newsfirstkannada.com

ನೇಪಾಳದ ಬಳಿಕ ಮತ್ತೊಂದು ಅವಘಡ, ನಿಯಂತ್ರಣ ತಪ್ಪಿ ಪತನಗೊಂಡ ವಿಮಾನ.. 70 ಜನ ದಹನ

Share :

Published August 10, 2024 at 6:41am

    ನಿಮಿಷದಲ್ಲೇ ಲ್ಯಾಂಡ್​ ಆಗಬೇಕಿದ್ದ ವಿಮಾನ ಪತನ

    ಜನವಸತಿ ಪ್ರದೇಶದಲ್ಲಿ ಕೆನ್ನಾಲಿಗೆಗೆ ಕರಗಿದ ವಿಮಾನ

    ನೋಡ ನೋಡ್ತಿದ್ದಂತೆ ನೆಲಕ್ಕೆ ಅಪ್ಪಳಿಸಿದ ಫ್ಲೈಟ್​! ಆಗಸಕ್ಕೆ ಚಿಮ್ಮಿದ ಹೊಗೆ

ಬ್ರೆಜಿಲ್‌ನಲ್ಲಿ ಭಾರೀ ವಿಮಾನ ಅಪಘಾತ ಸಂಭವಿಸಿದೆ. 62 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನ, ಜನವಸತಿ ಪ್ರದೇಶದ ಪಕ್ಕವೇ ಪತನ ಆಗಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ 62 ಪ್ರಯಾಣಿಕರು ಸೇರಿ 70 ಜನ ಸಾವನ್ನಪ್ಪಿದ್ದಾರೆ. ವಿಮಾನ ಪತನದ ಭೀಕರ ದೃಶ್ಯ ಜಗತ್ತನ್ನೇ ಬೆಚ್ಚಿಬೀಳಿಸಿದೆ.

ಭೀಕರ ದುರಂತ..!

ಬ್ರೆಜಿಲ್‌ನ ಸಾವೋ ಪೌಲೋದಲ್ಲಿ ವಿಮಾನ ಪತನಗೊಂಡಿದ್ದು, ಭೂಮಿಗೆ ಅಪ್ಪಳಿಸುತ್ತಲೇ ಬೆಂಕಿ ಹೊತ್ತಿಕೊಂಡಿದೆ. ವಿಮಾನ ಪತನಗೊಂಡ ಕೆಲವೇ ಸೆಕೆಂಡ್‌ಗಳಲ್ಲಿ ದಟ್ಟ ಹೊಗೆ ಎದ್ದು, ಬೆಂಕಿಯ ಕೆನ್ನಾಲಿಗೆಯಲ್ಲಿ ಕರಗಿ ಹೋಗಿದೆ. ವಿಮಾನದಲ್ಲಿದ್ದ ಎಲ್ಲಾ 70 ಜನ ಮೃತಪಟ್ಟಿದ್ದಾರೆ ಅಂತ ಗೊತ್ತಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ಈ ರಾಶಿಯವರಿಗೆ ಸಿಗಲ್ಲ ಕೆಲಸ; ಕಂಪನಿಗಳು ಇವರಿಗೆ ಜಾಬ್​ ಆಫರ್ ಮಾಡಲ್ಲ ಯಾಕೆ?

ಏರ್‌ಲೈನ್ ವೊಪಾಸ್ ಲಿನ್ಹಾಸ್ ಏರಿಯಾಸ್ ನಿರ್ವಹಿಸುತ್ತಿದ್ದ ATR-72 ವಿಮಾನವು ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊ ಪಾಲೊದಲ್ಲಿನ ಗೌರುಲ್ಹೋಸ್‌ಗೆ ತೆರಳುತ್ತಿತ್ತು. ಕೆಲವೇ ನಿಮಿಷಗಳಲ್ಲಿ ಲ್ಯಾಂಡ್​​​ ಆಗಬೇಕಿದ್ದ ವಿಮಾನ, ಸಾವೋ ಪೌಲೋ ರಾಜ್ಯದ ವಿನ್ಹೇಡೋ ಎಂಬಲ್ಲಿ ನಿಯಂತ್ರಣ ತಪ್ಪಿದೆ. ಜನವಸತಿ ಪ್ರದೇಶದ ಪಕ್ಕದಲ್ಲಿ ವಿಮಾನ ಪತನ ಆಗಿದೆ.

ಇದನ್ನೂ ಓದಿ: ಮನೀಶ್​ ಸಿಸೋಡಿಯಾಗೆ ಹೈಕೋರ್ಟ್​ ಜಾಮೀನು; ದೆಹಲಿ ಸಿಎಂ ಕೇಜ್ರಿವಾಲ್​ಗೆ ಬೇಲ್​ ಯಾವಾಗ?

ವಿಮಾನದಲ್ಲಿ 62 ಪ್ರಯಾಣಿಕರು ಹಾಗೂ 8 ವಿಮಾನದ ಸಿಬ್ಬಂದಿ ಸಾವನ್ನಪ್ಪಿದ್ದಾರೆ.. ಸ್ಥಳಕ್ಕೆ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಇಡೀ ವಿಮಾನ ಕರಕಲಾಗಿದೆ. ವಿಮಾನದ ಅವಶೇಷಗಳಿಂದ ಶವಗಳನ್ನ ಹೊರತೆಗೆಯಲಾಗಿದ್ದು, ಮೃತಪಟ್ಟವರ ಗುರುತು ಪತ್ತೆ ಹಚ್ಚಲಾಗ್ತಿದೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಆ್ಯಂಬುಲೆನ್ಸ್​ಗಳು ಕರ್ತವ್ಯ ನಿರತವಾಗಿವೆ.

ಇದನ್ನೂ ಓದಿ: ಬರ್ತ್​​​ಡೇ ಪಾರ್ಟಿಯಲ್ಲಿ ಭರ್ಜರಿ ಡ್ಯಾನ್ಸ್; ಖ್ಯಾತ ಪೊಲೀಸ್ ಅಧಿಕಾರಿ ಸಸ್ಪೆಂಡ್.. ಆಗಿದ್ದೇನು?

ಒಟ್ಟಾರೆ, ಬ್ರೆಜಿಲ್‌ನಲ್ಲಿಯೇ ಇದು ಇತ್ತೀಚೆಗೆ ಸಂಭವಿಸಿದ ಭೀಕರ ವಿಮಾನ ದುರಂತ. ವಿಮಾನ ಪತನಕ್ಕೆ ನಿಖರ ಕಾರಣ ತಿಳಿದಿಲ್ಲ. ಪ್ರಕರಣವನ್ನ ಸರ್ಕಾರವು ತನಿಖೆಗೆ ಆದೇಶಿಸಿದೆ.. ಆದ್ರೆ ವಿಮಾನ ಪತನದ ದೃಶ್ಯಗಳು ಮಾತ್ರ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

ನೇಪಾಳದಲ್ಲಿ ವಿಮಾನ ಪತನ

ಜುಲೈ 24ರಮದು ನೇಪಾಳದಲ್ಲಿ ವಿಮಾನವೊಂದು ಪತನಗೊಂಡಿತ್ತು. 19 ಜನರನ್ನು ತುಂಬಿದ್ದ ವಿಮಾನ ನೆಲಕ್ಕಪ್ಪಳಿಸಿ ಬೆಂಕಿ ಹೊತ್ತಿಕೊಂಡಿದ್ದು, ಪೈಲಟ್​ ಬಿಟ್ಟು ಉಳಿದ 18 ಜನರು ಸಜೀವ ದಹನಗೊಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಪಾಳದ ಬಳಿಕ ಮತ್ತೊಂದು ಅವಘಡ, ನಿಯಂತ್ರಣ ತಪ್ಪಿ ಪತನಗೊಂಡ ವಿಮಾನ.. 70 ಜನ ದಹನ

https://newsfirstlive.com/wp-content/uploads/2024/08/Flight-crash.jpg

Load More