newsfirstkannada.com

ಹೆಸರು ಹೊಟ್ಟೆ ಮಂಜು.. ಕೇಸ್​​ಗಳು 40ಕ್ಕೂ ಹೆಚ್ಚು​; ಈತನ ಬಂಧಿಸಿದ್ದೇ ಒಂದು ಸಾಹಸ..!

Share :

Published August 8, 2024 at 8:30am

Update August 8, 2024 at 9:45am

    ಐದು ಜಿಲ್ಲೆಯ ಪೊಲೀಸರಿಂದ ಹೊಟ್ಟೆ ಮಂಜುಗಾಗಿ ತೀವ್ರ ತಲಾಶ್

    ಮಂಜು ಬೈಕ್ ಟ್ರಾಕ್ ಮಾಡ್ತಿದ್ದ ಬೆಂಗಳೂರು ಟಿಎಂಸಿ ಅಧಿಕಾರಿಗಳು

    ಮನೆಯೊಂದರಲ್ಲಿ ಕಳ್ಳತನ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದ ಮಂಜು

ಬೆಂಗಳೂರು: ಬರೋಬ್ಬರಿ 40 ಕೇಸ್​ಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಹೊಟ್ಟೆ ಮಂಜು ಕೊನೆಗೂ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಈತನ ಬಂಧನದ ಬಗ್ಗೆ ತಲೆಕೆಡಿಸಿಕೊಂಡಿದ್ದ ಜಿಲ್ಲೆಯ ಬಹುತೇಕ ಪೊಲೀಸರು ಕೊನೆಗೂ ಬೆಂಗಳೂರಿನ ಸದಾಶಿವನಗರ ಟ್ರಾಫಿಕ್ ಜಂಕ್ಷನ್​ ಬಳಿ ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ‘13 ವರ್ಷದ ಹಿಂದೆಯೇ ಸತ್ತ ನನ್ನ ಗಂಡನಿಂದ ಗರ್ಭಿಣಿಯಾದೆ’- ಮಹಿಳೆ ಶಾಕಿಂಗ್​ ಹೇಳಿಕೆ

ಮಂಜೇಶ್​​ ಅಲಿಯಾಸ್​ ಹೊಟ್ಟೆ ಮಂಜು ಬಂಧಿತ ಆರೋಪಿ. ಈ ಹೊಟ್ಟೆ ಮಂಜುನನ್ನು ಸಿನಿಮೀಯ ರೀತಿಯಲ್ಲಿ ಬೈಕ್​ ಅಡ್ಡಗಟ್ಟಿದ ಪೊಲೀಸರು ಲಾಕ್​ ಮಾಡಿದ್ದಾರೆ. ಆರೋಪಿ ಮಂಜು ಚಿನ್ನಾಭರಣ ಧರಿಸಿರುವ ವೃದ್ಧೆಯರನ್ನೆ ಟಾರ್ಗೆಟ್ ಮಾಡ್ತಿದ್ದ. ಪಿಂಚಣಿ, ವೃದ್ದಾಪ್ಯಾವೇತನ, ಪೋಸ್ಟ್​ಆಫೀಸ್​ಗಳಲ್ಲಿ ಹಣ ಬರೋ ಹಾಗೆ ಮಾಡ್ತೀನಿ ಅಂತ ನಂಬಿಸ್ತಿದ್ದ. ಸರಿ ಆಯ್ತು ಅಂತ ಇವನ ಬೈಕ್​ಗೆ ಹತ್ತಿದ್ರೆ ಕಥೆ ಮುಗೀತು. ಮಾರ್ಗ ಮಧ್ಯೆದಲ್ಲಿ ಬೈಕ್​​​ ನಿಲ್ಲಿಸಿ ಒಂದು ಮಸಲತ್ತು ಮಾಡ್ತಿದ್ದ. ಚಿನ್ನಾಭರಣವನ್ನ ಬಿಚ್ಚಿ ನನ್ನ ಕೈಯಲ್ಲಿ ಕೊಡಿ ಎಂದು ನಂಬಿಸ್ತಿದ್ದ. ಕೈಗೆ ಚಿನ್ನಾಭರಣ ಸಿಕ್ಕಿದ್ದೆ ತಡ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗ್ತಿದ್ದ. ಈ ಸಂಬಂಧ ಕೊರಟಗೆರೆ, ಮಧುಗಿರಿ, ಹೆಬ್ಬೂರು, ಕೋಳಾಲ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೊಬ್ಬರಿ 40 ಕೇಸ್​ಗಳು ಈತನ ಮೇಲಿವೆ.

ಈತನ ಖತರ್ನಾಕ್ ಪ್ಲಾನ್​ ತಿಳಿದ ಪೊಲೀಸರು, ಕಳ್ಳ ಮಂಜು ಹಿಂದೆ ಬೆನ್ನಬಿದ್ದಿದ್ದರು. ಒಂದೂವರೆ ತಿಂಗಳಿಂದ ಹುಡುಕಾಡಿ ಹೈರಾಣಾಗಿದ್ರು. ಮೊನ್ನೆ ಮೊನ್ನೆ ಕೊರಟಗೆರೆ ಮನೆಯೊಂದಕ್ಕೆ ಕನ್ನ ಹಾಕಿದ್ದ ಈ ಕಳ್ಳ ಮಂಜು ಬೆಂಗಳೂರಿಗೆ ಬಂದಿದ್ದ. ಇದು ಕೊರಟಗೆರೆ ಪೊಲೀಸರಿಗೆ ಗೊತ್ತಾಗಿತ್ತು ಅಷ್ಟೇ. ಕೊರಟಗೆರೆ ಠಾಣೆ ಕ್ರೈಂ ಸಿಬ್ಬಂದಿ ದೊಡ್ಡಲಿಂಗಯ್ಯ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಸಿಗ್ನಲ್ ಬಳಿ ಪ್ರಾಣ ಪಣಕ್ಕಿಟ್ಟು ಖದೀಮನನ್ನು ರೋಚಕವಾಗಿ ಲಾಕ್ ಮಾಡಿದ್ದಾರೆ.

ಇದನ್ನೂ ಓದಿ: ‘ನಾನು ಸೋತಿದ್ದೇನೆ, ಆದರೆ..’ ನೋವಿನಲ್ಲೇ ಕುಸ್ತಿಗೆ ವಿದಾಯ.. ಫೋಗಟ್ ಭಾವುಕ ಪೋಸ್ಟ್​ನಲ್ಲಿ ಏನಿದೆ..?

ಮೊಬೈಲ್ ಟವರ್ ಲೋಕೇಷನ್ ಆಧರಿಸಿ ಬೇಟೆಗೆ ಇಳಿದಿದ್ದ ದೊಡ್ಡಲಿಂಗಯ್ಯ, ಮತ್ತಿಕೆರೆ ಕಡೆಯಿಂದ ಸದಾಶಿವನಗರ ಠಾಣೆ ಸಿಗ್ನಲ್ ಕಡೆ ಬರ್ತಿದ್ದ ಬಿಳಿ ಬಣ್ಣದ ಆಕ್ಟಿವ್ ಹೊಂಡಾ ತಡೆದಿದ್ರು. ತಪ್ಪಿಸಿಕೊಳ್ಳಲು ಯತ್ನಿಸಿದ ಮಂಜು ಕಾಲನ್ನ ಗಟ್ಟಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದ್ರು. ಆ ಬಳಿಕ ಪೊಲೀಸರು ಮತ್ತು ಸಾರ್ವಜನಿಕರು ಹಿಡಿದು ಧರ್ಮದೇಟು ಕೊಟ್ಟಿದ್ರು. ಒಟ್ಟಿನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳನನ್ನ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸೆರೆಹಿಡಿದ ಕಾನ್​ಸ್ಟೇಬಲ್​ ದೊಡ್ಡಲಿಂಗಯ್ಯನ ಕರ್ತವ್ಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಸರು ಹೊಟ್ಟೆ ಮಂಜು.. ಕೇಸ್​​ಗಳು 40ಕ್ಕೂ ಹೆಚ್ಚು​; ಈತನ ಬಂಧಿಸಿದ್ದೇ ಒಂದು ಸಾಹಸ..!

https://newsfirstlive.com/wp-content/uploads/2024/08/THIEF-1.jpg

Load More