newsfirstkannada.com

ಬರ್ತ್​​​ಡೇ ಪಾರ್ಟಿಯಲ್ಲಿ ಭರ್ಜರಿ ಡ್ಯಾನ್ಸ್; ಖ್ಯಾತ ಪೊಲೀಸ್ ಅಧಿಕಾರಿ ಸಸ್ಪೆಂಡ್.. ಆಗಿದ್ದೇನು?

Share :

Published August 10, 2024 at 6:13am

Update August 10, 2024 at 6:14am

    ವಿಡಿಯೋ ವೈರಲ್ ಆದ ಬೆನ್ನಲ್ಲೆ ಭಾರೀ ವಿರೋಧ ವ್ಯಕ್ತವಾಗಿತ್ತು

    ಗನ್ ಹಿಡಿದಿರುವ ಕುರಿತು ತನಿಖೆ ಕೈಗೊಂಡಿರುವ ಅಧಿಕಾರಿಗಳು​

    ಬರ್ತ್ ಡೇ ಪಾರ್ಟಿ ಆಯೋಜನೆ ಮಾಡಿದವರು ಯಾರು ಗೊತ್ತಾ? ​

ನವದೆಹಲಿ: ಬರ್ತ್​ ಡೇ ಪಾರ್ಟಿಯೊಂದರಲ್ಲಿ ಪಿಸ್ತೂಲ್​ ತೋರಿಸಿ ಡ್ಯಾನ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ದೀಪಕ್ ಶರ್ಮಾರನ್ನ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!

ದೆಹಲಿಯ ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಆಗಿದ್ದ ದೀಪಕ್ ಶರ್ಮಾ ಅವರು ಬರ್ತ್​​ಡೇ ಪಾರ್ಟಿಯೊಂದರಲ್ಲಿ ಗನ್​ ಹಿಡಿದುಕೊಂಡು ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಪಿಸ್ತೂಲ್​ ಹಿಡಿದ ವೇಳೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿರೋಧ ಕೇಳಿ ಬಂದ ಬೆನ್ನಲ್ಲೇ ದುರ್ವರ್ತನೆ ತೋರಿದ್ದಾರೆ ಎಂದು ಉನ್ನತ ಅಧಿಕಾರಿಗಳು ದೀಪಕ್ ಶರ್ಮಾರನ್ನ ಅಮಾನತುಗೊಳಿಸಿದ್ದಾರೆ. ಅಲ್ಲದೇ ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಪಿಸ್ತೂಲ್​ ದೀಪಕ್ ಶರ್ಮಾ ಅವರದ್ದೇ ಅಥವಾ ಇಲ್ಲವೇ ಎಂದು ಪರಿಶೀಲಿಸಲಾಗುತ್ತಿದೆ. ಈ ಕುರಿತು ತಿಹಾರ್ ಜೈಲು ಅಧಿಕಾರಿಗಳಿಗೆ ದೆಹಲಿ ಪೊಲೀಸರು ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್​ನ ಯುವ ಪ್ಲೇಯರ್​ಗೆ ಕೋಟಿ ರೂಪಾಯಿ ಅನೌನ್ಸ್​.. ವಿಡಿಯೋ ಕಾಲ್ ಮಾಡಿ ಮಾತಾಡಿದ CM

ಪೂರ್ವ ದೆಹಲಿಯಲ್ಲಿ ರಾಜಕೀಯ ನಾಯಕರೊಬ್ಬರು ಆಯೋಜಿಸಿದ್ದ ಪಾರ್ಟಿಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರ ಖಲ್ ನಾಯಕ್ ಸಿನಿಮಾದ​ ನಾಯಕ್ ನಹಿ, ಖಲ್ನಾಯಕ್ ಹೂನ್ ಮೈನ್​ ಸಾಂಗ್​ಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇವರ ಜೊತೆ ಇನ್ನಿಬ್ಬರು ಕೂಡ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈ ವೇಳೆ ದೀಪಕ್ ಶರ್ಮಾ ಅವರು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಪಿಸ್ತೂಲ್ ತೋರಿಸಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಇನ್ನು, ದೀಪಕ್ ಶರ್ಮಾ ಅವರು ತಮ್ಮ ಕಟ್ ಮಸ್ತ್​​ ಆದ ದೇಹದಿಂದ ಸಖತ್ ಫೇಮಸ್​. ಅಲ್ಲದೇ ಇವರಿಗೆ ಇನ್​ಸ್ಟಾದಲ್ಲಿ ಬರೋಬ್ಬರಿ 4.41K ಫಾಲೋವರ್ಸ್ ಇದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರ್ತ್​​​ಡೇ ಪಾರ್ಟಿಯಲ್ಲಿ ಭರ್ಜರಿ ಡ್ಯಾನ್ಸ್; ಖ್ಯಾತ ಪೊಲೀಸ್ ಅಧಿಕಾರಿ ಸಸ್ಪೆಂಡ್.. ಆಗಿದ್ದೇನು?

https://newsfirstlive.com/wp-content/uploads/2024/08/DEEPAK_SHARMA.jpg

Load More