸ್ವಿಮ್ಮರ್ ಲುವಾನಾ ಅಲೋನ್ಸೊ ಅವರು ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ಪ್ಯಾರಿಸ್‌ಗೆ ಬಂದಿದ್ದರು. ಬಹಳ ಖುಷಿಯಾಗಿ ಫೋಟೋಗೆ ಪೋಸ್‌ ಕೊಡುತ್ತಾ ಎಲ್ಲರ ಜೊತೆ ಆನಂದದಲ್ಲಿ ಇದ್ದರು. ಆದರೆ ಪರಾಗ್ವೆಯನ್‌ ಒಲಿಂಪಿಕ್ಸ್ ಕಮಿಟಿಯೇ ಈ ಸುಂದರಿ ಇಲ್ಲಿ ಇರೋದು ಬೇಡ. ಸ್ವದೇಶಕ್ಕೆ ಈ ಕೂಡಲೇ ಹೋಗಲಿ ಎನ್ನುತ್ತಾ ಮನೆ ಕಡೆಗೆ ದಾರಿ ತೋರಿಸಿದೆ.

ಲುವಾನಾ ಅಲೋನ್ಸೊ ನೋಡೋಕೆ ಅತಿ ಸುಂದರ. ಈಕೆಯ ಸೌಂದರ್ಯವೇ ಇವಳಿಗೆ ಮುಳುವಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ಬಂದಿದ್ದ ಈ ಸ್ವಿಮ್ಮರ್‌ ಅವರನ್ನು ಸೀದಾ ಮನೆಗೆ ಕಳುಹಿಸಿದ್ದಾರೆ. ಕಾರಣ ಏನು ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ.

ಇದನ್ನೂ ಓದಿ: ಪ್ಯಾರಿಸ್​ ಒಲಿಂಪಿಕ್ಸ್​​.. ಮೈದಾನದಲ್ಲೇ ಕಿಸ್​ ಮಾಡಿಕೊಂಡ ಟೆನಿಸ್​​ ಸ್ಟಾರ್ಸ್; ಆಮೇಲೇನಾಯ್ತು?

ಈಜುಗಾರ್ತಿ ಲುವಾನಾ ಅಲೋನ್ಸೊ ಯಾವ ಮಾಡೆಲ್‌ಗೂ ಕಮ್ಮಿ ಇಲ್ಲ. ಮೈಮಾಟಕ್ಕೆ ಎಲ್ಲರೂ ಫಿದಾ ಆಗುತ್ತಿದ್ದರು. ಇದೇ ನೋಡಿ ಇವಳಿಗೆ ಮುಳುವಾಗಿದೆ. ನೀನು ತುಂಬಾ ಹಾಟ್‌. ನಿನ್ನ ಡ್ರೆಸ್‌ ಕೂಡ ಅಷ್ಟೇ ಹಾಟ್‌ ಆಗಿದೆ. ನಿನ್ನ ಯೌವ್ವನ ಹಾಗೂ ನಿನ್ನ ತುಂಡುಡುಗೆಯಿಂದ ಪ್ಯಾರಿಸ್‌ಗೆ ಬಂದಿರುವ ಇತರೆ ಕ್ರೀಡಾಪಟುಗಳು ವಿಚಲಿತರಾಗುತ್ತಿದ್ದಾರೆ. ಹೀಗಾಗಿ ನೀನು ಇಲ್ಲಿದೆ ಹೊರಟು ಹೋಗು ಎಂದು ಪರಾಗ್ವೆಯನ್‌ ಒಲಿಂಪಿಕ್ಸ್ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

View this post on Instagram

A post shared by Luana Alonso (@luanalonsom)

ಪ್ಯಾರಿಸ್‌ನಿಂದ ಹೊರಟು ಹೋಗು ಅಂತ ಹೇಳಿದ ಮೇಲೆ ಲುವಾನಾ ಅಲೋನ್ಸೊ ಸಖತ್ ಸುದ್ದಿಯಾಗಿದ್ದಾಳೆ. ಕೇವಲ ಸೆಕ್ಸಿ, ಹಾಟ್ ಬಟ್ಟೆಯಿಂದಲೇ ಲುವಾನಾ ಪ್ಯಾರಿಸ್ ಒಲಿಂಪಿಕ್ಸ್ ಬಿಟ್ಟು ಹೋಗಬೇಕಾಗಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್ ಬಿಟ್ಟು ಹೋಗಿರುವ ಲುವಾನಾ ಡಿಸ್ನಿ ಲ್ಯಾಂಡ್‌ಗೆ ತೆರಳಿದ್ದಾರೆ. ಅಲ್ಲಿಂದ ಆಕ್ರೋಶ ಹೊರ ಹಾಕಿರುವ ಲುವಾನಾ ಅಲೋನ್ಸೊ ಅವರು ನನ್ನನ್ನು ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಯಾರು ಹೊರ ಹಾಕಲಾಗಿಲ್ಲ. ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಯ ಬಳಿಕ 20 ವರ್ಷದ ಲುವಾನಾ ಅಲೋನ್ಸೊ ಅವರು ಅಂತಾರಾಷ್ಟ್ರೀಯ ಈಜು ಸ್ಪರ್ಧೆಗೆ ತನ್ನ ನಿವೃತ್ತಿ ಘೋಷಿಸಿದ್ದಾರೆ. ಇದುವರೆಗೂ ತನಗೆ ಸಹಾಯ ಮಾಡಿದವರು ಹಾಗು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಪರಾಗ್ವೆಯನ್‌ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾರಿಸ್‌ ಒಲಿಂಪಿಕ್ಸ್‌.. ‘ಕಿಕ್‌’ ಔಟ್‌ ಆದ ಪರಾಗ್ವೆಯನ್ ಸ್ವಿಮ್ಮರ್‌; ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/08/Paraguayan-Swimmer.jpg

Load More